Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ

ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಆದಷ್ಟು ಮಟ್ಟಿಗೆ ತಗ್ಗಿಸಲು ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

Written by - Puttaraj K Alur | Last Updated : Jul 30, 2022, 11:18 AM IST
  • ಭಾರತೀಯ ಬ್ಯಾಂಕಿಂಗ್ ಕ್ಷೇತ್ರವನ್ನು ಪೇಪರ್‌ಲೆಸ್ ಮಾಡುವ ನಿಟ್ಟಿನಲ್ಲಿ RBI ಆಲೋಚನೆ
  • ಬ್ಯಾಂಕ್‌ಗಳು & ಇತರ ಹಣಕಾಸು ಸಂಸ್ಥೆಗಳು ತಮ್ಮ ಶಾಖೆಗಳಲ್ಲಿ ಕಾಗದದ ಬಳಕೆ ನಿಲ್ಲಿಸಬೇಕೆಂದ RBI
  • ಹವಾಮಾನ ಬದಲಾವಣೆಯ ದುಷ್ಪರಿಣಾಮ ತಗ್ಗಿಸಲು ಗ್ರಾಹಕರಿಗೆ ಇ-ರಶೀದಿ ನೀಡುವಂತೆ ಸೂಚನೆ
Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ title=
Paperless Banking

ನವದೆಹಲಿ: ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ತಮ್ಮ ಶಾಖೆಗಳಲ್ಲಿ ಕಾಗದದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಎಟಿಎಂಗಳಲ್ಲಿ ಗ್ರಾಹಕರಿಗೆ ಇ-ರಶೀದಿ ನೀಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆದೇಶ ಹೊರಡಿಸಿದೆ.

ಹವಾಮಾನ ಬದಲಾವಣೆಯ ದುಷ್ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಈ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಆರ್‍ಬಿಐ ತಿಳಿಸಿದೆ. ‘ಹವಾಮಾನ ಅಪಾಯ ಮತ್ತು ಸುಸ್ಥಿರ ಹಣಕಾಸು' ಕುರಿತ ಚರ್ಚಾ ಪ್ರಬಂಧದಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಇದಕ್ಕಾಗಿ ಕೇಂದ್ರ ಬ್ಯಾಂಕ್ ಜಾಗತಿಕ ಸಂಸ್ಥೆಗಳು ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳ ಅನುಭವದ ಲಾಭವನ್ನು ಪಡೆಯುತ್ತಿದೆ. ಆರ್‌ಬಿಐ ಬ್ಯಾಂಕಿಂಗ್ ರೆಗ್ಯುಲೇಟರ್‌ಗೆ ಒಪ್ಪಿಗೆ ನೀಡಿದರೆ, ಬ್ಯಾಂಕಿನ ಶಾಖೆಗಳಲ್ಲಿ ಕಾಗದದ ಬಳಕೆ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಆಗುತ್ತದೆ.

ಇದನ್ನೂ ಓದಿ: Weather Update: ಈ ರಾಜ್ಯಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯ ಎಚ್ಚರಿಕೆ..!

ಈ ಅನುಕ್ರಮದಲ್ಲಿ ಎಲ್ಲಾ ರಿಸರ್ವ್ ಬ್ಯಾಂಕ್ ನಿಯಂತ್ರಿತ ಘಟಕಗಳಿಗೆ (RE) ಸಮಗ್ರ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತದೆ. ಹವಾಮಾನ ಬದಲಾವಣೆಯ ಅಪಾಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕಾರ್ಯತಂತ್ರಗಳನ್ನು ಸಿದ್ಧಪಡಿಸಲಾಗುವುದು ಎಂದು ಚರ್ಚಾ ಪತ್ರಿಕೆಯಲ್ಲಿ ಹೇಳಲಾಗಿದೆ. ಬ್ಯಾಂಕಿಂಗ್ ಪ್ರಕ್ರಿಯೆಗಳನ್ನು ಹೆಚ್ಚು ಪರಿಸರಸ್ನೇಹಿ ಮಾಡುವ ಉದ್ದೇಶ ಹೊಂದಲಾಗಿದ್ದು, ಆರ್‌ಇಗಳು ತಮ್ಮ ಕಾರ್ಯಾಚರಣೆಗಳಲ್ಲಿ ಕಾಗದದ ಬಳಕೆ ತೆಗೆದುಹಾಕುವ ಮೂಲಕ ತಮ್ಮ ಶಾಖೆಗಳನ್ನು ಹಸಿರು ಶಾಖೆಗಳಾಗಿ ಪರಿವರ್ತಿಸಬಹುದು ಎಂದು RBI ತಿಳಿಸಿದೆ.    

ಆರ್‌ಬಿಐ ಸೆಪ್ಟೆಂಬರ್ 30ರೊಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ. ಅಂತೆಯೇ REಗಳು ಇ-ರಶೀದಿಗಳನ್ನು ಉತ್ತೇಜಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಪರಿಗಣಿಸಬಹುದು. ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ​​(IBA) ಸುಸ್ಥಿರ ಹಣಕಾಸು ಕ್ಷೇತ್ರದಲ್ಲಿ ಹವಾಮಾನ ಅಪಾಯ ಮತ್ತು ಸಾಮರ್ಥ್ಯ ನಿರ್ಮಾಣದ ಕುರಿತು ಕಾರ್ಯಕಾರಿ ಗುಂಪನ್ನು ಸ್ಥಾಪಿಸಬಹುದು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ತೆರಿಗೆದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ : ಐಟಿಆರ್ ಸಲ್ಲಿಕೆಗೆ ಸಂಬಂಧಿಸಿದಂತೆ ಇಲ್ಲಿದೆ ಬಿಗ್ ಅಪ್ಡೇಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News