ನವದೆಹಲಿ: Calf Serum In Covaxin? - ಪ್ರಸ್ತುತ ಭಾರತದಲ್ಲಿ ಕೊರೊನಾ ವೈರಸ್ ವಿರುದ್ದ ಹೋರಾಡಲು ಕೊರೊನಾ ವ್ಯಾಕ್ಸಿನೆಶನ್ ಅಭಿಯಾನ ಮುಂದುವರೆದಿದೆ. ಆದರೆ, ಈ ನಡುವೆ ಜನರ ಮಧ್ಯೆ ಬೀಟಾ ಟೀಕೆಯ ಕುರಿತು ಹಲವು ಮಿಥ್ಯ ಮಾಹಿತಿಗಳು ಹರಡುತ್ತಿವೆ. ಈ ಕುರಿತು ಸರ್ಕಾರ ಕೂಡ ಕಾಲ-ಕಾಲಕ್ಕೆ ಹೇಳಿಕೆ ನೀಡುವ ಮೂಲಕ ಪರಿಹರಿಸುವಲ್ಲಿ ತೊಡಗಿದೆ. ಇದೆ ಸರಣಿಯಲ್ಲಿ ಇದೀಗ ಕೊರೊನಾ ವಿರುದ್ಧ ಹೋರಾಡುವ ವ್ಯಾಕ್ಸಿನ್ ಆಗಿರುವ ಕೊವ್ಯಾಕ್ಸಿನ್ ನಲ್ಲಿ ಹಸುವಿನ ಕರುವಿನ ಸೀರಮ್ ಬಳಸಲಾಗುತ್ತದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರ ಆಗುತಿದ್ದು, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ನಲ್ಲಿ ತಥ್ಯಗಳನ್ನು ತಿರುಚಲಾಗಿದೆ ಎಂದು ಹೇಳಿದೆ
ಕೊವ್ಯಾಕ್ಸಿನ್ ನಲ್ಲಿ Calf Serum ಬಳಕೆ ಇಲ್ಲ
PIB ಜಾರಿಗೊಳಿಸಿರುವ ಹೇಳಿಕೆಯಲ್ಲಿ 'ಕೊವ್ಯಾಕ್ಸಿನ್ ಸಂರಚನೆಗೆಮಾಧ್ಯಮ ಸಂಬಂಧಿಸಿದ ಕೆಲ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳಲ್ಲಿ ವ್ಯಾಕ್ಸಿನ್ ನಲ್ಲಿ(Covaxin) ಹಸುವಿನ ಕರುವಿನ ಸೀರಮ್ ಇರುತ್ತದೆ ಎನ್ನಲಾಗಿದೆ. ಇದು ಸರಿಯಲ್ಲ ಹಾಗೂ ಇದರಲ್ಲಿ ತಥ್ಯಗಳನ್ನು ತಿರುಚಿ ಪ್ರಸ್ತುತಪಡಿಸಲಾಗಿದೆ' ಎನ್ನಲಾಗಿದೆ .
Final vaccine product of #COVAXIN does NOT contain new born calf serum !
Claims suggesting otherwise are misrepresenting facts !
Animal serum has been used in vaccine manufacturing process for decades, but it is completely removed from the end product.https://t.co/NKlh5kow08 pic.twitter.com/L4CrEmZtT1
— Dr Harsh Vardhan (@drharshvardhan) June 16, 2021
ಕೇವಲ ವೆರೋ ಕೋಶಗಳ ಬೆಳವಣಿಗೆಗೆ ಮಾತ್ರ ಬಳಸಲಾಗುತ್ತದೆ
'ಕೇವಲ ವೆರೋ ಕೋಶಗಳ ತಯಾರಿಕೆ ಅಥವಾ ಬೆಳವಣಿಗೆಗೆ ಮಾತ್ರ ಕರುವಿನ ಸೀರಮ್ ಅನ್ನು ಬಳಸಲಾಗುತ್ತದೆ. ವಿವಿಧ ರೀತಿಯ ಗೋವಿನ ಮತ್ತು ಇತರ ಪ್ರಾಣಿ ಸೀರಮ್‌ಗಳು ವೆರೋ ಕೋಶಗಳ ಬೆಳವಣಿಗೆಗೆ ಜಾಗತಿಕವಾಗಿ ಬಳಸುವ ಪ್ರಮಾಣಿತ ಸಂವರ್ಧನೆಯ ಘಟಕಗಳಾಗಿವೆ' ಎಂದು ಸರ್ಕಾರ ಹೇಳಿದೆ.
#MythvsFacts#LargestVaccineDrive
The final vaccine product of #COVAXIN does not contain newborn calf serum at all.https://t.co/2sbXI3xOTu pic.twitter.com/yOmNpBB9gA
— Ministry of Health (@MoHFW_INDIA) June 16, 2021
ಇದನ್ನೂ ಓದಿ-New Corona Vaccine: Coronavirus ವಿರುದ್ಧ ಸಿಕ್ತು ಮತ್ತೊಂದು ಅಸ್ತ್ರ, ಶೇ.90ರಷ್ಟು ಪರಿಣಾಮಕಾರಿ
ಹಲವು ದಶಕಗಳಿಂದ ನಡೆಯುತ್ತಿದೆ ಈ ತಂತ್ರಜ್ಞಾನ
'ಲಸಿಕೆಗಳ ಉತ್ಪಾದನೆಗೆ ಸಹಾಯ ಮಾಡುವ ಜೀವಕೋಶದ ಜೀವನವನ್ನು ಸ್ಥಾಪಿಸಲು ವೆರೋ ಕೋಶಗಳನ್ನು (Vero Cells) ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ದಶಕಗಳಿಂದ ಪೋಲಿಯೊ, ರೇಬೀಸ್ ಮತ್ತು ಇನ್ಫ್ಲುಯೆನ್ಸದ ಲಸಿಕೆಗಳಲ್ಲಿ ಬಳಸಲಾಗುತ್ತದೆ' ಎಂದು PIB ಹೇಳಿದೆ.
Myths vs Facts on COVID Vaccine:
The final vaccine (COVAXIN) contains no newborn calf serum and is not an ingredient of the final vaccine product. #LargestVaccineDrive pic.twitter.com/yqcHbIxvwj
— Prasar Bharati News Services पी.बी.एन.एस. (@PBNS_India) June 16, 2021
ಇದನ್ನೂ ಓದಿ- Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ
ಬಳಿಕ ವೆರೋ ಕೋಶಗಳನ್ನು ಸ್ವಚ್ಛಗೊಳಿಸಲಾಗುತ್ತದೆ
ಈ ಕುರಿತು ಮುಂದೆ ಹೇಳಿಕೆ ನೀಡಿರುವ PIB, 'ವೆರೋ ಕೋಶಗಳ ವೃದ್ಧಿಯ ಬಳಿಕ ಅವುಗಳನ್ನು Calf Serum ನಿಂದ ಮುಕ್ತಗೊಳಿಸಲಾಗುತ್ತದೆ. ಇದಕ್ಕಾಗಿ ಅವುಗಳನ್ನು ಹಲವು ಬಾರಿ ನೀರು ಹಾಗೂ ಕೆಮಿಕಲ್ ನಿಂದ ತೊಳೆಯಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.