Job Offer In PNB : ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ತೀಚೆಗೆ ಅಪ್ರೆಂಟಿಸ್ ಹುದ್ದೆಗೆ ((Apprentice) ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತ ಒಟ್ಟು 2700 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಜೂನ್ 30 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು,14 ಜುಲೈ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.ಅರ್ಜಿಯನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬೇಕು. ಯಾವುದೇ ಆಫ್‌ಲೈನ್ ಅರ್ಜಿಯನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ.


COMMERCIAL BREAK
SCROLL TO CONTINUE READING

PNB ಅಪ್ರೆಂಟಿಸ್ ಅಧಿಸೂಚನೆ 2024 :
ಅಧಿಸೂಚನೆಯನ್ನು ಈ ನೇರ ಲಿಂಕ್ ಮೂಲಕ
https://www.pnbindia.in/Recruitments.aspx ಪರಿಶೀಲಿಸಬಹುದು. 


PNB ಅಪ್ರೆಂಟಿಸ್ ಪರೀಕ್ಷೆ 2024 : 
ಅರ್ಜಿಗಳನ್ನು ಯಶಸ್ವಿಯಾಗಿ ಸಲ್ಲಿಸಿದ ಅಭ್ಯರ್ಥಿಗಳನ್ನು ಜುಲೈ 28 ರಂದು ಆನ್‌ಲೈನ್ ಪರೀಕ್ಷೆಗೆ ಕರೆಯಲಾಗುವುದು.ಅಭ್ಯರ್ಥಿಗಳು ಸಾಮಾನ್ಯ/ಹಣಕಾಸು ಅರಿವು, ಸಾಮಾನ್ಯ ಇಂಗ್ಲಿಷ್, ಕ್ವಾಂಟಿಟೇಟಿವ್ ಮತ್ತು ರೀಸನಿಂಗ್ ಆಪ್ಟಿಟ್ಯೂಡ್ ಮತ್ತು ಕಂಪ್ಯೂಟರ್‌ನಿಂದ ಪ್ರಶ್ನೆಗಳನ್ನು ಹೊಂದಿರುತ್ತಾರೆ.ಪ್ರತಿ ವಿಭಾಗದಲ್ಲಿ 25 ಅಂಕಗಳ 25 ಪ್ರಶ್ನೆಗಳಿರುತ್ತವೆ.


ಇದನ್ನೂ ಓದಿ Massive Tariff Hikes: ಜುಲೈ 3ರೊಳಗೆ ರಿಚಾರ್ಜ್‌ ಮಾಡಿಸಿಕೊಳ್ಳದಿದ್ರೆ ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!


PNB ಅಪ್ರೆಂಟಿಸ್ ಹುದ್ದೆಯ ವಿವರಗಳು: 
ಆಡಳಿತಾತ್ಮಕ ಕಾರ್ಯಾಚರಣೆಯ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ತರಬೇತಿಗಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶದೊಳಗೆ ಯಾವುದೇ ವೃತ್ತವನ್ನು ನಿಯೋಜಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶಾದ್ಯಂತ 2700 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. 


PNB ಅಪ್ರೆಂಟಿಸ್ ಅರ್ಹತಾ ಮಾನದಂಡ :
ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಯು ಕನಿಷ್ಟ ಪದವೀಧರರಾಗಿರಬೇಕು. 


ವಯೋಮಿತಿ:
ಈ ಹುದ್ದೆಗಳಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನ ಮಿತಿಯನ್ನು ಇರಿಸಲಾಗಿದೆ. 


PNB ಅಪ್ರೆಂಟಿಸ್ ವೇತನ : 
ಅಭ್ಯರ್ಥಿಗಳನ್ನು ಒಂದು ವರ್ಷದ ಒಪ್ಪಂದದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಈ ರೀತಿಯಲ್ಲಿ ಅಭ್ಯರ್ಥಿಗಳು ಸ್ಟೈಫಂಡ್ ಪಡೆಯುತ್ತಾರೆ.
ಗ್ರಾಮೀಣ/ಅರೆ ನಗರ - ರೂ 10,000
ನಗರ - 12,000 ರೂ 
ಮೆಟ್ರೋ -  15,000 ರೂ


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 18 ತಿಂಗಳ ಬಾಕಿ ಡಿಎಯ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್ !


PNB ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯು
ಲಿಖಿತ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆಮಾಡಲ್ಪಡುತ್ತದೆ.


PNB ಅಪ್ರೆಂಟಿಸ್ ನೇಮಕಾತಿ 2024 ಗೆ ಅರ್ಜಿ ಸಲ್ಲಿಸುವುದು ಹೇಗೆ ? :
೧.PNB ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
೨. ನೇಮಕಾತಿ ವಿಭಾಗದಲ್ಲಿ 'ClICK HERE TO APPLY ONLINE' ಲಿಂಕ್ ಅನ್ನು ಕ್ಲಿಕ್ ಮಾಡಿ.
೩.ಇದು ನಿಮ್ಮನ್ನು ಹೊಸ ವೆಬ್‌ಸೈಟ್‌ಗೆ (bfsissc.com) ರೀ ಡೈರೆಕ್ಟ್ ಮಾಡುತ್ತದೆ. 
೪.ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
೫.ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
೬. ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಅರ್ಜಿ ಶುಲ್ಕವನ್ನು ಪಾವತಿಸಿ. 
೭.ಈಗ ನಿಮ್ಮ ಫಾರ್ಮ್ ಅನ್ನು ಸಬ್ಮಿಟ್ ಮಾಡಿ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ. 


ಅರ್ಜಿ ಶುಲ್ಕಗಳು :
PwBD - 400/-+GST @18% =  472 ರೂಪಾಯಿ 
Female / SC/ ST - 600/-+GST @18% = 708 ರೂಪಾಯಿ 
GEN/OBC - 800/-+GST@18% =  944 ರೂಪಾಯಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.