PM Mudra Loan : 1999 ರೂ. ಜಮಾ ಮಾಡಿದರೆ ಸಿಗಲಿದೆಯಾ 10 ಲಕ್ಷಗಳವರೆಗೆ ಲೋನ್ ? ಸರ್ಕಾರ ಹೇಳಿದ್ದೇನು ?
ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಕುರಿತ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 1999 ರೂಪಾಯಿಗಳನ್ನು ಠೇವಣಿ ಇಟ್ಟರೆ, ಪಿಎಂ ಮುದ್ರಾ ಯೋಜನೆಯಡಿಯಲ್ಲಿ ಸಾಲ ನೀಡಲಾಗುವುದು ಎಂದು ಈ ಸಂದೇಶದಲ್ಲಿ ಹೇಳಲಾಗುತ್ತದೆ.
ನವದೆಹಲಿ : PIB Fact Check : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ಸಹಾಯ ಮಾಡಲು ವಿಭಿನ್ನ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದೇ ರೀತಿ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯೋಜನಕಾರಿ ಯೋಜನೆಯನ್ನು ನಡೆಸಲಾಗುತ್ತಿದೆ. ಈ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ. ಈ ಯೋಜನೆಯಡಿ ಸರ್ಕಾರದಿಂದ ಜನರಿಗೆ ಸಾಲ ನೀಡಲಾಗುತ್ತದೆ. ಇದರಲ್ಲಿ ಬಡ್ಡಿ ದರ ತೀರಾ ಕಡಿಮೆ. ಈ ಮಧ್ಯೆ, ಯೋಜನೆಯ ಬಗೆಗಿನ ಕೆಲವು ಸಂದೇಶಗಳು ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿದೆ ಸಂದೇಶ :
ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಕುರಿತ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿದೆ. 1999 ರೂಪಾಯಿಗಳನ್ನು ಠೇವಣಿ ಇಟ್ಟರೆ, ಪಿಎಂ ಮುದ್ರಾ ಯೋಜನೆಯಡಿಯಲ್ಲಿ (PM mudra yojana) ಸಾಲ ನೀಡಲಾಗುವುದು ಎಂದು ಈ ಸಂದೇಶದಲ್ಲಿ ಹೇಳಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕೇಂದ್ರ ಸರ್ಕಾರ ಹೊರಡಿಸಿರುವ ಪತ್ರ, ಸಾಲ ಕೊಡಿಸುವ ಗ್ಯಾರಂಟಿ ಎಂದು ಈ ಸಂದೇಶದಲ್ಲಿ ಹೇಳಲಾಗುತ್ತಿದೆ.
ಇದನ್ನೂ ಓದಿ : Pension Scheme: ಪ್ರತಿ ತಿಂಗಳು ರೂ. 210 ಠೇವಣಿ ಮಾಡಿ 5000 ರೂ. ಪಿಂಚಣಿ ಪಡೆಯಿರಿ
ಈ ವೈರಲ್ ಸಂದೇಶದ ಹಿಂದಿನ ಸತ್ಯವೇನು?
ನೀವು ಕೂಡಾ ಈ ಸಂದೇಶವನ್ನು ಸ್ವೀಕರಿಸಿದ್ದರೆ, ಮೊದಲು ಸತ್ಯಾಸತ್ಯತೆಯನ್ನು ಪರೀಕ್ಷಿಸಿಕೊಳ್ಳಿ. ಕೆಲವೊಮ್ಮೆ ಇಂತಹ ನಕಲಿ ಸಂದೇಶಗಳು ವೈರಲ್ (Viral) ಆಗುತ್ತವೆ. ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ವೈರಲ್ ಸಂದೇಶಗಳ ಸತ್ಯಾಸತ್ಯತೆ ಪರೀಕ್ಷಿಸುವ ಸರ್ಕಾರಿ ಮಾಹಿತಿ ಸಂಸ್ಥೆ PIB, ಅದರ ಸತ್ಯ-ಪರಿಶೀಲನೆ ಮಾಡಿದೆ. ಪಿಎಂ ಮುದ್ರಾ ಯೋಜನೆಗೆ ಸಂಬಂಧಿಸಿದ ಈ ವೈರಲ್ ಸಂದೇಶದ ಸಂಪೂರ್ಣ ತನಿಖೆಯನ್ನು ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದೆ.
ಪಿಐಬಿ ನೀಡಿದೆ ಈ ಮಾಹಿತಿ :
ಪಿಐಬಿ ಫ್ಯಾಕ್ಟ್ ಚೆಕ್ (PIB Fact check) ಟ್ವೀಟ್ ಮಾಡುವ ಮೂಲಕ, ಈ ಸಂದೇಶದ ಬಗ್ಗೆ ಮಾಹಿತಿ ನೀಡಿದೆ. ಫ್ಯಾಕ್ಟ್ ಚೆಕ್ ನಂತರ ಈ ವೈರಲ್ ಸಂದೇಶ ಸಂಪೂರ್ಣ ನಕಲಿ ಎಂದು ಹೇಳಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸರ್ಕಾರವು ಅಂತಹ ಯಾವುದೇ ಪತ್ರವನ್ನು ನೀಡಿಲ್ಲ. ಕೇಂದ್ರ ಸರ್ಕಾರದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಮೋಸದ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿರಿ ಎಂದು ಟ್ವೀಟ್‌ನಲ್ಲಿ (tweet) ಹೇಳಲಾಗಿದೆ.
Bank Holidays November 2021: ನವೆಂಬರ್‌ನಲ್ಲಿ 17 ದಿನ ಬ್ಯಾಂಕ್ ರಜೆ, ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಎಂದರೇನು?
8 ಏಪ್ರಿಲ್ 2015 ರಂದು ಕೇಂದ್ರ ಸರ್ಕಾರ 'ಪ್ರಧಾನ ಮಂತ್ರಿ ಮುದ್ರಾ ಯೋಜನೆ'ಯನ್ನು ಪ್ರಾರಂಭಿಸಿತ್ತು. ಈ ಯೋಜನೆಯಡಿಯಲ್ಲಿ, ಸಾಮಾನ್ಯ ಜನರು ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸಾಲವನ್ನು ನೀಡಲಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ಗ್ಯಾರಂಟಿ ನೀಡಲಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