PM Kisan: ಪಿಎಂ ಕಿಸಾನ್ ಫಲಾನುಭಾವಿಗಳಿಗೆ ಬಿಗ್ ಶಾಕ್, ಇನ್ಮುಂದೆ ಈ ಮಹತ್ವದ ಸೌಕರ್ಯ ರೈತರಿಗೆ ಸಿಗಲ್ಲ
PM Kisan Latest Update: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್) ಫಲಾನುಭವಿಗಳ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆಯೊಂದನ್ನು ಮಾಡಿದೆ. ಈ ಬದಲಾವಣೆಯ ಪರಿಣಾಮ ರೈತರ ಮೇಲೆ ಆಗಲಿದೆ. ರೈತರಿಂದ ಸರ್ಕಾರ ಒಂದು ಮಹತ್ವದ ಸೌಲಭ್ಯವನ್ನು ಕಸಿದುಕೊಂಡಿದೆ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ.
PM Kisan: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷ ಆರಂಭದ ಮೊದಲ ದಿನದಂದು 11 ನೇ ಕಂತಿನ 2000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಆದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2022 ರಲ್ಲಿ ಸರ್ಕಾರವು ಮಹತ್ವದ ಬದಲಾವಣೆಯೊಂದನ್ನು ಮಾಡಿದೆ, ಇದು ದೇಶದ 12 ಕೋಟಿಗೂ ಹೆಚ್ಚು ನೋಂದಾಯಿತ ರೈತರ ಮೇಲೆ ಪರಿಣಾಮ ಬೀರಲಿದೆ. ವಾಸ್ತವದಲ್ಲಿ, ಇದೀಗ ರೈತರಿಂದ ಮಹತ್ವದ ಸೌಲಭ್ಯವನ್ನು ಕಸಿದುಕೊಳ್ಳಲಾಗಿದೆ. ಸರ್ಕಾರ ಏನು ಬದಲಾವಣೆ ಮಾಡಿದೆ ತಿಳಿದುಕೊಳ್ಳೋಣ ಬನ್ನಿ.
ಪಿಎಂ ಕಿಸಾನ್‌ನಲ್ಲಿ ಮಹತ್ವದ ಬದಲಾವಣೆ
ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಇನ್ಮುಂದೆ ಯಾವುದೇ ರೈತ ಪೋರ್ಟಲ್‌ಗೆ ಭೇಟಿ ನೀಡಲು ಮತ್ತು ಆಧಾರ್ ಸಂಖ್ಯೆಯಿಂದ ತನ್ನ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಹೌದು, ರೈತರು ಸ್ಟೇಟಸ್ ಪರಿಶೀಲಿಸಲು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಈ ಹಿಂದೆ ರೈತರು ತಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಸ್ಥಿತಿಯನ್ನು ಪರಿಶೀಲಿಸಬಹುದೆಂಬ ನಿಯಮವಿತ್ತು ಎಂಬುದು ಇಲ್ಲಿ ಗಮನಾರ್ಹ. ಇದಾದ ನಂತರ ರೈತರು ಮೊಬೈಲ್ ಸಂಖ್ಯೆಯಿಂದಲ್ಲ, ಆಧಾರ್ ಸಂಖ್ಯೆಯಿಂದ ಮಾತ್ರ ಸ್ಥಿತಿಯನ್ನು ಪರಿಶೀಲಿಸಬಹುದು ಎಂಬ ನಿಯಮ ಬಂತು. ಇದೀಗ ಹೊಸ ನಿಯಮದ ಪ್ರಕಾರ, ರೈತರು ಆಧಾರ್ ಸಂಖ್ಯೆಯಿಂದ ಸ್ಥಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ, ಆದರೆ ಮೊಬೈಲ್ ಸಂಖ್ಯೆಯಿಂದಲೇ ತಮ್ಮ ಸ್ಥಿತಿಯನ್ನು ಪರಿಶೀಲಿಸಬೇಕು.
ಇದನ್ನೂ ಓದಿ-Indian Railways: ರೈಲ್ವೆ ಇಲಾಖೆಯ ಪ್ರಮುಖ ಹುದ್ದೆಗಳಿಗೆ ‘EQ’ ಪರೀಕ್ಷೆ ಕಡ್ಡಾಯ..!
ಇಲ್ಲಿದೆ ಅದರ ಪ್ರಕ್ರಿಯೆ
>> ಇದಕ್ಕಾಗಿ ನೀವು ಮೊದಲು pmkisan.gov.in ಗೆ ಭೇಟಿ ನೀಡಿ
>> ನಂತರ ಎಡಭಾಗದಲ್ಲಿರುವ ಸಣ್ಣ ಬಾಕ್ಸ್‌ನಲ್ಲಿ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಈಗ ನಿಮ್ಮ ಮುಂದೆ ಹೊಸ ಒಂದು ಪುಟ ತೆರೆದುಕೊಳ್ಳುತ್ತದೆ.
>> ಅದರಲ್ಲಿ ನೀವು ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಸ್ಥಿತಿಯನ್ನು ಪರಿಶೀಲಿಸಿ.
>> ನಿಮ್ಮ ನೋಂದಣಿ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೆ, 'ನಿಮ್ಮ ನೋಂದಣಿ ಸಂಖ್ಯೆ' ತಿಳಿಯಿರಿ' ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
>> ಈಗ ನಿಮ್ಮ ಪಿಎಂ ಕಿಸಾನ್ ಖಾತೆಯೊಂದಿಗೆ ಜೋದನೆಯಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅದರಲ್ಲಿ ನಮೂದಿಸಿ
>> ಇದರ ನಂತರ, ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ಗೆಟ್ ಮೊಬೈಲ್ OTP ಕ್ಲಿಕ್ ಮಾಡಿ.
>> ಅಲ್ಲಿ ನೀಡಲಾಗಿರುವ ಬಾಕ್ಸ್‌ನಲ್ಲಿ ನಿಮ್ಮ ನಂಬರ್‌ಗೆ ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು 'ವಿವರಗಳನ್ನು ಪಡೆಯಿರಿ' ಕ್ಲಿಕ್ ಮಾಡಿ.
>> ನಿಮ್ಮ ನೋಂದಣಿ ಸಂಖ್ಯೆ ಮತ್ತು ಹೆಸರು ನಿಮ್ಮ ಮುಂದೆ ಪ್ರಕಟವಾಗಲಿದೆ.
ಇದನ್ನೂ ಓದಿ-Stock Market: ಮತ್ತೆ ಟೊಮೆಟೊ ಬೆಲೆಗೆ ಕುಸಿದ ಜೋಮ್ಯಾಟೊ ಷೇರು!
ಏನಿದು ಪಿಎಂ ಕಿಸಾನ್ ಯೋಜನೆ?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಪ್ರತಿ ವರ್ಷ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ, ಈ ಮೊತ್ತವನ್ನು ತಲಾ 2000ರೂ.ಗಳ ಒಟ್ಟು ಮೂರು ಸಮಾನ ಕಂತುಗಳಲ್ಲಿ ವರ್ಗಾಗಿಸಲಾಗುತ್ತದೆ. ಇದರಡಿ 11 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ. ನಿಮ್ಮ ಖಾತೆಗೆ ಹಣ ಇದುವರೆಗೆ ವರ್ಗಾವಣೆಯಾಗಿಲ್ಲ ಎಂದಾದಲ್ಲಿ ಮೊದಲು ನಿಮ್ಮ ಸ್ಥಿತಿ ಮತ್ತು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.