National Family Benefit Scheme: ಈ ಸ್ಕೀಮ್ ಅಡಿ ನಿಮಗೆ ಉಚಿತವಾಗಿ ಸಿಗುತ್ತೆ 30,000 ರೂ.ಗಳ ಲಾಭ

National Family Benefit Scheme: ಕರೋನಾ ಅವಧಿಯಲ್ಲಿ (Corona Pandemic) ಅಥವಾ ಯಾವುದೇ ಕಾರಣದಿಂದ ನೀವು ಕೂಡ ಆರ್ಥಿಕ ತೊಂದರೆಗೆ (Financial Problem) ಒಳಗಾಗಿದ್ದಾರೆ ಈ ಸುದ್ದಿ ನಿಮಗಾಗಿ ರಾಷ್ಟ್ರೀಯ ಕುಟುಂಬ ಸವಲತ್ತು ಯೋಜನೆಯ (National Family Benefit Scheme) ಮೂಲಕ ನಿರ್ಗತಿಕ ಕುಟುಂಬಗಳಿಗೆ 30 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಮತ್ತು ಇದಕ್ಕಾಗಿ ನಿಯಮಗಳು ಮತ್ತು ಷರತ್ತುಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jan 23, 2022, 12:25 PM IST
  • ಆರ್ಥಿಕವಾಗಿ ತೊಂದರೆಗೊಳಗಾದ ಜನರಿಗೊಂದು ಉಪಯುಕ್ತ ಮಾಹಿತಿ
  • ಸರ್ಕಾರ 30 ಸಾವಿರ ರೂಪಾಯಿಗಳ ಪರಿಹಾರ ನೀಡುತ್ತಿದೆ
  • ಈ ಯೋಜನೆಯ ಪ್ರಯೋಜನ ಹೇಗೆ ಪಡೆಯಬಹುದು ತಿಳಿಯೋಣ ಬನ್ನಿ
National Family Benefit Scheme: ಈ ಸ್ಕೀಮ್ ಅಡಿ ನಿಮಗೆ ಉಚಿತವಾಗಿ ಸಿಗುತ್ತೆ 30,000 ರೂ.ಗಳ ಲಾಭ  title=
National Family Benefit Scheme (File Photo)

ನವದೆಹಲಿ: National Family Benefit Scheme - ಕೊರೊನಾ (Covid-19) ಕಾರಣದಿಂದ ನೀವೂ ಕೂಡ ಆರ್ಥಿಕ ತೊಂದರೆಗೆ ಒಳಗಾಗಿದ್ದೆರೆ ಈ ಸುದ್ದಿ ನಿಮಗಾಗಿ. ಹೌದು, ಇದಕ್ಕಾಗಿ ಸರ್ಕಾರಗಳು ಹಲವು ರೀತಿಯ ಯೋಜನೆಗಳನ್ನು (Government Scheme) ನಡೆಸುತ್ತಿದ್ದು, ದೇಶದ ಕೋಟ್ಯಂತರ ಜನರಿಗೆ ಆರ್ಥಿಕ ನೆರವು (Financial Aid) ಒದಗಿಸಲಾಗುತ್ತಿದೆ. ಬಿಎಸ್‌ಇ ಅಂತಹುದೇ ಒಂದು ಯೋಜನೆಯಾಗಿದೆ, ಅದರ ಅಡಿಯಲ್ಲಿ ಉತ್ತರ ಪ್ರದೇಶದ ಜನರು ಹಣಕಾಸಿನ ನೆರವು ಪಡೆಯುತ್ತಿದ್ದಾರೆ. ಇದರಲ್ಲಿ 30 ಸಾವಿರ ಪರಿಹಾರ ಮೊತ್ತ ನೀಡಲಾಗುತ್ತಿದೆ. ಈ ವಿಶೇಷ ಯೋಜನೆಯ ಹೆಸರು ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ (National Family Benefit Scheme) .

ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ ಎಂದರೇನು?
ಈ ವಿಶೇಷ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರಕಾರ 30,000 ರೂ. ನೆರವು ಒದಗಿಸುತ್ತಿದೆ. ವಾಸ್ತವದಲ್ಲಿ ಇದೊಂದು ಮರಣಾ ನಂತರದಣ ಸಹಾಯ ಯೋಜನೆಯಾಗಿದ್ದು, ಕಾರಣಾಂತರದಿಂದ ಕುಟುಂಬದಲ್ಲಿನ ಮುಖ್ಯ ಆದಾಯ ತರುವವರ ಮರಣಾನಂತರ ಅವರ ಸಂತ್ರಸ್ತ ಬಡ ಕುಟುಂಬಗಳಿಗೆ ಮಾತ್ರ ನೀಡಲಾಗುತ್ತದೆ. ಈ ವಿಶೇಷ ಯೋಜನೆಯ ಪ್ರಯೋಜನವನ್ನು ಉತ್ತರ ಪ್ರದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಕುಟುಂಬಗಳಿಗೆ (UP Rashtriya Parivarik Labh Yojana) ನೀಡಲಾಗುತ್ತಿದೆ.

ಹೇಗೆ ಅರ್ಜಿ ಸಲ್ಲಿಸಬೇಕು?
>> ಇದರಲ್ಲಿ ಅರ್ಜಿ ಸಲ್ಲಿಸಲು, ಮೊದಲು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ nfbs.upsdc.gov.in/ ಗೆ ಭೇಟಿ ನೀಡಿ
>> ಈಗ ಮುಖಪುಟ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
>> ಮುಖಪುಟದಲ್ಲಿ ನಿಮಗೆ 'ಹೊಸ ನೋಂದಣಿ' ಆಯ್ಕೆ ಸಿಗಲಿದೆ, ಅದರ ಮೇಲೆ ಕ್ಲಿಕ್ ಮಾಡಿ.
>> ಹೊಸ ನೋಂದಣಿ ನಮೂನೆಯು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ಕೇಳಲಾದ ಜಿಲ್ಲೆ, ನಿವಾಸಿ, ಅರ್ಜಿದಾರರ ವಿವರಗಳು, ಬ್ಯಾಂಕ್ ಖಾತೆ ವಿವರಗಳು, ಸತ್ತವರ ವಿವರಗಳು ಇತ್ಯಾದಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
>>  ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಈ ಯೋಜನೆಯ ಲಾಭ ಯಾರಿಗೆ ಸಿಗಲಿದೆ?
>> ಅರ್ಜಿದಾರರು ಉತ್ತರ ಪ್ರದೇಶದ ಖಾಯಂ ನಿವಾಸಿಯಾಗಿರಬೇಕು.
>> 18 ರಿಂದ 60 ವರ್ಷ ವಯಸ್ಸಿನ ಕುಟುಂಬ ಮುಖ್ಯಸ್ಥರು ಮರಣ ಹೊಂದಿದ ಕುಟುಂಬಗಳಿಗೆ ಮಾತ್ರ ಇದರ ಪ್ರಯೋಜನ ಸಿಗುತ್ತದೆ.
>> ಉತ್ತರ ಪ್ರದೇಶ ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯಡಿ, ನಗರ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 56,000 ಮೀರಬಾರದು.
>> ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ ರೂ 46000 ಮೀರಬಾರದು.
>> ಇದೇ ವೇಳೆ ಅರ್ಜಿದಾರರ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರಬೇಕು, ಆಗ ಮಾತ್ರ ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಬೇಕಾಗುವ ದಾಖಲೆಗಳು
- ಅರ್ಜಿದಾರರ ಆಧಾರ್ ಕಾರ್ಡ್
- ಗುರುತಿನ ಚೀಟಿ
- ರಹವಾಸಿ ಪುರಾವೆ
- ಮರಣ ಹೊಂದಿರುವ ಮನೆ ಮುಖ್ಯಸ್ಥನ ಮರಣ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಬ್ಯಾಂಕ್ ಖಾತೆ ಪಾಸ್ಬುಕ್
- ಮೊಬೈಲ್ ನಂಬರ
- ಮರಣಹೊಂದಿರುವ ಮನೆ ಮುಖ್ಯಸ್ಥನ ವಯಸ್ಸಿನ ಪ್ರಮಾಣಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ

ಇದನ್ನೂ ಓದಿ-Budget 2022 : ಕೇಂದ್ರ ಬಜೆಟ್ 2022 ರಲ್ಲಿ ಸಂಬಳ ಪಡೆಯುವ ವೃತ್ತಿಪರರಿಗೆ ಭರ್ಜರಿ ಸಿಹಿ ಸುದ್ದಿ! 

