ITR ದಾಖಲಿಸುವ ಈ ಜನರಿಗೆ 2.5 ಲಕ್ಷ ರೂ.ಗಳ ಹೆಚ್ಚುವರಿ ವಿನಾಯ್ತಿ, 5 ಲಕ್ಷ ರೂ.ಗಳ ನಂತರ ತೆರಿಗೆ ಲೆಕ್ಕಾಚಾರ

Tax on Income: 2021-22 ಆರ್ಥಿಕ ವರ್ಷದ, ITR ಅನ್ನು 31 ಜುಲೈ 2022 ರವರೆಗೆ ಸಲ್ಲಿಸಬಹುದಾಗಿದೆ. ಇದೇ ವೇಳೆ, ಈ ವರ್ಷ ಈ ಅಂತಿಮ ಗಡುವಿನ ಬಳಿಕ  ITR ಅನ್ನು ಸಲ್ಲಿಸಿದರೆ, ನಂತರ ದಂಡವನ್ನು ಸಹ ಪಾವತಿಸಬೇಕಾಗಲಿದೆ.  

Written by - Nitin Tabib | Last Updated : Jun 27, 2022, 04:02 PM IST
  • 2021-22 ಆರ್ಥಿಕ ವರ್ಷದ, ITR ಅನ್ನು 31 ಜುಲೈ 2022 ರವರೆಗೆ ಸಲ್ಲಿಸಬಹುದಾಗಿದೆ.

    ಇದೇ ವೇಳೆ, ಈ ವರ್ಷ ಈ ಅಂತಿಮ ಗಡುವಿನ ಬಳಿಕ ITR ಅನ್ನು ಸಲ್ಲಿಸಿದರೆ ದಂಡ ಬೀಳಲಿದೆ.
  • ಇನ್ನೂ ಕೆಲ ಜನರಿಗೆ ಐಟಿಆರ್ ದಾಖಲಿಸುವಾಗ 2.5 ಲಕ್ಷ ರೂ.ಗಳ ಹೆಚ್ಚುವರಿ ವಿನಾಯಿತಿ ಸಿಗಲಿದೆ
ITR ದಾಖಲಿಸುವ ಈ ಜನರಿಗೆ 2.5 ಲಕ್ಷ ರೂ.ಗಳ ಹೆಚ್ಚುವರಿ ವಿನಾಯ್ತಿ, 5 ಲಕ್ಷ ರೂ.ಗಳ ನಂತರ ತೆರಿಗೆ ಲೆಕ್ಕಾಚಾರ title=
Income Tax Return

Income Tax Slab: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆ ಆರಂಭಗೊಂಡಿದೆ. 2021-22ನೇ ಸಾಲಿಗೆ ತಮ್ಮ ITR ಅನ್ನು ಜನರು ಸಲ್ಲಿಸುತ್ತಿದ್ದಾರೆ. ಇದೇ ವೇಳೆ, ಈ ವರ್ಷ, ವೈಯಕ್ತಿಕ ITR ದಾಖಲಿಸುವ ಜನರು ಜುಲೈ 31 ರೊಳಗೆ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಏಕೆಂದರೆ, ಇನ್ನೂ ಕೆಲವೇ ದಿನಗಳಲ್ಲಿ ಅಂತಿಮ ದಿನ ಮುಕ್ತಾಯಗೊಳ್ಳಲಿದೆ. ಇನ್ನೊಂದೆಡೆ, ಇದರ ನಂತರ ಐಟಿಆರ್ ಸಲ್ಲಿಸಿದರೆ, ದಂಡ ಸಹ ಪಾವತಿಸಬೇಕಾಗಲಿದೆ. ಅಲ್ಲದೆ, ಈ ಬಾರಿ ಕೆಲವರಿಗೆ ಐಟಿಆರ್ ಸಲ್ಲಿಕೆಯಲ್ಲಿ 2.5 ಲಕ್ಷ ಹೆಚ್ಚುವರಿ ವಿನಾಯಿತಿಯೂ ಕೂಡ ಸಿಗಲಿದೆ.

