PM Kisan Yojana Latest Update : ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡುತ್ತಿದೆ. ಈ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ. ಕಂತುಗಳಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದುವರೆಗೆ ಈ ಯೋಜನೆಯ 11 ಕಂತುಗಳು ರೈತರ ಖಾತೆಗೆ ಜಮಾ ಮಾಡಲಾಗಿದೆ. ಪ್ರಸ್ತುತ 12ನೇ ಕಂತಿನ ಹಣಕ್ಕೆ ರೈತರು ಕಾಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

31 ಮೇ 2022 ರಂದು ಪ್ರಧಾನಿ ಮೋದಿ ಅವರು 11 ನೇ ಕಂತಿನ 2000 ರೂ. ಹಣವನ್ನ 10 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವರ್ಗಾಯಿಸಿದರು. ಈಗ, 12 ನೇ ಕಂತಿಗೆ ಹಣವನ್ನು 1 ಸೆಪ್ಟೆಂಬರ್ 2022 ರ ನಂತರವೇ ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಹಣಕಾಸು ವರ್ಷದಲ್ಲಿ ಮೊದಲ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬರುತ್ತದೆ. ಎರಡನೆಯದು ಆಗಸ್ಟ್ ಮತ್ತು ನವೆಂಬರ್ ನಡುವೆ ಬರುತ್ತದೆ. 12ನೇ ಕಂತು ಸೆಪ್ಟೆಂಬರ್ 1ರಿಂದ 10ರೊಳಗೆ ಬರಬಹುದು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.


ಇದನ್ನೂ ಓದಿ : Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ


ಮತ್ತೊಂದೆಡೆ, ಸರ್ಕಾರದಿಂದ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಈ ಬಾರಿ ಇ-ಕೆವೈಸಿ ದಿನಾಂಕವನ್ನು ಸರ್ಕಾರವು ವಿಸ್ತರಿಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ನೀವು ಇಂದು ಮತ್ತು ನಾಳೆ ಇ-ವೈಸಿ ಮಾಡದಿದ್ದರೆ, ಮುಂದೆ ನಿಮಗೆ ಪಿಎಂ ಕಿಸಾನ್ ನಿಧಿಯ ಪ್ರಯೋಜನ ಸಿಗುವುದಿಲ್ಲ.


ಇ-ಕೆವೈಸಿಯನ್ನು ಹೀಗೆ ಮಾಡಿ


- ಇ-ಕೆವೈಸಿ ಮಾಡಲು, ಮೊದಲು PM Kisan Yojana ವೆಬ್‌ಸೈಟ್ pmkisan.gov.in ಗೆ ಹೋಗಿ.
- ಇಲ್ಲಿ ರೈತರ ಮೂಲೆಯಲ್ಲಿ, ಮೌಸ್ ಓವರ್ ಮತ್ತು ಇ-ಕೆವೈಸಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ತೆರೆಯುವ ಹೊಸ ವೆಬ್ ಪುಟದಲ್ಲಿ, ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕಾಟ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
- OTP ಸಲ್ಲಿಸಿದ ನಂತರ ಇಲ್ಲಿ ಕ್ಲಿಕ್ ಮಾಡಿ.
- ಆಧಾರ್ ನೋಂದಾಯಿತ ಮೊಬೈಲ್ OTP ಅನ್ನು ನಮೂದಿಸಿ ಮತ್ತು ನಿಮ್ಮ ಇ-ಕೆವೈಸಿ ಮುಗಿದಿದೆ.


ಇದನ್ನೂ ಓದಿ : Vegetable Price: ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ! ದಿನೋಪಯೋಗಿ ತರಕಾರಿಗಳ ದರ ವಿವರ ಇಲ್ಲಿದೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.