PM Kisan 12th Installment News: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಕಿಸಾನ್ ಯೋಜನೆಯ 12ನೇ ಕಂತಿನ ವಿಳಂಬದ ಬಗ್ಗೆ ರೈತರಲ್ಲಿ ಹಲವು ಊಹಾಪೋಗಗಳು ಹುಟ್ಟಿಕೊಂಡಿವೆ. ಪಿಎಂ ಕಿಸಾನ್‌ನ 12 ಕಂತು ಎಲ್ಲಿ ಸಿಲುಕಿಕೊಂಡಿದೆ?  ಹಾಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್) ಸ್ಥಗಿತಗೊಂಡಿದೆಯೇ? ಪಿಎಂ ಕಿಸಾನ್ ಹಣ ಯಾವಾಗ ಬರುತ್ತದೆ? ಇತ್ಯಾದಿ ಪ್ರಶ್ನೆಗಳ ಕುರಿತು ರೈತರ ಮನದಲ್ಲಿ ಹಲವು ಊಹಪೋಹಗಳು ಉದ್ಭವಿಸಿವೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಕಂತು ಯಾವಾಗ ಬರುತ್ತದೆ ಎಂದು ರೈತರು ಸರ್ಕಾರವನ್ನು ಪ್ರಶ್ನಿಸುತ್ತಲೇ ಇದ್ದಾರೆ.


COMMERCIAL BREAK
SCROLL TO CONTINUE READING

12 ನೇ ಕಂತಿನ ಅಪ್ಡೇಟ್ ಏನು?
ಈ ಯೋಜನೆಯಡಿ ಏಪ್ರಿಲ್-ಜುಲೈನಲ್ಲಿ ಮೊದಲ ಕಂತು, ಆಗಸ್ಟ್-ನವೆಂಬರ್ನಲ್ಲಿ ಎರಡನೇ ಮತ್ತು ಡಿಸೆಂಬರ್-ಮಾರ್ಚ್ನಲ್ಲಿ ಮೂರನೇ ಕಂತು ನೀಡಲಾಗುತ್ತದೆ ಎಂಬುದು ಗಮನಾರ್ಹ. ಹಿಂದಿನ ದಾಖಲೆಗಳನ್ನು ಗಮನಿಸಿದರೆ, ಎರಡನೇ ಕಂತು ತುಂಬಾ ಮುಂಚೆಯೇ ಬಂದರೂ, ಈ ಬಾರಿ ಅದು ವಿಳಂಬವಾಗುತ್ತಿದೆ. ಈ ವಿಳಂಬದಿಂದಾಗಿ ರೈತರಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿವೆ. ಏತನ್ಮಧ್ಯೆ, ಪ್ರಧಾನಿ ಕಿಸಾನ್ ಯೋಜನೆಯಡಿ 10 ಕೋಟಿಗೂ ಹೆಚ್ಚು ರೈತರಿಗೆ ಅಕ್ಟೋಬರ್ 17 ರಂದು ರೈತರ ಖಾತೆಗೆ ಮೋದಿ ಸರ್ಕಾರ 16,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ-Amul Milk Price Hike: ಸದ್ದಿಲ್ಲದೇ ಹಾಲಿನ ದರ ಹೆಚ್ಚಿಸಿದ ಅಮುಲ್.!


ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 12 ಕೋಟಿಗೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. ಇದುವರೆಗೆ ಕೇಂದ್ರ ಸರ್ಕಾರ ಈ ಯೋಜನೆಯಡಿ 11ನೇ ಕಂತು ಬಿಡುಗಡೆ ಮಾಡಿದ್ದು, ಅಂದರೆ ರೈತರ ಖಾತೆಗೆ 22 ಸಾವಿರ ರೂ. ಬಿಡುಗಡೆಯಾಗಿವೆ. ವಾಸ್ತವದಲ್ಲಿ, ಈ ಯೋಜನೆಯಡಿಯಲ್ಲಿ, ಫಲಾನುಭವಿಗಳ ಖಾತೆಗೆ ವಾರ್ಷಿಕವಾಗಿ ರೂ 6000 ಅಂದರೆ, 2000-2000 ರ ಮೂರು ಸಮಾನ ಕಂತುಗಳಲ್ಲಿ ಹಣ ನೇರ ವರ್ಗಾವಣೆಯಾಗುತ್ತದೆ.


ಇದನ್ನೂ ಓದಿ-Top Selling MPV: ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದ 3 ಬಹು ಉದ್ದೇಶಿತ ಕಾರುಗಳು, ಮತ್ತೆ ನಂ.1 ಪಟ್ಟಕ್ಕೇರಿದೆ ಈ ಕಾರು


ರೈತರ ಮನದಲ್ಲಿ ಏಕೆ ಭಯ ಮನೆಮಾಡಿದೆ?
ಆಗಸ್ಟ್-ನವೆಂಬರ್ ಕಂತಿಗೆ 74 ದಿನಗಳು ಕಳೆದಿವೆ ಮತ್ತು ಇದುವರೆಗೆ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಯಾವುದೇ ಅಧಿಕೃತ ಅಪ್‌ಡೇಟ್ ಬಂದಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿ. ಕಳೆದ ವರ್ಷದ ಕುರಿತು ಹೇಳುವುದಾದರೆ, ಆಗಸ್ಟ್-ನವೆಂಬರ್ 2021 ರ ಕಂತು ಆಗಸ್ಟ್ 9 ರಂದು ಬಿಡುಗಡೆಯಾಗಿತ್ತು. ವಾಸ್ತವದಲ್ಲಿ ಈ ಯೋಜನೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಂಚನೆಯನ್ನು ತಡೆಯಲು, ಕೇಂದ್ರ ಸರ್ಕಾರವು EKYC ಅನ್ನು ಕಡ್ಡಾಯಗೊಳಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರಗಳು ಗ್ರಾಮದಿಂದ ಗ್ರಾಮಕ್ಕೆ ತೆರಳಿ ತನಿಖೆ ನಡೆಸುತ್ತಿದ್ದು, ಅರ್ಹರು ಮಾತ್ರ ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಹೀಗಾಗಿಯೇ 12ನೇ ಕಂತು ಬಿಡುಗಡೆಗೆ ವಿಳಂಬವಾಗುತ್ತಿದೆ ಎನ್ನಲಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.