ಸರ್ಕಾರದ ಸೂಪರ್‌ಹಿಟ್ ಯೋಜನೆ: 1 ರೂ. ಹಾಕಿ 15 ಲಕ್ಷ ಪಡೆಯಿರಿ, ತಕ್ಷಣವೇ ಅರ್ಜಿ ಸಲ್ಲಿಸಿ

ಸಣ್ಣ ಉಳಿತಾಯ ಯೋಜನೆಗಳ ಪಟ್ಟಿಯಲ್ಲಿ ಸುಕನ್ಯಾ ಉತ್ತಮ ಬಡ್ಡಿದರದ ಯೋಜನೆಯಾಗಿದೆ.

Written by - Puttaraj K Alur | Last Updated : Nov 28, 2021, 06:13 AM IST
  • ಸುಕನ್ಯಾ ಸಮೃದ್ಧಿ ಯೋಜನೆ (SSY) ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದೆ
  • ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಕೇವಲ 250 ರೂ.ನಲ್ಲಿ ತೆರೆಯಬಹುದಾಗಿದೆ
  • ನಿಮ್ಮ ಮಗಳ ಭವಿಷ್ಯದ ಬಗ್ಗೆ ನೀವು ಚಿಂತಿತರಾಗಿದ್ದರೆ ಇಂದೇ ಈ ಯೋಜನೆಯ ಲಾಭ ಪಡೆದುಕೊಳ್ಳಿ
ಸರ್ಕಾರದ ಸೂಪರ್‌ಹಿಟ್ ಯೋಜನೆ: 1 ರೂ. ಹಾಕಿ 15 ಲಕ್ಷ ಪಡೆಯಿರಿ, ತಕ್ಷಣವೇ ಅರ್ಜಿ ಸಲ್ಲಿಸಿ

ನವದೆಹಲಿ: ನೀವು ಕಡಿಮೆ ರಿಸ್ಕ್ ನಲ್ಲಿ ಹೆಚ್ಚಿನ ಲಾಭವನ್ನು ಬಯಸಿದರೆ, ಕೇಂದ್ರ ಸರ್ಕಾರವು ನಿಮಗಾಗಿ ಒಂದು ಉತ್ತಮ ಯೋಜನೆಯನ್ನು ತಂದಿದೆ. ಅದುವೆ ಸುಕನ್ಯಾ ಸಮೃದ್ಧಿ ಯೋಜನೆ ಅಂದರೆ SSY. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಮಗಳ ಭವಿಷ್ಯ ರೂಪಿಸಲು ಹಾಗೂ ಆದಾಯ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯಡಿ ನೀವು ದಿನಕ್ಕೆ ಕೇವಲ 1 ರೂ. ಉಳಿಸುವ ಮೂಲಕ ಲಾಭವನ್ನು ಪಡೆಯಬಹುದು. ಹಾಗಾದರೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಿರಿ

ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಇದನ್ನು ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ(Beti Bachao Beti Padhao)ಯಡಿ ಪ್ರಾರಂಭಿಸಲಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಪಟ್ಟಿಯಲ್ಲಿ ಸುಕನ್ಯಾ ಉತ್ತಮ ಬಡ್ಡಿದರದ ಯೋಜನೆಯಾಗಿದೆ. ಈ ಖಾತೆಯನ್ನು ಕೇವಲ 250 ರೂ.ನಲ್ಲಿ ತೆರೆಯಬಹುದಾಗಿದೆ. ಇದರರ್ಥ ನೀವು ದಿನಕ್ಕೆ 1 ರೂ. ಉಳಿಸಿದರೂ, ಈ ಯೋಜನೆಯ ಲಾಭವನ್ನು ಪಡೆಯಬಹುದು. ಯಾವುದೇ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಒಂದೇ ಹಣಕಾಸು ವರ್ಷದಲ್ಲಿ ಅಥವಾ ಹಲವು ಬಾರಿ SSY ಖಾತೆಯಲ್ಲಿ 1.5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಸಾಧ್ಯವಿಲ್ಲವೆಂಬುದನ್ನು ಕೂಡ ತಿಳಿದುಕೊಳ್ಳಬೇಕು.

