BBK 11 : ಬಿಗ್‌ಬಾಸ್‌ ಸೀಸನ್‌ 11ರ ಮೊದಲ ಸ್ಪರ್ಧಿ ಇವರೇ ನೋಡಿ..! ʻಸತ್ಯʼ ನರಕಕ್ಕೆ ಹೋಗ್ತಾರಾ.. ಇಲ್ಲಾ ಸ್ವರ್ಗಕ್ಕಾ..?

Bigg Boss Kannada Season 11 Contestants : ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್‌ ಆರಂಭವಾಗಿದೆ.. ಈ ಭಾರಿ ಬಿಗ್‌ಹೌಸ್‌ ಒಳಗೆ ಯಾರ್‌ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇದೀಗ ಈ ಸೀಸನ್‌ನ ಮೊದಲ ಸ್ಪರ್ಧಿ ಯಾರು ಎನ್ನುವ ಗುಟ್ಟು ರಟ್ಟಾಗಿದೆ.. ಹಾಗಿದ್ರೆ... ದೊಡ್ಮನೆ ಸೇರುವ ಮೊದಲ ಆ ಸ್ಪರ್ಧಿ ಯಾರು..? ಬನ್ನಿ ನೋಡೋಣ..
 

1 /6

ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್‌ ಓಪನಿಂಗ್ ಇದೇ ಸೆಪ್ಟೆಂಬರ್ 29 ಅಂದ್ರೆ ನಾಳೆ ಭಾನುವಾರ ನಡೆಯಲಿದೆ. ಬಿಗ್ ಬಾಸ್ ಆರಂಭಕ್ಕೆ ಕೇವಲ ಒಂದು ರಾತ್ರಿ ಮಾತ್ರ ಬಾಕಿ ಇದೆ. ಇದರ ನಡುವೆ ಇದೀಗ ಬಿಗ್‌ ಬಾಸ್‌ ಮೊದಲ ಸ್ಪರ್ಧಿಯ ಹೆಸರು ರಿವೀಲ್‌ ಆಗಿದೆ.  

2 /6

ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ (Bigg Boss Kannada Season 11) ಸೇರುವ ನಿರೀಕ್ಷೆ ಇದೆ. ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿ ತಿಳಿಸಿತು. ಇದೀಗ ಮೊದಲ ಸ್ಪರ್ಧಿಯ ಹೆಸರನ್ನು ಬಹಿರಂಗ ಗೊಳಿಸಲಾಗಿದೆ..

3 /6

ಯಸ್‌.. ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ (BBK 11)ಮೊದಲ ಸ್ಪರ್ಧಿಯಾಗಿ ʻಸತ್ಯʼ ಧಾರಾವಾಹಿ ನಟಿ ಗೌತಮಿ ಜಾಧವ್ ಎಂಟ್ರಿ ಕೊಡಲಿದ್ದಾರೆ. ಗೌತಮಿ ಸತ್ಯ ಸಿರೀಲ್‌ ಮೂಲಕ ಕರುನಾಡ ಜನರ ಮನಗೆದ್ದಿದ್ದರು. ಇದೀಗ ಸ್ಪರ್ಧಿಯಾಗಿ ದೊಡ್ಮನೆ ಸೇರಲಿದ್ದಾರೆ.

4 /6

ಗೌತಮಿ ಜಾಧವ್ (Gouthami Jadav) 'ನಾಗಪಂಚಮಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಸತ್ಯ ಧಾರಾವಾಹಿಯಲ್ಲಿ ತಮ್ಮ ರಗಡ್ ಲುಕ್ ಮೂಲಕ ಜನಪ್ರಿಯತೆ ಪಡೆದರು.    

5 /6

'ಮಾಯಾ ಬಜಾರ್', 'ಆಪರೇಷನ್ ಅಲಮೇಲಮ್ಮ' ಸೇರಿದಂತೆ ಹಲವು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಸಿನಿಮಾಟೋಗ್ರಫರ್ ಅಭಿಷೇಕ್ ಕಾಸರಗೂಡು ಅವರ ಜೊತೆ ಗೌತಮಿ ವಿವಾಹವಾಗಿದ್ದಾರೆ.  

6 /6

ಸಧ್ಯ ಗೌತಮಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ (BBK 11 contestants) ಮೊದಲ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ನಟನೆ ಮೂಲಕ ಪ್ರೇಕ್ಷಕರ ಗಮನಸೆಳೆದಿದ್ದ ಚೆಲುವೆ ಇನ್ನು ಮುಂದೆ ದೊಡ್ಮನೆಯಲ್ಲಿ ಯಾವ ರೀತಿ ಆಟ ಆಡ್ತಾರೆ ಎನ್ನುವುದನ್ನ ಕಾಯ್ತು ನೋಡಬೇಕಿದೆ..