PM Kisan Samman Nidhi: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಿಗೆ ಸಂಬಂಧಿಸಿದಂತೆ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಸರ್ಕಾರ ಈ ಯೋಜನೆಯ ಲಾಭಾರ್ಥಿಗಳ ಇ-ಕೆವೈಸಿ ಪ್ರಕ್ರಿಯೆಯನ್ನು ನಡೆಸುತ್ತಿದೆ. ಈ 11ನೇ ಕಂತು ಖಾತೆಗೆ ತಡವಾಗಿ ಬರಲಿದೆಯಾ? ಎಂಬ ಪ್ರಶ್ನೆ ಇದೀಗ ರೈತರನ್ನು ಕಾಡುತ್ತಿದೆ. ಅಷ್ಟೇ ಅಲ್ಲ 11 ಮತ್ತು 12ನೇ ಕಂತು ಒಟ್ಟಿಗೆ ಬರಲಿದೆಯಾ ಎಂಬ ಆತಂಕ ರೈತರನ್ನು ಸತಾಯಿಸುತ್ತಿದೆ. ಆದರೆ, ಇದೀಗ ಬಿಹಾರ್ ಸರ್ಕಾರ ಈ ಕುರಿತಂತ ಸ್ಪಷ್ಟನೆ ನೀಡಿದೆ.

COMMERCIAL BREAK
SCROLL TO CONTINUE READING

11 ನೇ ಕಂತಿನ ಮೇಲೆ ಯಾವುದೇ ಪ್ರಭಾವ ಇಲ್ಲ 
ಬಿಹಾರದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಸುಮಾರು 85 ಲಕ್ಷ ಲಾಭಾರ್ಥಿಗಳಿದ್ದಾರೆ. ಇವರಲ್ಲಿ 36 ಲಕ್ಷ ರೈತರ e-ಕೆವೈಸಿ ಮಾಡಲಾಗಿಲ್ಲ. ಆದರೆ, ಇ-ಕೆವೈಸಿ ಕಾರಣ ಯಾವುದೇ ಲಾಭಾರ್ಥಿ ಅಥವಾ ರೈತನಿಗೆ ಹಣ  ಸಿಗುವಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ವ್ಯತ್ಯಯ ಉಂಟಾಗುವ ಸಾಧ್ಯತೆ ಇಲ್ಲ ಎಂದು ಬಿಹಾರ ಸರ್ಕಾರ ಸ್ಪಷ್ಟಪಡಿಸಿದೆ. ಹೀಗಿರುವಾಗ ಇತರ ರಾಜ್ಯಗಳ ರೈತರಿಗೂ ಕೂಡ ಇ-ಕೆವೈಸಿ ಹೊರತಾಗಿ ಖಾತೆಗೆ 11ನೇ ಕಂತಿನ ಹಣ ಬರಲಿದ್ದು, ಇ-ಕೆವೈಸಿ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎನ್ನಲಾಗಿದೆ.


ಇದನ್ನೂ ಓದಿ-Gold Price Today: ಅಕ್ಷಯ ತೃತಿಯಾಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ, ತಕ್ಷಣ ಖರೀದಿಸಿ

ರಾಜ್ಯ ಸರ್ಕಾರಗಳಿಗೆ ಪಟ್ಟಿ ರವಾನಿಸಿದ ಕೃಷಿ ಸಚಿವಾಲಯ 
ಕೇಂದ್ರ ಸರ್ಕಾರದ ಹಸಿರು ನಿಶಾನೆ ಬಳಿಕ ಬಿಹಾರದ ಸುಮಾರು 83 ಲಕ್ಷ ಲಾಭಾರ್ಥಿಗಳ ಪಟ್ಟಿಯನ್ನು ರಾಜ್ಯದ ಕೃಷಿ ಇಲಾಖೆ,  ಕೇಂದ್ರ ಕೃಷಿ ಸಚಿವಾಲಯಕ್ಕೆ ಹಳುಹಿಸಿದೆ. ಬಿಹಾರದ ಕೃಷಿ ವಿಭಾಗದ ಸುಮಾರು 1647 ಕೋಟಿ ರೂ. ಪಾವತಿಗಾಗಿ ಈ ಪ್ರಸ್ತಾವನೆಯನ್ನು ಕಳುಹಿಸಿದೆ. ಈಗಾಗಲೇ ಈ ಯೋಜನೆಯ 10ನೇ ಕಂತಿನ ಹಣವನ್ನು ಕಳೆದ ಜನವರಿ ತಿಂಗಳಿನಲ್ಲಿ ರೈತರ ಖಾತೆಗೆ  ವರ್ಗಾಯಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. 


ಇದನ್ನೂ ಓದಿ -ದುಬಾರಿ ಪೆಟ್ರೋಲ್ ನಿಂದ ಶೀಘ್ರವೇ ಪರಿಹಾರ ಸಿಗಲಿದೆ, ಅಗ್ಗದ ಇಂಧನ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್

ಎರಡನೇ ವಾರದಲ್ಲಿ ಬರಲಿದೆ 11ನೇ ಕಂತು
ಮಾಧ್ಯಮ ವರದಿಗಳ ಪ್ರಕಾರ 11ನೇ ಕಂತಿನ ಹಣ ಮೇ 14-15ರ ಆಸುಪಾಸಿನಲ್ಲಿ ರೈತರ ಖಾತೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೊಂದೆಡೆ ಮೇ 31,  ಇ-ಕೆವೈಸಿ ಮಾಡಿಸಿಕೊಳ್ಳಲು ಅಂತಿಮ ದಿನಾಂಕವಾಗಿರಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.