PM Kisan Samman Yojana: ಈ ತಪ್ಪುಗಳಿಂದಾಗಿ ಹಲವು ರೈತರಿಗೆ ಪಿಎಂ ಕಿಸಾನ್ 10ನೇ ಕಂತು ಕೈತಪ್ಪಬಹುದು!
PM Kisan Samman Yojana: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ.ಗಳ ಲಾಭವನ್ನು ನೀಡಲಾಗುತ್ತದೆ. ಅರ್ಹ ರೈತರು ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ಈ ಯೋಜನೆಯ ಲಾಭ ಪಡೆಯಬಹುದು.
PM Kisan Samman Yojana: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Samman Yojana) ಸಣ್ಣ ಮತ್ತು ಮಧ್ಯಮ ರೈತರಿಗೆ ಕೇಂದ್ರ ಸರಕಾರ 2000 ರೂ. ಕಂತಿನ ರೂಪದಲ್ಲಿ ವಾರ್ಷಿಕ 6000 ರೂ. ಸಹಾಯಧನವನ್ನು ನೀಡುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 10 ನೇ ಕಂತು ಜನವರಿ 1 ರಿಂದ ರೈತರ ಖಾತೆ ಸೇರಲಿದೆ. ಆದರೆ, ಹಲವು ಬಾರಿ ಸಣ್ಣಪುಟ್ಟ ತಪ್ಪುಗಳಿಂದ ಕೆಲ ರೈತರ ಅರ್ಜಿ ರದ್ದಾಗುತ್ತದೆ. ಇಲ್ಲವೇ ಅವರ ಖಾತೆಗೆ ಹಣ ಸೇರಿರುವುದಿಲ್ಲ. ನಿಮ್ಮ ಅರ್ಜಿಯನ್ನು ತಿರಸ್ಕರಿಸದಂತೆ ಮತ್ತು ನೀವು ಸರ್ಕಾರದಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಯಾವ ತಪ್ಪುಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದಿರುವುದು ಕೂಡ ಅವಶ್ಯಕ.
ವಾಸ್ತವವಾಗಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Yojana) ಅಡಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರವು ಪ್ರತಿ ವರ್ಷ 6000 ರೂ.ಗಳ ಸಹಾಯಧನವನ್ನು ನೀಡುತ್ತದೆ. ಇದುವರೆಗೆ ಈ ಯೋಜನೆಯಡಿ 9 ಕಂತುಗಳು ರೈತರ ಖಾತೆಗೆ ಬಂದಿದೆ. ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರ ಸರ್ಕಾರವು ವಾರ್ಷಿಕ 3 ಕಂತುಗಳಲ್ಲಿ (ತಲಾ 2000 ರೂ.) 6,000 ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡುತ್ತದೆ. ಆದರೆ, ರೈತರು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಈ ಯೋಜನೆಯಡಿ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈತಪ್ಪಬಹುದು.
ಇದನ್ನೂ ಓದಿ- ಕೈ-ಕಾಲುಗಳಿಲ್ಲದೇ ವಾಹನ ಓಡಿಸುವ ವ್ಯಕ್ತಿಗೆ ಆನಂದ್ ಮಹೀಂದ್ರಾ ಕೊಟ್ರು ಭರ್ಜರಿ ಆಫರ್.!
ಹಲವು ಬಾರಿ ರೈತರು (Farmers) ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿ ತುಂಬುವಾಗ ಮಾಡುವ ಕೆಲವು ತಪ್ಪುಗಳಿಂದಾಗಿ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದೇ ಇರಬಹುದು. ಆದ್ದರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿಯನ್ನು ಸಲ್ಲಿಸುವಾಗ ಎಚ್ಚರಿಕೆಯಿಂದ ಅದನ್ನು ಭರ್ತಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಇದಲ್ಲದೇ ಐಎಫ್‌ಎಸ್‌ಸಿ ಕೋಡ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕ್‌ನ ಶಾಖೆ ಹೆಸರು ಬರೆಯುವಲ್ಲಿ ತಪ್ಪು ಕಂಡುಬಂದರೂ ನಿಮ್ಮ ಕಂತು ಖಾತೆಗೆ ಬರುವುದಿಲ್ಲ. ಇದಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು, ರೈತರು ತಮ್ಮ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿರುವುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ- ಜನವರಿ 1 ರಿಂದ ಹೆಚ್ಚಾಗಲಿದೆ ಎಟಿಎಂ withdrawal ಶುಲ್ಕ: ನೀವು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯಿರಿ
ತಪ್ಪುಗಳನ್ನು ಹೇಗೆ ಸರಿಪಡಿಸುವುದು?
ಒಂದೊಮ್ಮೆ ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ವೇಳೆ ಏನಾದರು ತಪ್ಪು ಮಾಡಿದ್ದರೆ ಅದನ್ನು ನೀವು ಸರಿಪಡಿಸಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
>> ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ಏನಾದರೂ ತಪ್ಪಿದ್ದರೆ ತಿದ್ದುಪಡಿಗಾಗಿ pmkisan.gov.in ಗೆ ಹೋಗಿ
>> ಈಗ ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ಕ್ಲಿಕ್ ಮಾಡಿ
>> ಆಧಾರ್ ಎಡಿಟ್ ಆಯ್ಕೆ ಕಾಣಿಸುತ್ತದೆ, ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನೀವು ಸರಿಪಡಿಸಬಹುದು
>> ಬ್ಯಾಂಕ್ ಖಾತೆಯಲ್ಲಿ ತಪ್ಪು ಕಂಡುಬಂದಲ್ಲಿ ಕೃಷಿ ಇಲಾಖೆ ಕಚೇರಿ ಹಾಗೂ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ನೀವು ಅದನ್ನು ಸರಿಪಡಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.