ನವದೆಹಲಿ : ಪ್ರಧಾನಮಂತ್ರಿ ವಯ ವಂದನಾ ಯೋಜನೆ: ಹಿರಿಯ ನಾಗರಿಕರಿಗೊಂದು ಸಂತಸದ ಸುದ್ದಿ. ಈಗ ಸರ್ಕಾರ 60 ವರ್ಷ ಮೇಲ್ಪಟ್ಟವರಿಗಾಗಿ 'ಪ್ರಧಾನಿ ವಯ ವಂದನಾ ಯೋಜನೆ' ಆರಂಭಿಸಿದೆ. ಇದರ ಅಡಿಯಲ್ಲಿ, ನೀವು ವಾರ್ಷಿಕವಾಗಿ 1,11,000 ರೂ.ವರೆಗೆ ಪಿಂಚಣಿ (Senior Citizens Savings Scheme) ಪಡೆಯಬಹುದು.


COMMERCIAL BREAK
SCROLL TO CONTINUE READING

ಅವಧಿ ಎಷ್ಟು


ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(PM Vaya Vandana Yojana)ಯು ವೃದ್ಧರನ್ನು ಅವರ ಜೀವನದ ನಿರ್ಣಾಯಕ ಹಂತದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಾರಂಭಿಸಲಾಗಿದೆ. ಇದರ ಅವಧಿಯು ಮಾರ್ಚ್ 31, 2020 ರವರೆಗೆ ಇತ್ತು, ಆದರೆ ಈಗ ಅದನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ.


ಇದನ್ನೂ ಓದಿ : National Family Benefit Scheme: ಈ ಸ್ಕೀಮ್ ಅಡಿ ನಿಮಗೆ ಉಚಿತವಾಗಿ ಸಿಗುತ್ತೆ 30,000 ರೂ.ಗಳ ಲಾಭ


ಯಾರು ಪ್ರಯೋಜನ ಪಡೆಯುತ್ತಾರೆ


ಈ ಯೋಜನೆಗೆ ಸೇರಲು ಕನಿಷ್ಠ ವಯಸ್ಸು 60 ವರ್ಷಗಳು(senior citizens). ಅಂದರೆ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ನಾಗರಿಕರು ಅದರಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ ಗರಿಷ್ಠ ವಯಸ್ಸಿನ ಮಿತಿ ಇಲ್ಲ.


LIC ವಹಿಸಿಕೊಂಡಿದೆ ಜವಾಬ್ದಾರಿ


ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಜೀವ ವಿಮಾ ನಿಗಮಕ್ಕೆ (LIC) ವಹಿಸಲಾಗಿದೆ. ಈ ಯೋಜನೆಯಲ್ಲಿ ಪಿಂಚಣಿಗಾಗಿ, ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು. ತದನಂತರ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ಆರಿಸಿಕೊಳ್ಳಬಹುದು.


ವಾರ್ಷಿಕ ಪಿಂಚಣಿ ಎಷ್ಟು?


ಈ ಯೋಜನೆಯಡಿಯಲ್ಲಿ, ನೀವು ತಿಂಗಳಿಗೆ ರೂ 1000 ಪಿಂಚಣಿ(Pension)ಗಾಗಿ 1,62,162 ರೂ. ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಡಿ, ಗರಿಷ್ಠ ಮಾಸಿಕ ಪಿಂಚಣಿ ರೂ 9,250, ತ್ರೈಮಾಸಿಕ ರೂ 27,750, ಅರ್ಧ ವಾರ್ಷಿಕ ಪಿಂಚಣಿ ರೂ 55,500 ಮತ್ತು ವಾರ್ಷಿಕ ಪಿಂಚಣಿ 1,11,000 ರೂ. 


ಇದನ್ನೂ ಓದಿ : 23-01-2022 Today Gold Price: ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಬಂಗಾರದ ಬೆಲೆಯಲ್ಲಿ ಇಳಿಕೆ


ಹೂಡಿಕೆ ಮಾಡುವುದು ಹೇಗೆ


PMVVY ಯೋಜನೆಯ ಬಗ್ಗೆ ವಿವರವಾದ ಮಾಹಿತಿಗಾಗಿ ನೀವು 022-67819281 ಅಥವಾ 022-67819290 ಅನ್ನು ಡಯಲ್ ಮಾಡಬಹುದು. ಇದಲ್ಲದೆ, ನೀವು ಟೋಲ್-ಫ್ರೀ ಸಂಖ್ಯೆಯನ್ನು ಡಯಲ್ ಮಾಡಬಹುದು - 1800-227-717.


ಸೇವಾ ತೆರಿಗೆ ವಿನಾಯಿತಿ


ಈ ಯೋಜನೆಯು ಸೇವಾ ತೆರಿಗೆ(Tax Concession) ಮತ್ತು GST ಯಿಂದ ವಿನಾಯಿತಿ ಪಡೆದಿದೆ. ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಯಾವುದೇ ಗಂಭೀರ ಕಾಯಿಲೆ ಅಥವಾ ಸಂಗಾತಿಯ ಚಿಕಿತ್ಸೆಗಾಗಿ ನೀವು ಈ ಹಣವನ್ನು ಮುಂಚಿತವಾಗಿ ಹಿಂಪಡೆಯಬಹುದು.


ಅಗತ್ಯ ದಾಖಲೆಗಳು


ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು ಪ್ಯಾನ್ ಕಾರ್ಡ್‌ನ ಪ್ರತಿ, ವಿಳಾಸ ಪುರಾವೆಯ ಪ್ರತಿ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.


ಇದನ್ನೂ ಓದಿ : ಇಂದೇ ಪತ್ನಿಯ ಹೆಸರಿನಲ್ಲಿ ಈ NPS ಖಾತೆ ತೆರೆಯಿರಿ : ಪ್ರತಿ ತಿಂಗಳು ₹44,793 ಪಿಂಚಣಿ ಪಡೆಯಿರಿ!


ಸಾಲ ಸೌಲಭ್ಯವೂ ಲಭ್ಯವಿದೆ


ಈ ಯೋಜನೆ(PM Vaya Vandana Yojana)ಯಲ್ಲಿ ನಿಮಗೆ ಸಾಲ ಸೌಲಭ್ಯವೂ ಇದೆ. ಇದರಲ್ಲಿ, ನೀವು ಪಾಲಿಸಿಯ 3 ವರ್ಷಗಳ ನಂತರ PMVVY ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ಗರಿಷ್ಠ ಸಾಲದ ಮೊತ್ತವು ಖರೀದಿ ಬೆಲೆಯ 75% ಮೀರಬಾರದು. ಈ ಯೋಜನೆಯು ಸರ್ಕಾರದ ಇತರ ಪಿಂಚಣಿ ಯೋಜನೆಗಳಂತೆ ತೆರಿಗೆ ಪ್ರಯೋಜನಗಳನ್ನು ಒದಗಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.