PM Kisan: ಪಿಎಂ ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಈ ಕೆಲಸ ಮಾಡದಿದ್ರೆ ನಿಮಗೆ ಹಣ ಸಿಗಲ್ಲ!
ಪಿಎಂ ಕಿಸಾನ್ ಇತ್ತೀಚಿನ ಅಪ್ಡೇಟ್: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ ಅಡಿಯಲ್ಲಿ12ನೇ ಕಂತಿಗೂ ಮುನ್ನ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳ ಬಗ್ಗೆ ನೀವು ತಿಳಿದಿರಬೇಕು, ಇಲ್ಲದಿದ್ದರೆ ನಿಮಗೆ ಹಣ ಸಿಗದಿರಬಹುದು.
ನವದೆಹಲಿ: 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯಡಿ ಪ್ರಧಾನಿ ಮೋದಿ ಸರ್ಕಾರವು ರೈತರ ಖಾತೆಗೆ ಇದುವರೆಗೆ 11 ಕಂತುಗಳ ಹಣ ಪಾವತಿಸಿದೆ. ಇದೀಗ 12ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಆದರೆ, ಈ ಯೋಜನೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1. ಹಿಡುವಳಿ ಮಿತಿ ಅವಧಿ ಮೀರಿದೆ
‘ಪ್ರಧಾನ ಮಂತ್ರಿ ಕಿಸಾನ್ ಯೋಜನೆ’ಯ ಆರಂಭದಲ್ಲಿ 2 ಹೆಕ್ಟೇರ್ ಅಥವಾ 5 ಎಕರೆ ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ರೈತರನ್ನು ಮಾತ್ರ ಅರ್ಹರು ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಮೋದಿ ಸರ್ಕಾರ ಈ ನಿಯಮ ತೆಗೆದುಹಾಕಿದ್ದು, 14.5 ಕೋಟಿ ರೈತರಿಗೆ ಇದರ ಲಾಭ ಸಿಗಲಿದೆ.
2. ಆಧಾರ್ ಕಾರ್ಡ್ ಅಗತ್ಯ
ಆಧಾರ್ ಹೊಂದಿರುವ ರೈತರು ಮಾತ್ರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯ ಪ್ರಯೋಜನ ಪಡೆಯುತ್ತಾರೆ. ಆಧಾರ್ ಇಲ್ಲದೆ ನೀವು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಸರ್ಕಾರ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.
ಇದನ್ನೂ ಓದಿ: Indian Railways: ರೈಲ್ವೆ ಇಲಾಖೆಯ ಪ್ರಮುಖ ಹುದ್ದೆಗಳಿಗೆ ‘EQ’ ಪರೀಕ್ಷೆ ಕಡ್ಡಾಯ..!
3. ನೋಂದಣಿ ಸೌಲಭ್ಯ
ಗರಿಷ್ಠ ಸಂಖ್ಯೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯುವ ಉದ್ದೇಶದಿಂದ ಮೋದಿ ಸರ್ಕಾರವು ಲೆಕ್ಕಪರಿಶೋಧಕರು, ಕಾಪೌಂಡರ್ ಮತ್ತು ಕೃಷಿ ಅಧಿಕಾರಿಗಳ ಭೇಟಿ ಮಾಡುವುದನ್ನು ತಪ್ಪಿಸಿದೆ. ಈಗ ರೈತರು ಸುಲಭವಾಗಿ ಮನೆಯಲ್ಲಿ ಕುಳಿತು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ನೀವು ಖಾತಾ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿದ್ದರೆ, pmkisan.nic.inನಲ್ಲಿ ಫಾರ್ಮರ್ಸ್ ಕಾರ್ನರ್‌ಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಲ್ಲದೆ ಯಾವುದೇ ತಪ್ಪು ಇದ್ದರೆ ಅದನ್ನು ನೀವೇ ಸರಿಪಡಿಸಬಹುದು.
