ನವದೆಹಲಿ: PM Kisan Samman Nidhi Scheme Latest Updates- ರೈತರಿಗಾಗಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Samman Nidhi Scheme) ಇಂದಿನಿಂದ ಅಂದರೆ ಆಗಸ್ಟ್ 9 ರಿಂದ ಸರ್ಕಾರವು ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು  (Narendra Modi) ಇಂದು ಮಧ್ಯಾಹ್ನ 12:30 ಕ್ಕೆ 9 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ದೇಶದ ಬೆನ್ನೆಲುಬಾಗಿರುವ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು, ಕೇಂದ್ರ ಸರ್ಕಾರವು ಪ್ರತಿ ವರ್ಷ ರೈತರಿಗೆ 6,000 ರೂ.ಗಳ ಆರ್ಥಿಕ ನೆರವನ್ನು ನೀಡುತ್ತದೆ. ಪ್ರತಿ ವಿತ್ತೀಯ ವರ್ಷದಲ್ಲಿ 2000 ರೂ.ಗಳ ಮೂರು ಕಂತುಗಳನ್ನು (PM Kisan Yojana Benefits) ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಇದುವರೆಗೆ 8 ಕಂತುಗಳ ಹಣ ರೈತರ ಖಾತೆ ಸೇರಿದೆ. ಈಗ ಮುಂದಿನ ಅಂದರೆ 9 ನೇ ಕಂತಿನ ಹಣ ಇಂದಿನಿಂದ ರೈತರ ಖಾತೆಗೆ ಬರಲಿದೆ. ಈ ಮೊದಲು 8 ನೇ ಕಂತನ್ನು ಮೇ 14 ರಂದು ಬಿಡುಗಡೆ ಮಾಡಲಾಯಿತು. 


ಇದನ್ನೂ ಓದಿ- PM-KISAN Scheme: ನೀವೂ ಈ ತಪ್ಪು ಮಾಡಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ, ಇಲ್ಲವಾದರೆ ಖಾತೆ ಸೇರುವುದಿಲ್ಲ ಹಣ


ಈ ರೀತಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ:
1. ನಿಮ್ಮ ಖಾತೆಗೆ ಈ ಕಂತಿನ ಹಣ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಾಳು ಮೊದಲು ನೀವು ವೆಬ್‌ಸೈಟ್‌ಗೆ ಭೇಟಿ ನೀಡಿ
2. ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್  (Farmers Corner) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಬಳಿಕ ಫಲಾನುಭವಿ ಸ್ಟೇಟಸ್ (Beneficiary Status) ಆಯ್ಕೆಯನ್ನು ಆರಿಸಿ
4. ಬಳಿಕ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ.
5. ಈ ಪುಟದಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಖಾತೆಗೆ ಹಣ ಬರುತ್ತದೆಯೋ? ಇಲ್ಲವೋ? ಅಥವಾ ಎಲ್ಲಿ ಅಡಚಣೆ ಉಂಟಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.


ಇದನ್ನೂ ಓದಿ-  PM Kisan Tractor Yojana: Good News - ಟ್ರ್ಯಾಕ್ಟರ್ ಖರೀದಿಗಾಗಿ ಮೋದಿ ಸರ್ಕಾರ ನೀಡುತ್ತಿದೆ ಶೇ.50 ರಷ್ಟು ಸಬ್ಸಿಡಿ


ಯೋಜನೆ 2019 ರಲ್ಲಿ ಆರಂಭವಾಯಿತು:
ಪ್ರಧಾನಿ ನರೇಂದ್ರ ಮೋದಿ ಸರ್ಕಾರ (Narendra Modi Govt) ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM kisan Samman Nidhi Yojana) 24 ಫೆಬ್ರವರಿ 2019 ರಂದು ಆರಂಭಿಸಿತು. ಈ ಯೋಜನೆಯ ಉದ್ದೇಶ ದೇಶದ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವುದು. ಇದರ ಅಡಿಯಲ್ಲಿ ರೈತರಿಗೆ ವರ್ಷಕ್ಕೆ ಮೂರು ಬಾರಿ ಎರಡು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಯೋಜನೆಯ 1 ನೇ ಕಂತನ್ನು ರೈತರ ಖಾತೆಗೆ ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ, ಎರಡನೇ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಮತ್ತು ಮೂರನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ನೀಡಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