New Bike Launch: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಹೊಚ್ಚ ಹೊಸ ಬೈಕ್, ಇಂದೇ ಬುಕ್ ಮಾಡಿ

Keeway SR 125: Keeway SR 125 ನ ಟೆಸ್ಟ್ ರೈಡ್ ಈ ವಾರ ಅಥವಾ ಮುಂದಿನ ವಾರದಿಂದ ಆರಂಭಗೊಳ್ಳಲಿದೆ. ಇನ್ನೊಂದೆಡೆ ಈ ಬೈಕ್ ನ ವಿತರಣೆಯು ಕೂಡ ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ.  

Written by - Nitin Tabib | Last Updated : Oct 13, 2022, 04:53 PM IST
  • SR 125 ಐದು ತಿಂಗಳೊಳಗೆ ಭಾರತದಲ್ಲಿ ಕಿವೇಯ ಏಳನೇ ಕೊಡುಗೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ.
  • SR 125 ಸ್ಪೋರ್ಟ್ಸ್ ರೆಟ್ರೊ ವಿನ್ಯಾಸ ಭಾಷೆಯಲ್ಲಿ ಪ್ರವೇಶ ಮಟ್ಟದ ಮೋಟಾರ್‌ಸೈಕಲ್ ಆಗಿರಲಿದೆ
  • ಮತ್ತು ಇದು ಮೂರು ಬಣ್ಣದ ಶೇಡ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ
New Bike Launch: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಹೊಚ್ಚ ಹೊಸ ಬೈಕ್, ಇಂದೇ ಬುಕ್ ಮಾಡಿ title=
Keeway New Bike Launch

Keeway SR 125 Launch: ಕೀವೇ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ತನ್ನ ಹೊಚ್ಚ ಹೊಸ SR 125 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 1.19 ಲಕ್ಷದ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ, ಇದಕ್ಕಾಗಿ ಬುಕ್ಕಿಂಗ್ ತೆರೆಯಲಾಗಿದೆ. ಕಂಪನಿಯ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಮೋಟಾರ್‌ಸೈಕಲ್ ಅನ್ನು ನೀವು ಬುಕ್ ಮಾಡಬಹುದು ಅಥವಾ ಹತ್ತಿರದ ಕೀವೇ-ಬೇನಾಲಿ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ರೂ 1,000 ಟೋಕನ್ ಮೊತ್ತದೊಂದಿಗೆ ಇದನ್ನು ನೀವು ಬುಕ್ ಮಾಡಬಹುದು. ಆದಾಗ್ಯೂ, ನೀವು ಅದನ್ನು ಬುಕ್ ಮಾಡುವ ಮೊದಲು, ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಬೈಕ್‌ಗಳು ಅದರೊಂದಿಗೆ ಸ್ಪರ್ಧೆ ನಡೆಸಲಿವೆ ಎಂಬುದು ಇಲ್ಲಿ ಗಮನಾರ್ಹ. ಈ ಬೈಕ್ ಗಳಲ್ಲಿ  ಬಜಾಜ್ ಪಲ್ಸರ್ NS125, TVS ರೈಡರ್ 125 ಮತ್ತು ಹೋಂಡಾ SP125 ಶಾಮೀಲಾಗಿವೆ.

ಇದನ್ನೂ ಓದಿ-PM Kisan : ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ..!

Keeway SR 125 ನ ಪರೀಕ್ಷಾರ್ಥ ಸವಾರಿ ಈ ವಾರ ಅಥವಾ ಮುಂದಿನ ವಾರದಿಂದ ಆರಂಭಗೊಳ್ಳಲಿದೆ. ಇದೇ ವೇಳೆ ಈ ಬೈಕ್ ನ ವಿತರಣೆಯು ಈ ತಿಂಗಳ ಅಂತ್ಯದ ವೇಳೆಗೆ ಶುರುವಾಗಲಿದೆ. SR 125 ಐದು ತಿಂಗಳೊಳಗೆ ಭಾರತದಲ್ಲಿ ಕಿವೇಯ ಏಳನೇ ಕೊಡುಗೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ. SR 125 ಸ್ಪೋರ್ಟ್ಸ್ ರೆಟ್ರೊ ವಿನ್ಯಾಸ ಭಾಷೆಯಲ್ಲಿ ಪ್ರವೇಶ ಮಟ್ಟದ ಮೋಟಾರ್‌ಸೈಕಲ್ ಅನ್ನು ಇರಿಸಲಾಗಿದೆ ಮತ್ತು ಇದು ಮೂರು ಬಣ್ಣದ ಶೇಡ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ - ಹೊಳಪು ಬಿಳಿ, ಹೊಳಪು ಕಪ್ಪು ಮತ್ತು ಹೊಳಪು ಕೆಂಪು.

ಇದನ್ನೂ ಓದಿ-Diwali Bonus: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಸಿಗಲಿದೆ 1 ತಿಂಗಳ ವೇತನ ಬೋನಸ್

ಕೀವೇ SR 125 125cc, ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 9,000 RPM ನಲ್ಲಿ 9.5 bhp ಪವರ್ ಮತ್ತು 7,500 RPM ನಲ್ಲಿ 8.2 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಮೋಟಾರ್‌ಸೈಕಲ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಮತ್ತು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಅನ್ನು ನೀಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News