PM Kisan Samman Nidhi Yojana: ಕೇಂದ್ರ ಸರ್ಕಾರ ಈಗಾಗಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಒಂಬತ್ತನೇ ಕಂತು ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ ಲಕ್ಷಾಂತರ ರೈತರ ಖಾತೆಗಳಿಗೆ ಹಣ ಸೇರಿದೆ. ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ, ಇದುವರೆಗೆ 12 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹೋಗಿದೆ. ಆದರೆ, ಈ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿಲ್ಲವಾದರೆ, ನೀವು ತಕ್ಷಣ ಕೇಂದ್ರ ಕೃಷಿ ಸಚಿವಾಲಯಕ್ಕೆ (Ministry of Agriculture) ದೂರು ನೀಡಬಹುದು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

2000 ರೂ. ಇನ್ನೂ ಕೂಡ ನಿಮ್ಮ ಖಾತೆ ಸೇರಿಲ್ಲದಿದ್ದಲ್ಲಿ ಎಲ್ಲಿ ಮತ್ತು ಹೇಗೆ ದೂರು ನೀಡಬೇಕು ?
ನೀವೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದು, ಇನ್ನೂ ಕೂಡ ನಿಮ್ಮ ಖಾತೆಗೆ ಈ ಕಂತಿನ ಹಣ ಬಂದಿಲ್ಲದಿದ್ದರೆ, ಮೊದಲು ನೀವು ನಿಮ್ಮ ಪ್ರದೇಶದ ಅಕೌಂಟೆಂಟ್ ಮತ್ತು ಕೃಷಿ ಅಧಿಕಾರಿಯನ್ನು ಸಂಪರ್ಕಿಸಬೇಕು. ಈ ಜನರು ನಿಮ್ಮ ಮಾತನ್ನು ಕೇಳದಿದ್ದರೆ ಅಥವಾ ಈ ಹಣವು ಖಾತೆಯಲ್ಲಿ ಬರದಿದ್ದರೆ, ನೀವು ಅದಕ್ಕೆ ಸಂಬಂಧಿಸಿದ ಸಹಾಯವಾಣಿಗೆ ಕರೆ ಮಾಡಬಹುದು. ಈ PM-KISAN ಸಹಾಯ ಕೇಂದ್ರ (PM-KISAN Help Desk) ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ.


ಇದಲ್ಲದೇ, ನೀವು pmkisan-ict@gov.in ಇ-ಮೇಲ್ ನಲ್ಲಿ ಕೂಡ ಸಂಪರ್ಕಿಸಬಹುದು. ಇದಲ್ಲದೆ ನೀವು 011-23381092 ನೇರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಕೂಡ ದೂರು ಸಲ್ಲಿಸಬಹುದು.


ಇದನ್ನೂ ಓದಿ- Train Ticket Cancellation: ರೈಲು ಟಿಕೆಟ್ ರದ್ದಾದರೆ ಎಷ್ಟು ಹಣ ಕಡಿತಗೊಳಿಸಲಾಗುತ್ತೆ? ನಿಯಮ ಏನು ಹೇಳುತ್ತೆ ಗೊತ್ತಾ!


ಕೃಷಿ ಸಚಿವಾಲಯಕ್ಕೆ ದೂರು ನೀಡಿ :
ಪಿಎಂ ಕಿಸಾನ್ ಯೋಜನೆಯ ಲಾಭವು ಪ್ರತಿಯೊಬ್ಬ ಅರ್ಹ ರೈತರಿಗೆ ತಲುಪಬೇಕು ಎಂಬುದು ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದೆ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತ ಪಡೆಯಬೇಕು ಎಂದು ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಿದೆ.  ಕೃಷಿ ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi Scheme) ಹಣವು ರೈತರ ಬ್ಯಾಂಕ್ ಖಾತೆಗೆ ತಲುಪುತ್ತಿಲ್ಲವಾದರೆ, ಅದನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ರೈತರ ಖಾತೆಗೆ ಹಣ ತಲುಪದಿದ್ದರೆ ಅಥವಾ ಯಾವುದೇ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಅದನ್ನು ಯಾವುದೇ ಕೂಡಲೇ ಸರಿಪಡಿಸಲಾಗುತ್ತದೆ. 


ನೀವು ಇಲ್ಲಿ ಕೂಡ ಸಂಪರ್ಕಿಸಬಹುದು:
ಮೇಲೆ ತಿಳಿಸಿದ ಮಾರ್ಗಗಳಲ್ಲದೆ ಈ ಯೋಜನೆಯ ಸ್ಥಿತಿಯನ್ನು ನೀವೇ ಪರಿಶೀಲಿಸಬಹುದು ಮತ್ತು ಅರ್ಜಿ ಸಲ್ಲಿಸಬಹುದು. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ಯೋಜನೆಯ ರೈತ ಕಲ್ಯಾಣ ವಿಭಾಗದಲ್ಲಿ (Farmer’s Welfare Section)  ನೀವು ಸಂಪರ್ಕಿಸಬಹುದು. ಇಲ್ಲಿನ ಫೋನ್ ಸಂಖ್ಯೆ 011-23382401, ಇ-ಮೇಲ್ ಐಡಿ ( pmkisan-hqrs@gov.in ).


ಇದನ್ನೂ ಓದಿ- ಕೇವಲ Aadhaar ತೋರಿಸಿ ತಕ್ಷಣ ಪಡೆದುಕೊಳ್ಳಬಹುದು LPG ಸಂಪರ್ಕ, ಸಿಗಲಿದೆ ಸಬ್ಸಿಡಿ ಲಾಭ ಕೂಡಾ


ಕೃಷಿ ಸಚಿವಾಲಯ ಸಹಾಯವಾಣಿ ಸಂಖ್ಯೆಗಳು  (Agriculture ministry helpline numbers) :
* PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
* PM ಕಿಸಾನ್ ಸಹಾಯವಾಣಿ ಸಂಖ್ಯೆ: 155261
* PM ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011—23381092, 23382401
* PM ಕಿಸಾನ್ ಹೊಸ ಸಹಾಯವಾಣಿ: 011-24300606
* PM ಕಿಸಾನ್ ಮತ್ತೊಂದು ಸಹಾಯವಾಣಿ ಹೊಂದಿದೆ: 0120-6025109


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.