Rules Changes From 1st July: ಕ್ರೆಡಿಟ್ ಕಾರ್ಡ್, Paytm ವ್ಯಾಲೆಟ್ ಸೇರಿದಂತೆ ಈ ತಿಂಗಳಿನಿಂದ ಬದಲಾಗಲಿರುವ ಪ್ರಮುಖ ನಿಯಮಗಳಿವು

Rules Changes From 1st July: ಜುಲೈ ತಿಂಗಳಲ್ಲಿ ನೇರವಾಗಿ ನಿಮ್ಮ ಜೇಬಿಗೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗಲಿವೆ. ಜೊತೆಗೆ ಈ ತಿಂಗಳು ಹಣಕಾಸಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಲು ಗಡುವು ಕೂಡ ಮುಗಿಯಲಿವೆ. ಹಾಗಿದ್ದರೆ, ಜುಲೈ ತಿಂಗಳಿನಲ್ಲಿ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ತಿಳಿಯೋಣ... 

Written by - Yashaswini V | Last Updated : Jul 1, 2024, 08:26 AM IST
  • ಇಂದಿನಿಂದ ಕೆಲವು ಪ್ರಮುಖ ನಿಯಮಗಳು ಬದಲಾಗಲಿವೆ.
  • ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಕೆಲಸಗಳನ್ನು ಮಾಡಲು ಈ ತಿಂಗಳಾಂತ್ಯದವರೆಗೆ ಅವಕಾಶ
  • ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುವ ಆ ಪ್ರಮುಖ ನಿಯಮಗಳು ಯಾವುವು
Rules Changes From 1st July: ಕ್ರೆಡಿಟ್ ಕಾರ್ಡ್, Paytm ವ್ಯಾಲೆಟ್ ಸೇರಿದಂತೆ ಈ ತಿಂಗಳಿನಿಂದ ಬದಲಾಗಲಿರುವ ಪ್ರಮುಖ ನಿಯಮಗಳಿವು  title=

Rules Changes From 1st July: 2024ರಲ್ಲಿ ಆರು ಮಾಸಗಳು ಮುಗಿದು, ಏಳನೇ ತಿಂಗಳಾದ ಜುಲೈ ಆರಂಭವಾಗಿದೆ. ಜುಲೈ ಆರಂಭದೊಂದಿಗೆ ಇಂದಿನಿಂದ ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುವ ಕೆಲವು ನಿಯಮಗಳು ಕೂಡ ಬದಲಾಗಲಿವೆ. ಅಷ್ಟೇ ಅಲ್ಲ, ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಕೆಲಸಗಳನ್ನು ಮಾಡಲು ಈ ತಿಂಗಳಾಂತ್ಯದವರೆಗೆ ಮಾತ್ರವೇ ಅವಕಾಶವಿದ್ದು, ತಪ್ಪದೇ ಆ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ಹಾಗಿದ್ದರೆ, ಇಂದಿನಿಂದ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ನೋಡುವುದಾದರೆ... 

ಪೇಟಿಎಂ ವಾಲೆಟ್: 
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ವೆಬ್‌ಸೈಟ್ ಪ್ರಕಾರ, "ಕಳೆದ 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ವಹಿವಾಟುಗಳನ್ನು ಹೊಂದಿರದ ಮತ್ತು ಶೂನ್ಯ ಬ್ಯಾಲೆನ್ಸ್ ಹೊಂದಿರುವ ಎಲ್ಲಾ ವ್ಯಾಲೆಟ್‌ಗಳನ್ನು ಜುಲೈ 20, 2024 ರಿಂದ ಮುಚ್ಚಲಾಗುವುದು" ಎಂದು  ಘೋಷಿಸಿದೆ.

ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್ ನಿಯಮಗಳು: 
ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India), "ಜುಲೈ 1, 2024 ರಿಂದ ಕೆಲವು ಕ್ರೆಡಿಟ್ ಕಾರ್ಡ್‌ಗಳಿಗೆ (Credt Cards) ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಸಂಗ್ರಹವನ್ನು ಸ್ಥಗಿತಗೊಳಿಸಲಾಗುವುದು"  ಎಂದು ಘೋಷಿಸಿದೆ.  

ಇದನ್ನೂ ಓದಿ- ಕೇಂದ್ರ ಸರ್ಕಾರದ ಸಾಲ 171‌ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದ ಹಣಕಾಸು ಸಚಿವಾಲಯ!