ಈ ವಿಷಯಗಳನ್ನು ನೆನಪಿನಲ್ಲಿಡಿ!
>> ಫಾರ್ಮ್ ಅನ್ನು ಇಂಗ್ಲಿಷ್‌ನಲ್ಲಿ ಭರ್ತಿ ಮಾಡಿ.
>> ಅರ್ಜಿದಾರರು ರಾಷ್ಟ್ರೀಯ ಮಟ್ಟದ ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
>> ರಾಷ್ಟ್ರೀಯ ಕುಟುಂಬ ಯೋಜನೆಯಡಿ ಸಹಕಾರಿ ಬ್ಯಾಂಕ್ ಖಾತೆಗೆ ಮಾನ್ಯತೆ ಇರುವುದಿಲ್ಲ
ತಹಸಿಲ್ ಮಟ್ಟದಿಂದ ನೀಡಲಾದ ಆದಾಯ ಪ್ರಮಾಣಪತ್ರ ಮಾತ್ರ ಮಾನ್ಯವಾಗಿರುತ್ತದೆ.
- ಅರ್ಜಿದಾರರು ತುಂಬಿದ ಮಾಹಿತಿಯನ್ನು ನಿಜವೆಂದು ಪರಿಗಣಿಸಲಾಗುತ್ತದೆ ಮತ್ತು ಯಾವುದೇ ರೀತಿಯ ದೋಷ ಕಂಡುಬಂದಲ್ಲಿ ಅರ್ಜಿದಾರರು ಅದಕ್ಕೆ ಜವಾಬ್ದಾರರಾಗಿರುತ್ತಾರೆ.
>> ಅರ್ಜಿದಾರರು ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಎಲ್ಲಾ ಪ್ರಮುಖ ದಾಖಲೆಗಳ ನಕಲು ಪ್ರತಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
>> ಮಾನ್ಯತೆ ಪಡೆದ ಆಸ್ಪತ್ರೆ, ನಗರ ಪಂಚಾಯತ್ ಅಥವಾ ತಹಸಿಲ್ ಮಟ್ಟದಿಂದ  ನೀಡಲಾದ ಮರಣ ಪ್ರಮಾಣಪತ್ರವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
>> ಫಲಾನುಭವಿಯ ಫೋಟೋ ಸಹಿ 20 KB ಅನ್ನು ಮೀರಬಾರದು ಮತ್ತು JPEG ಸ್ವರೂಪದಲ್ಲಿರಬೇಕು.
>> ಪಿಡಿಎಫ್ ರೂಪದಲ್ಲಿ ಫಲಾನುಭವಿಯ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್, ಸತ್ತವರ ಮರಣ ಪ್ರಮಾಣಪತ್ರ ಇತ್ಯಾದಿಗಳು 20KB ಅನ್ನು ಮೀರಬಾರದು.

ಇದನ್ನೂ ಓದಿ-Bank of Baroda Offer: ಅಗ್ಗದ ದರದಲ್ಲಿ ಮನೆ ಖರೀದಿಸಬೇಕೆ? ಈ ಬ್ಯಾಂಕ್ ನೀಡುತ್ತಿದೆ ನಿಮಗೊಂದು ಸುವರ್ಣಾವಕಾಶ

ಈ ರೀತಿ ಯೋಜನೆಯ ಲಾಭ ಪಡೆಯಿರಿ
ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಈ ಯೋಜನೆಯಡಿಯಲ್ಲಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಲಾಗುತ್ತದೆ. ಆದ್ದರಿಂದ ಅರ್ಜಿದಾರರು ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಯುಪಿ ರಾಷ್ಟ್ರೀಯ ಪರಿವಾರಿಕ್ ಲಾಭ್ ಯೋಜನೆ ಅಡಿಯಲ್ಲಿ, ಅರ್ಜಿದಾರರಿಗೆ ಸರ್ಕಾರವು ನೀಡುವ ಮೊತ್ತವನ್ನು ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಒದಗಿಸಲಾಗುತ್ತದೆ. ಈ ಬಗ್ಗೆ ನಿಮಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು nfbs.upsdc.gov.in/ ಲಿಂಕ್‌ನಲ್ಲಿ ವಿವರವಾದ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ -ICICI Bank ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್, ಈಗ ಪಾವತಿ ತಡವಾದ್ರೆ ಬೀಳುತ್ತೆ ಭಾರೀ ದಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News