ನವದೆಹಲಿ : PM kisan Man dhan Yojna : ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan Samman Nidhi) ಫಲಾನುಭವಿಗಳಿಗೆ ಸಿಹಿಸುದ್ದಿ ಇದೆ. ಈಗ ಈ ಯೋಜನೆಯಡಿ ರೈತರು ಪ್ರತಿ ತಿಂಗಳು 3000 ರೂಪಾಯಿಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಯಾವುದೇ ದಾಖಲೆಯನ್ನು ಒದಗಿಸಬೇಕಾಗಿಲ್ಲ. ಇಲ್ಲಿಯವರೆಗೆ, ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ (PM Kisan) ಅಡಿಯಲ್ಲಿ 2000 ರೂಪಾಯಿಗಳ ಮೂರು ಕಂತು ಅಂದರೆ 6,೦೦೦ ರೂ ಗಳನ್ನು ಪಡೆಯುತ್ತಿದ್ದರು. ಆದರೆ ಈಗ ಈ ಯೋಜನೆಯಡಿ ವಾರ್ಷಿಕವಾಗಿ 36000 ರೂ. ಪಡೆಯಬಹುದು. 


COMMERCIAL BREAK
SCROLL TO CONTINUE READING

ವಾರ್ಷಿಕವಾಗಿ ಸಿಗಲಿದೆ 36000 ರೂ. :
ಪಿಎಂ ಕಿಸಾನ್ ಮನ್ ಧನ್ ಯೋಜನೆ (PM kisan Man dhan Yojna Benefits) ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಡಿ, 60 ವರ್ಷ ವಯಸ್ಸಿನ ನಂತರ, ರೈತರಿಗೆ ಪ್ರತಿ ತಿಂಗಳು 3,000 ರೂ. ಪಿಂಚಣಿ (Pension) ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 36,000 ರೂ. ರೈತರಿಗೆ ಸಿಗಲಿದೆ. ಮೋದಿ ಸರ್ಕಾರವು ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಮೊತ್ತವನ್ನು ನೀಡುತ್ತದೆ.


ಇದನ್ನೂ ಓದಿ :  Royal Enfield ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಈ ಬೈಕ್


ಅಗತ್ಯವಾದ ದಾಖಲೆಗಳು :
ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯ ಲಾಭ ಪಡೆಯಲು, ನಿಮಗೆ ಕೆಲವು ದಾಖಲೆಗಳು ಬೇಕಾಗುತ್ತವೆ. ಆಧಾರ್ ಕಾರ್ಡ್(Aadhaar card), ಬ್ಯಾಂಕ್ ಖಾತೆ ವಿವರಗಳ ಅಗತ್ಯವಿರುತ್ತದೆ. ಆದರೆ ನೀವು ಪಿಎಂ ಕಿಸಾನ್ (PM Kisan Benefits) ಪ್ರಯೋಜನವನ್ನು ಪಡೆಯುತ್ತಿದ್ದರೆ, ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.


ಈ ಯೋಜನೆಯ ಲಾಭವನ್ನು ಯಾರು ಪಡೆಯುತ್ತಾರೆ?
1. 18 ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು. 
2. ಇದಕ್ಕಾಗಿ, ಸಾಗುವಳಿ ಭೂಮಿ ಗರಿಷ್ಠ 2 ಹೆಕ್ಟೇರ್ ವರೆಗೆ ಇರಬೇಕು.
3. ಯೋಜನೆಯ ಲಾಭ ಪಡೆಯಲು ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳಾಗಿರಬೇಕು. ರೈತರ ವಯಸ್ಸಿಗೆ ಅನುಗುಣವಾಗಿ  55 ರೂ. ಯಿಂದ  200 ರೂ. ವರೆಗೆ ಮಾಸಿಕ ಕೊಡುಗೆಯನ್ನು ನೀಡಬೇಕಾಗುತ್ತದೆ.
4. 18 ವರ್ಷ ವಯಸ್ಸಿನಲ್ಲಿ ಸೇರುವ ರೈತರಿಗೆ ಮಾಸಿಕ 55 ರೂ.ಗಳನ್ನು ಪಾವತಿಸಲಾಗುವುದು.
5. ನೀವು 30 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ, 110 ರೂ. ಠೇವಣಿ ಮಾಡಬೇಕಾಗುತ್ತದೆ.
6. ನೀವು 40 ನೇ ವಯಸ್ಸಿನಲ್ಲಿ ಸೇರಿಕೊಂಡರೆ, ಪ್ರತಿ ತಿಂಗಳು 200 ರೂ. ಠೇವಣಿ ಮಾಡಬೇಕಾಗುತ್ತದೆ.


ಇದನ್ನೂ ಓದಿ :  ಸರ್ಕಾರದ ಸೂಪರ್‌ಹಿಟ್ ಯೋಜನೆ: 1 ರೂ. ಹಾಕಿ 15 ಲಕ್ಷ ಪಡೆಯಿರಿ, ತಕ್ಷಣವೇ ಅರ್ಜಿ ಸಲ್ಲಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.