ಇದನ್ನೂ ಓದಿ: Indian Railways : ಟಿಕೆಟ್ ಇಲ್ಲದೆಯೂ ರೈಲು ಪ್ರಯಾಣ ಸಾಧ್ಯ , ತಿಳಿಯಿರಿ ಏನು ಹೇಳುತ್ತದೆ ರೈಲ್ವೆಯ ಹೊಸ ನಿಯಮ

ಶೇ.7.6ರ ದರದಲ್ಲಿ ಬಡ್ಡಿ

ಈ ಯೋಜನೆಯಡಿ (Sukanya Samriddhi Yojana) ನಿಮಗೆ ಶೇ.7.6ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಅದು ಕೂಡ ಆದಾಯ ತೆರಿಗೆ ವಿನಾಯಿತಿಯೊಂದಿಗೆ. ಇದಕ್ಕೂ ಮೊದಲು ಶೇ.9.2ರವರೆಗಿನ ಬಡ್ಡಿಯನ್ನೂ ನೀಡಲಾಗುತ್ತಿತ್ತು. ಇಷ್ಟೇ ಅಲ್ಲ 8 ವರ್ಷದ ನಂತರ ನಿಮ್ಮ ಮಗಳ ಉನ್ನತ ಶಿಕ್ಷಣದ ವೆಚ್ಚಕ್ಕಾಗಿ ಶೇ.50 ರಷ್ಟು ಹಣವನ್ನು ಹಿಂಪಡೆಯಬಹುದು. ಪ್ರಸ್ತುತ ಆದಾಯ ತೆರಿಗೆ ವಿನಾಯಿತಿಯೊಂದಿಗೆ ಶೇ.7.6ರಷ್ಟು ದರದಲ್ಲಿ SSY ನಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮಗಳ ಭವಿಷ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ಇಂದೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಖಾತೆ ತೆರೆಯುವುದು ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆ(SSY)ಯಡಿ ಖಾತೆಯನ್ನು ಅಂಚೆ ಕಚೇರಿ ಅಥವಾ ವಾಣಿಜ್ಯ ಶಾಖೆಯ ಯಾವುದೇ ಅಧಿಕೃತ ಶಾಖೆಯಲ್ಲಿ ತೆರೆಯಬಹುದು. ಇದರಲ್ಲಿ ಹೆಣ್ಣು ಮಗು ಜನಿಸಿದ ನಂತರ ಕನಿಷ್ಠ 250 ರೂ. ಠೇವಣಿಯೊಂದಿಗೆ 10 ವರ್ಷಕ್ಕಿಂತ ಮೊದಲು ಖಾತೆ ತೆರೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿ ಮಾಡಬಹುದಾದ ಗರಿಷ್ಠ ಮೊತ್ತ 1.5 ಲಕ್ಷ ರೂ. ಇದೆ. ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದ ನಂತರ ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷದ ನಂತರ ಅವಳು ಮದುವೆಯಾಗುವವರೆಗೆ ಹೆಣ್ಣು ಮಗುವನ್ನು ಓದಿಸಬಹುದು. ಇದು ನಿಮ್ಮ ಮಗಳ ಭವಿಷ್ಯವನ್ನು ರೂಪಿಸುವ ಯೋಜನೆ ಎಂದರೂ ತಪ್ಪಾಗುವುದಿಲ್ಲ.  

ಇದನ್ನೂ ಓದಿ: Yes Bank ಗೆ ಭಾರಿ ಹಿನ್ನಡೆ: ತನಿಖೆಯಲ್ಲಿ ಮಧ್ಯಪ್ರವೇಶಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News