ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 11 ನೇ ಕಂತಿನ 2000 ರೂಪಾಯಿಗಳನ್ನುಈಗಾಗಲೇ ವರ್ಗಾಯಿಸಲಾಗಿದೆ. ಶೀಘ್ರದಲ್ಲಿಯೇ 12ನೇ ಕಂತಿನ 2000 ರೂಪಾಯಿ ರೈತರ ಖಾತೆಗೆ ವರ್ಗಾವಣೆಯಾಗಲಿದೆ. ಈ ಮಧ್ಯೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ. ಈ ಬದಲಾವಣೆ 12 ಕೋಟಿಗೂ ಹೆಚ್ಚು ನೋಂದಾಯಿತ ರೈತರ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಈ ಬದಲಾವಣೆ ಜಾರಿಗೆ ತರುವ ಮೂಲಕ ರೈತರಿಂದ ದೊಡ್ಡ ಸೌಲಭ್ಯವನ್ನೇ ಕಸಿದುಕೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್‌ನಲ್ಲಿ ದೊಡ್ಡ ಬದಲಾವಣೆ :
ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಈ ಬದಲಾವಣೆಯ ನಂತರ ಇದೀಗ ರೈತ ಪೋರ್ಟಲ್‌ಗೆ ಭೇಟಿ ನೀಡಲು ಮತ್ತು ಆಧಾರ್ ಸಂಖ್ಯೆಯಿಂದ ತನ್ನ  ಸ್ಟೇಟಸ್ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಈಗ ರೈತರು ತಮ್ಮ ಸ್ಟೇಟಸ್ ಪರಿಶೀಲಿಸಲು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.  ಈ ಹಿಂದೆ ರೈತರು ತಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದಿತ್ತು. ಇದಾದ ನಂತರ ಸ್ಟೇಟಸ್ ಪರಿಶೀಲನೆಗೆ ಮೊಬೈಲ್ ನಂಬರ್ ಅಲ್ಲ, ಆಧಾರ್ ನಂಬರ್ ಅಗತ್ಯ ಎಂಬ ನಿಯಮವನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಈಗ  ಹೊಸ ನಿಯಮದ ಪ್ರಕಾರ, ರೈತರು ಆಧಾರ್ ಸಂಖ್ಯೆಯಿಂದ ಸ್ಟೇಟಸ್ ನೋಡುವುದು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : Airtel Payments Bank: ಹಳ್ಳಿಗಳಿಗೆ ಬರಲಿವೆ 1.5 ಲಕ್ಷ ಮೈಕ್ರೋ ಎಟಿಎಂಗಳು!


 ಹೇಗಿರಲಿದೆ ಪ್ರಕ್ರಿಯೆ : 
1. ಇದಕ್ಕಾಗಿ ಮೊದಲು pmkisan.gov.in ಗೆ  ಭೇಟಿ ನೀಡಿ 
2. ಎಡಭಾಗದಲ್ಲಿರುವ ಸಣ್ಣ ಬಾಕ್ಸ್‌ನಲ್ಲಿ Beneficiary Status ಮೇಲೆ ಕ್ಲಿಕ್ ಮಾಡಿ.
3. ಈಗ ನಿಮ್ಮ ಮುಂದೆ ಒಂದು ಪೇಜ್ ತೆರೆದುಕೊಳ್ಳುತ್ತದೆ.
4. ನಿಮ್ಮ ನೋಂದಣಿ ಸಂಖ್ಯೆಯನ್ನು ಇಲ್ಲಿ ನಮೂದಿಸುವ ಮೂಲಕ ಸ್ಟೇಟಸ್  ಪರಿಶೀಲಿಸಿ.
5. ನೋಂದಣಿ ಸಂಖ್ಯೆ ತಿಳಿದಿಲ್ಲದಿದ್ದರೆ, ನೋಂದಣಿ ಸಂಖ್ಯೆಯನ್ನು ತಿಳಿಯಲು Know Your Registration Number ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
6. ಈಗ ಇದರಲ್ಲಿ ನಿಮ್ಮ PM ಕಿಸಾನ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
7.  ಅದರ ನಂತರ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು Get Mobile OTP ಲಿಕ್ ಮಾಡಿ.
8.ನಿಮ್ಮ ಫೋನ್ ಗೆ ಬಂದ  OTPಯನ್ನು ಕೊಟ್ಟಿರುವ ಬಾಕ್ಸ್‌ನಲ್ಲಿ  ನಮೂದಿಸಿ, Get Details ಮೇಲೆ ಕ್ಲಿಕ್ ಮಾಡಿ.
9. ಈಗ ನಿಮ್ಮ ನೋಂದಣಿ ಸಂಖ್ಯೆ ಮತ್ತು ಹೆಸರು ಕಾಣಿಸುತ್ತದೆ. 


ಏನಿದು ಪಿಎಂ ಕಿಸಾನ್ ಯೋಜನೆ?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಪ್ರತಿ ವರ್ಷ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಇದನ್ನು ತಲಾ  2,000 ರೂ.ಯಂತೆ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ.  ಇದರಡಿ ಇಲ್ಲಿಯವರೆಗೆ 11 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ. ನಿಮ್ಮ ಖಾತೆಗೆ ಇನ್ನೂ ಹಣವನ್ನು ವರ್ಗಾಯಿಸದಿದ್ದರೆ, ಮೊದಲು ನಿಮ್ಮ  ಸ್ಟೇಟಸ್  ಮತ್ತು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಿ.  


ಇದನ್ನೂ ಓದಿ : Arecanut Today Price: ರಾಜ್ಯದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.