ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಸರ್ಕಾರ ನೀಡುತ್ತಿದೆ 15 ಸಾವಿರ ರೂಪಾಯಿ..!

Kanya Sumangala Yojana : ಕನ್ಯಾ ಸುಮಂಗಲಾ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಸರಕಾರ 15 ಸಾವಿರ ರೂ. ನೀಡುತ್ತದೆ. ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಸರ್ಕಾರದ ಈ ಯೋಜನೆಯ ಲಾಭ ಪಡೆಯಬಹುದು. 

Written by - Ranjitha R K | Last Updated : Sep 23, 2022, 10:03 AM IST
  • ಹೆಣ್ಣು ಮಕ್ಕಳಿಗೆ ಸರಕಾರ ನೀಡುತ್ತದೆ 15 ಸಾವಿರ ರೂಪಾಯಿ
  • ಈ ಯೋಜನೆಯ ಹೆಸರು ಕನ್ಯಾ ಸುಮಂಗಲಾ ಯೋಜನೆ
  • ಆರು ಕಂತುಗಳಲ್ಲಿ ಸರ್ಕಾರದಿಂದ ಹಣ ಪಾವತಿ
ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಸರ್ಕಾರ ನೀಡುತ್ತಿದೆ 15 ಸಾವಿರ ರೂಪಾಯಿ..! title=
Kanya Sumangala Yojana (file photo)

Kanya Sumangala Yojana : ಹೆಣ್ಣು ಮಕ್ಕಳಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಹೆಣ್ಣು ಮಗುವಿನ ಪಾಲನೆ, ಶಿಕ್ಷಣ, ಮದುವೆಯವರೆಗೂ ಹಲವರು ಯೋಜನೆಗಳನ್ನು ನೀಡಲಾಗಿದೆ. ಇಂಥಹ  ಮತ್ತೊಂದು ಯೋಜನೆಯೇ ಕನ್ಯಾ ಸುಮಂಗಲಾ ಯೋಜನೆ.

ಇಬ್ಬರು ಹೆಣ್ಣು ಮಕ್ಕಳಿದ್ದರೂ ಪಡೆಯಬಹುದು ಯೋಜನೆಯ ಲಾಭ : 
ಇಬ್ಬರು ಹೆಣ್ಣು ಮಕ್ಕಳು ಈ ಯೋಜನೆಯ ಲಾಭ ಪಡೆಯಬಹುದು.ಕನ್ಯಾ ಸುಮಂಗಲಾ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಸರಕಾರ 15 ಸಾವಿರ ರೂ. ನೀಡುತ್ತದೆ. ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಸರ್ಕಾರದ ಈ ಯೋಜನೆಯ ಲಾಭ ಪಡೆಯಬಹುದು. ಮಗಳ ಉತ್ತಮ ಪಾಲನೆ ಮತ್ತು ಶಿಕ್ಷಣದ ದೃಷ್ಟಿಯಿಂದ ಸರ್ಕಾರ ಈ ಹಣವನ್ನು ಆರು ಕಂತುಗಳಲ್ಲಿ ಪಾವತಿಸುತ್ತದೆ.  

ಇದನ್ನೂ ಓದಿ : Gold Price Today : ಮತ್ತೆ ಏರಿಕೆಯಾಯಿತು ಚಿನ್ನದ ಬೆಲೆ, ಬೆಳ್ಳಿ ಬೆಲೆ ಎಷ್ಟು ತಿಳಿಯಿರಿ

14 ಲಕ್ಷ ಹೆಣ್ಣು ಮಕ್ಕಳಿಗೆ  ನೀಡಲಾಗಿದೆ ಈ ಸೌಲಭ್ಯ : 
ವಿಧಾನಸೌಧದಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಸಿಎಂ ಯೋಗಿ ಆದಿತ್ಯನಾಥ್, ಯುಪಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಕನ್ಯಾ ಸುಮಂಗಲಾ ಯೋಜನೆಯನ್ನು ನಿರಂತರವಾಗಿ ಮುಂದುವರಿಸಲಾಗುತ್ತಿದೆ ಎಂದು ಹೇಳಿದ್ದಾರೆ.  ರಾಜ್ಯದಲ್ಲಿ ಇದುವರೆಗೆ ಸುಮಾರು 14 ಲಕ್ಷ ಹೆಣ್ಣು ಮಕ್ಕಳಿಗೆ ಯೋಜನೆಯ ಲಾಭ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಮೂರು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪೋಷಕರು, ಮಗಳು ಹುಟ್ಟಿದ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಮೊದಲ ಕಂತಿನಲ್ಲಿ ಸಿಗುವುದು 2,000 ರೂಪಾಯಿ : 
ಈ ಯೋಜನೆಯಲ್ಲಿ ಮೊದಲು ಅಂಚೆ ಕಚೇರಿಯಲ್ಲಿ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು. ಜನನದ ನಂತರ ಮೊದಲ ಕಂತು 2,000 ರೂ. ಸಿಗುತ್ತದೆ. ಲಸಿಕೆ ಹಾಕಿದ ನಂತರ ಎರಡನೇ ಕಂತಿನ 1,000 ರೂ. ಪಾವತಿಸಲಾಗುತ್ತದೆ. ಹೆಣ್ಣು ಮಕ್ಕಳು ಒಂದನೇ ತರಗತಿಗೆ ಪ್ರವೇಶಿಸಿದಾಗ ಮೂರನೇ ಕಂತಿನ 2000 ರೂ. ನೀಡಲಾಗುತ್ತದೆ. 

ಇದನ್ನೂ ಓದಿ : ಅಮೆಜಾನ್ ಗೆ ಸೇರಿದ ವಾಟ್ಸಾಪ್ ಪೇ ಇಂಡಿಯಾ ಮುಖ್ಯಸ್ಥ

ಪದವಿ ತರಗತಿಗೆ ಪ್ರವೇಶಡ ವೇಳೆ 5000 ರೂಪಾಯಿ:
ಹೆಣ್ಣು ಮಕ್ಕಳು ಆರನೇ ತರಗತಿಗೆ ಪ್ರವೇಶ ಪಡೆದರೆ ನಾಲ್ಕನೇ ಕಂತಿಗೆ 2,000 ರೂ. ನೀಡಲಾಗುವುದು. 9 ನೇ ತರಗತಿಗೆ ಪ್ರವೇಶ ಪಡೆದಾಗ, ಐದನೇ ಕಂತಿಗೆ 3,000 ರೂ. ಆ ಹೆಣ್ಣು ಮಗುವಿನ ಖಾತೆಗೆ ಬರುತ್ತದೆ. ಅಂದರೆ ಇಲ್ಲಿಯವರೆಗೆ ಒಟ್ಟು 10 ಸಾವಿರ ರೂ. ಪಾವತಿಸಿದನ್ತಾಗುತ್ತದೆ. ಉಳಿದ  5000 ರೂಪಾಯಿಗಳನ್ನು  10-12 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌  ಅಡ್ಮಿಶನ್ ವೇಳೆ ನೀಡಲಾಗುವುದು. 

ಈ ಮೂಲಕ ಒಟ್ಟು ಆರು ಕಂತುಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಹೆಣ್ಣು ಮಕ್ಕಳ ಅಭಿವೃದ್ದಿಗಾಗಿ ವಾರ್ಷಿಕ 15 ಸಾವಿರ ರೂಪಾಯಿಗಳನ್ನು ನೀಡುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News