ಸೆಪ್ಟೆಂಬರ್ ನಲ್ಲೇ ರೈತರ ಖಾತೆಗೆ ಬರುವುದು ಪಿಎಂ ಕಿಸಾನ್ 12 ನೇ ಕಂತು
PM Kisan 12th Installment Update: ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಸೆ.30ರ ಒಳಗೆ ರೈತರ ಖಾತೆಗೆ ಬರಬಹುದು ಎಂದು ಹೇಳಲಾಗಿದೆ. ಆದರೆ ಈ ಹಣ ನಿಮ್ಮ ಖಾತೆಗೆ ಬರುತ್ತದೆಯೇ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಿಕೊಳ್ಳಬಹುದು.
PM Kisan 12th Installment Update: ದೇಶದ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದೆ. ಪಿಎಂ ಕಿಸಾನ್ ಯೋಜನೆಯ ೧೨ನೆ ಕಂತಿನ ಎರಡು ಸಾವಿರ ರೂಪಾಯಿಯನ್ನು ಸರ್ಕಾರ ಇದೆ ತಿಂಗಳು, ರೈತರ ಖಾತೆಗೆ ವರ್ಗಾಯಿಸಬಹುದು ಎನ್ನಲಾಗಿದೆ. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ವಿಶೇಷ ಯೋಜನೆ ಜಾರಿಗೊಳಿಸಿದೆ.
ಸೆಪ್ಟೆಂಬರ್‌ನಲ್ಲಿಯೇ ಖಾತೆಗೆ ಬರಲಿದೆ ಹಣ :
ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಸೆ.30ರ ಒಳಗೆ ರೈತರ ಖಾತೆಗೆ ಬರಬಹುದು ಎಂದು ಹೇಳಲಾಗಿದೆ. ಆದರೆ ಈ ಹಣ ನಿಮ್ಮ ಖಾತೆಗೆ ಬರುತ್ತದೆಯೇ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಿಕೊಳ್ಳಬಹುದು.
ಇದನ್ನೂ ಓದಿ : Rice Price : ಶ್ರೀಸಾಮಾನ್ಯನಿಗೆ ಬಿಗ್ ಶಾಕ್ : ಅಕ್ಕಿ ಬೆಲೆ ಹೆಚ್ಚಿಸಲಿದೆ ಕೇಂದ್ರ ಸರ್ಕಾರ
ಪಿಎಂ ಕಿಸಾನ್‌ನ 12 ನೇ ಕಂತಿನ ಸ್ಟೇಟಸ್ ಪರಿಶೀಲಿಸಿ :
1. ಮೊದಲನೆಯದಾಗಿ ನೀವು ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
2. ಮುಖಪುಟದಲ್ಲಿಯೇ ಫಾರ್ಮರ್ ಕಾರ್ನರ್ ಆಯ್ಕೆ ಕಾಣಿಸುತ್ತದೆ.
3. ಅದರಲ್ಲಿ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಗೆ ಹೋಗಬೇಕು.
4. ಅದರ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
6. ಈಗ ಫಲಾನುಭವಿಯ ಸ್ಟೇಟಸ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
ರೈತರಿಗೆ ಸಿಗುತ್ತದೆ 6000 ರೂಪಾಯಿ :
ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಆರು ಸಾವಿರ ರೂಪಾಯಿಯನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು. ಆದರೆ ಇ-ಕೆವೈಸಿ ಪೂರ್ಣಗೊಳಿಸದೆ ಇದ್ದರೆ, ಈ ಬಾರಿ ಕಂತು ಖಾತೆ ಸೇರುವುದಿಲ್ಲ.
ಇದನ್ನೂ ಓದಿ : ಆಧಾರ್‌ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಯುಐಡಿಎಐ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.