4. ನಿಮ್ಮ Status ತಿಳಿಯಿರಿ
ನೋಂದಣಿಯ ಬಳಿಕ ನಿಮ್ಮ Statusಅನ್ನು ನೀವೇ ಪರಿಶೀಲಿಸಬಹುದೆಂದು ಸರ್ಕಾರವು ರೈತರ ಅನುಕೂಲಕ್ಕಾಗಿ ದೊಡ್ಡ ಬದಲಾವಣೆ ಮಾಡಿದೆ. ಈಗ ನೀವು ನಿಮ್ಮ ಸ್ವಂತ ಅಪ್ಲಿಕೇಶನ್ Statusನ್ನು ಪರಿಶೀಲಿಸಬಹುದು, ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಕಂತು ಬಂದಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ರೈತರು ತಮ್ಮ ಮೊಬೈಲ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸುವ ಮೂಲಕ Status ಮಾಹಿತಿ ಪಡೆಯಬಹುದು.
5. ಕಿಸಾನ್ ಕ್ರೆಡಿಟ್ ಕಾರ್ಡ್
ಈಗ ಈ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಕೂಡ ಸೇರಿಸಲಾಗಿದೆ. ಪಿಎಂ ಕಿಸಾನ್‌ನ ಫಲಾನುಭವಿಗಳು ಸುಲಭವಾಗಿ ಕೆಸಿಸಿ ಮಾಡಿಸಿಕೊಳ್ಳಬಹುದು. ಕೆಸಿಸಿಯಲ್ಲಿ ಶೇ.4ರ ದರದಲ್ಲಿ ರೈತರು 3 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು.
ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಫಲಾನುಭಾವಿಗಳಿಗೆ ಬಿಗ್ ಶಾಕ್, ಇನ್ಮುಂದೆ ಈ ಮಹತ್ವದ ಸೌಕರ್ಯ ರೈತರಿಗೆ ಸಿಗಲ್ಲ
6) ಗೌರವಧನ ಯೋಜನೆಯ ಲಾಭ
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ ಪಡೆಯುವ ರೈತರು ಇನ್ನು ಮುಂದೆ ಪಿಎಂ ಕಿಸಾನ್ ಮನ್ಧನ್ ಯೋಜನೆಗೆ ಯಾವುದೇ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ಈ ಯೋಜನೆಯಡಿ ಪಿಎಂ-ಕಿಸಾನ್ ಯೋಜನೆಯಿಂದ ಪಡೆದ ಪ್ರಯೋಜನಗಳಿಂದ ರೈತರು ನೇರವಾಗಿ ಕೊಡುಗೆ ನೀಡಲು ಆಯ್ಕೆ ಮಾಡಬಹುದು. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ಎಲ್ಲ ರೀತಿಯಲ್ಲೂ ಅನುಕೂಲ ಕಲ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
7. ಪಡಿತರ ಚೀಟಿ ಕಡ್ಡಾಯ
ಇದೀಗ ಕಿಸಾನ್ ಯೋಜನೆಯಡಿ ಫಲಾನುಭವಿಗಳು ಪಡಿತರ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ. ಅಂದರೆ ಈಗ ಯಾರು ತಮ್ಮ ಅರ್ಜಿಯಲ್ಲಿ ಪಡಿತರ ಚೀಟಿಯ ವಿವರಗಳನ್ನು ನಮೂದಿಸುತ್ತಾರೋ ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ.
8. KYC ಕಡ್ಡಾಯಗೊಳಿಸಲಾಗಿದೆ
ಈಗ ‘ಪ್ರಧಾನ ಮಂತ್ರಿ ಕಿಸಾನ್ ಯೋಜನೆ’ ಅಡಿಯಲ್ಲಿ KYC ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. KYC ಮಾಡಲು ಜುಲೈ 31 ಕೊನೆಯ ದಿನಾಂಕವಾಗಿದೆ, ಆದ್ದರಿಂದ ನೀವು ಇನ್ನೂ KYC ಮಾಡಿಲ್ಲದಿದ್ದರೆ ತಕ್ಷಣ ಅದನ್ನು ಮಾಡಿಸಿರಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