ತೆರಿಗೆ ಸ್ಲಾಟ್ 2.5 ಲಕ್ಷದಿಂದ ಆರಂಭವಾಗುತ್ತದೆ
ಸಾಮಾನ್ಯವಾಗಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಹೆಚ್ಚಿದ್ದರೆ, ಅವರು ತೆರಿಗೆ ಸ್ಲಾಟ್ ನಲ್ಲಿ  ಬರುತ್ತಾರೆ. ಈ ಜನರ ಆದಾಯ 2.5 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಸಾಮಾನ್ಯವಾಗಿ, ವಾರ್ಷಿಕವಾಗಿ 2.5 ಲಕ್ಷದಿಂದ 5 ಲಕ್ಷದವರೆಗೆ ಆದಾಯ ಇರುವವರಿಗೆ ಶೇ.5 ರಷ್ಟು ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ-Bank Holidays in July 2022: ಅಬ್ಬಬ್ಬಾ ಜುಲೈನಲ್ಲಿ ಬ್ಯಾಂಕ್‌ಗಳಿಗೆ ಇಷ್ಟು ದಿನ ರಜೆ!

50 ಸಾವಿರ ಹೆಚ್ಚುವರಿ ರಿಯಾಯಿತಿ
60 ವರ್ಷಕ್ಕಿಂತ ಹೆಚ್ಚು ಮತ್ತು 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಿರಿಯ ನಾಗರಿಕರು ಸಹ ತೆರಿಗೆ ಪಾವತಿಸಬೇಕಾಗಲಿದೆ. ಆದರೆ, 60 ರಿಂದ 80 ವರ್ಷ ವಯಸ್ಸಿನೊಳಗಿನ ಜನರಿಗೆ ತೆರಿಗೆಯ ಸ್ಲಾಟ್  ವಾರ್ಷಿಕ ಆದಾಯ ರೂ 3 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ. ಈ ಜನರು ವಾರ್ಷಿಕ 3 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿದರೆ, ತೆರಿಗೆ ತೆರಿಗೆ ಪಾವತಿಸಬೇಕಾಗಲಿದೆ. ಅಂದರೆ, ಈ ಜನರಿಗೆ 50 ಸಾವಿರ ರೂಪಾಯಿ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ.

ಇದನ್ನೂ ಓದಿ-PF Balance: ಪಿಎಫ್ ಹಣ ಬಂದಿದೆಯೇ? ನಿಮ್ಮ UAN ಸಂಖ್ಯೆ ಮರೆತಿದ್ದರೆ ಈ ರೀತಿ ಪರಿಶೀಲಿಸಿ

ಈ ಜನರಿಗೆ 2.5 ಲಕ್ಷ ರೂ.ಗಳ ಹೆಚ್ಚುವರಿ ರಿಯಾಯಿತಿ
ಇನ್ನೊಂದೆಡೆ, ಕೆಲ ಜನರನ್ನು ಅತ್ಯಂತ ಹಿರಿಯ ನಾಗರಿಕರ ವರ್ಗದಲ್ಲಿ ಇರಿಸಲಾಗಿದೆ. ಈ ವರ್ಗದಲ್ಲಿ 80 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರನ್ನು ಸೇರಿಸಲಾಗಿದೆ. ಈ ಜನರಿಗೆ ತೆರಿಗೆ ಸಲ್ಲಿಸುವಲ್ಲಿ ಹೆಚ್ಚುವರಿ ವಿನಾಯಿತಿ ನೀಡಲಾಗಿದೆ. ಅಂದರೆ, ಅತ್ಯಂತ ಹಿರಿಯ ನಾಗರಿಕ ವರ್ಗಕ್ಕೆ ಸೇರಿದ ಜನರು ಐದು ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿದ್ದರೆ ಮಾತ್ರ ತೆರಿಗೆ ಸ್ಲಾಟ್ ಗೆ ಬರುತ್ತಾರೆ. ಸಾಮಾನ್ಯ ತೆರಿಗೆದಾರರಿಗೆ ಹೋಲಿಸಿದರೆ, ಇವರಿಗೆ ಹೆಚ್ಚುವರಿ 2.5 ಲಕ್ಷ ರೂಪಾಯಿ ವಿನಾಯಿತಿಯನ್ನು ಪಡೆಯುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News