ನವದೆಹಲಿ: ಎರಡು ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯೊಬ್ಬರು, ಲೋಡ್ ಸಾಗಿಸಲು ಕ್ಯಾರಿಯರ್ ಹೊಂದಿರುವ ಮಾರ್ಪಡಿಸಿದ ದ್ವಿಚಕ್ರ ವಾಹನವನ್ನು ಓಡಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನಸೆಳೆದಿದೆ. ಇದನ್ನು ನೋಡಿದ ನಂತರ ಉದ್ಯಮಿ ಆನಂದ್ ಮಹೀಂದ್ರ (Anand Mahindra) ಸೋಮವಾರ ಆ ವ್ಯಕ್ತಿಗೆ ವಿಶೇಷವಾದ ಆಫರ್ ಒಂದನ್ನು ನೀಡಿದ್ದಾರೆ.
ವಿಶೇಷ ಚೇತನ ವ್ಯಕ್ತಿಯೋರ್ವ ಮನೆಯ ಜವಾಬ್ದಾರಿ ಹೊತ್ತುಕೊಂಡು ವಿಭಿನ್ನವಾಗಿ ವಿನ್ಯಾಸ ಮಾಡಿರುವ ಬೈಕ್ ಸಹಾಯದಿಂದ ಕೂಲಿ ಕೆಲಸ ಮಾಡುತ್ತಾರೆ. ಅದರಿಂದ ಬರುವ ಹಣದಿಂದ ಹೆಂಡತಿ, ಇಬ್ಬರು ಮಕ್ಕಳು ಹಾಗೂ ವಯಸ್ಸಾದ ತಂದೆಯನ್ನ ನೋಡಿಕೊಳ್ಳುತ್ತಿದ್ದಾರೆ. ಕೆಲ ದಾರಿಹೋಕರು ಈತನ ಪ್ರಶ್ನೆಗೊಳಪಡಿಸಿದಾಗ ಇವರು ತಮ್ಮ ಜೀವನದ ಕಥೆಯನ್ನು ಹೇಳಿಕೊಂಡಿದ್ದಾರೆ.
ಜೊತೆಗೆ ತಾನು ಯಾವ ರೀತಿಯಾಗಿ ವಾಹನ ತಯಾರು ಮಾಡಿದ್ದಾರೆಂಬುದನ್ನ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಇದರ ವಿಡಿಯೋ ತುಣುಕೊಂದನ್ನ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಟ್ವಿಟರ್ ನಲ್ಲಿ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸ್ಕೂಟರ್ನ್ನ ಸರಕು ವಾಹನದ ರೀತಿಯಾಗಿ ಪರಿವರ್ತನೆ ಮಾಡಿಕೊಂಡಿರುವ ವ್ಯಕ್ತಿ ಎಕ್ಸಲರೇಟ್ ಹಾಗೂ ಬ್ರೇಕ್ಗಳನ್ನ ತಮ್ಮ ಭುಜದ ಭಾಗದಿಂದ ನಿರ್ವಹಣೆ ಮಾಡುತ್ತಾರೆ.
Received this on my timeline today. Don’t know how old it is or where it’s from, but I’m awestruck by this gentleman who’s not just faced his disabilities but is GRATEFUL for what he has. Ram, can @Mahindralog_MLL make him a Business Associate for last mile delivery? pic.twitter.com/w3d63wEtvk
— anand mahindra (@anandmahindra) December 27, 2021
ಟ್ವಿಟರ್‌ನಲ್ಲಿ ತನ್ನ 8.6 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳೊಂದಿಗೆ ಸೋಮವಾರ ವ್ಯಾಪಾರದ ಉದ್ಯಮಿ ಆನಂದ ಮಹಿಂದ್ರಾ ಹಂಚಿಕೊಂಡ ಈ ವಿಡಿಯೋ ಇದುವರೆಗೆ 30.5K ಲೈಕ್‌ಗಳನ್ನು ಪಡೆದಿದೆ.
ಉದ್ಯಮಿ ಆನಂದ್ ಮಹೀಂದ್ರ ತಮ್ಮ ಟ್ವಿಟರ್ ನಲ್ಲಿ ಅಕೌಂಟ್ನಲ್ಲಿ "ಇದು ಯಾರು ಎಂದು ನನಗೆ ತಿಳಿದಿಲ್ಲ. ಎಷ್ಟು ಹಳೆಯ ವಿಡಿಯೋ ಎಂಬುದು ಸಹ ಗೊತ್ತಿಲ್ಲ. ಈ ವ್ಯಕ್ತಿಯ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಇವರನ್ನು ಮಹೀಂದ್ರ ಲಾಜಿಸ್ಟಿಕ್ ಸಂಸ್ಥೆಯಲ್ಲಿ ಬ್ಯುಸಿನೆಸ್ ಅಸೋಸಿಯೇಟ್ ಮಾಡಿ ಎಂದು ಹೇಳಿದ್ದಾರೆ. ಈ ಮೂಲಕ ವಿಶೇಷ ಚೇತನ ವ್ಯಕ್ತಿಗೆ ಬಹುದೊಡ್ಡ ಉದ್ಯೋಗದ ಆಫರ್ ಅನ್ನು ಆನಂದ್ ಮಹಿಂದ್ರಾ ನೀಡಿದ್ದಾರೆ.
ಇದನ್ನೂ ಓದಿ: WATCH:ಮಕ್ಕಳೊಂದಿಗೆ ಖೋ ಖೋ ಆಡಿದ ಶಿವಣ್ಣ.. ಅಪರೂಪದ ವಿಡಿಯೋ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.