ಎಸ್‌ಬಿ‌ಐ ವೆಬ್‌ಸೈಟ್ ಪ್ರಕಾರ, ಜುಲೈ 15, 2024ರಿಂದ ಜಾರಿಗೆ ಬರುವಂತೆ ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳು (Reward Points) ಅನ್ವಯವಾಗದ ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿ ಈ ಕೆಳಕಂಡಂತಿದೆ:- 
* ಏರ್ ಇಂಡಿಯಾ ಎಸ್‌ಬಿ‌ಐ ಪ್ಲಾಟಿನಂ ಕಾರ್ಡ್
* ಏರ್ ಇಂಡಿಯಾ ಎಸ್‌ಬಿ‌ಐ  ಸಿಗ್ನೇಚರ್ ಕಾರ್ಡ್
* ಕೇಂದ್ರ ಎಸ್‌ಬಿ‌ಐ ಸೆಲೆಕ್ಟ್+ ಕಾರ್ಡ್
* ಚೆನ್ನೈ ಮೆಟ್ರೋ ಎಸ್‌ಬಿ‌ಐ ಕಾರ್ಡ್
* ಕ್ಲಬ್ ವಿಸ್ತಾರಾ ಎಸ್‌ಬಿ‌ಐ ಕಾರ್ಡ್
* ಕ್ಲಬ್ ವಿಸ್ತಾರ ಎಸ್‌ಬಿ‌ಐ ಕಾರ್ಡ್ ಪ್ರೈಮ್
* ದೆಹಲಿ ಮೆಟ್ರೋ ಎಸ್‌ಬಿ‌ಐ ಕಾರ್ಡ್
* ಎತಿಹಾದ್ ಅತಿಥಿ ಎಸ್‌ಬಿ‌ಐ ಕಾರ್ಡ್
* ಎತಿಹಾದ್ ಅತಿಥಿ ಎಸ್‌ಬಿ‌ಐ ಪ್ರೀಮಿಯರ್ ಕಾರ್ಡ್
* ಫ್ಯಾಬಿಂಡಿಯಾ ಎಸ್‌ಬಿ‌ಐ ಕಾರ್ಡ್
* ಫ್ಯಾಬ್ ಇಂಡಿಯಾ ಎಸ್‌ಬಿ‌ಐ ಕಾರ್ಡ್ ಆಯ್ಕೆ
* ಐ‌ಆರ್‌ಸಿ‌ಟಿ‌ಸಿ ಎಸ್‌ಬಿ‌ಐ ಕಾರ್ಡ್
* ಐ‌ಆರ್‌ಸಿ‌ಟಿ‌ಸಿ ಎಸ್‌ಬಿ‌ಐ ಕಾರ್ಡ್ ಪ್ರೀಮಿಯರ್
* ಮುಂಬೈ ಮೆಟ್ರೋ ಎಸ್‌ಬಿ‌ಐ ಕಾರ್ಡ್
* ನೇಚರ್ ಬಾಸ್ಕೆಟ್ ಎಸ್‌ಬಿ‌ಐ ಕಾರ್ಡ್
* ನೇಚರ್ ಬಾಸ್ಕೆಟ್ ಎಸ್‌ಬಿ‌ಐ ಕಾರ್ಡ್ ಎಲೈಟ್
* ಓಲಾ ಮನಿ ಎಸ್‌ಬಿ‌ಐ ಕಾರ್ಡ್
* ಪೇಟಿಎಂ ಎಸ್‌ಬಿ‌ಐ ಕಾರ್ಡ್
* ಪೇಟಿಎಂ ಎಸ್‌ಬಿ‌ಐ ಕಾರ್ಡ್ ಸೆಲೆಕ್ಟ್
* ರಿಲಯನ್ಸ್ ಎಸ್‌ಬಿ‌ಐ ಕಾರ್ಡ್
* ರಿಲಯನ್ಸ್ ಎಸ್‌ಬಿ‌ಐ ಕಾರ್ಡ್ ಪ್ರೈಮ್
* ಯಾತ್ರಾ ಎಸ್‌ಬಿ‌ಐ ಕಾರ್ಡ್

ಐ‌ಸಿ‌ಐ‌ಸಿ‌ಐ ಕ್ರೆಡಿಟ್ ಕಾರ್ಡ್ ಶುಲ್ಕಗಳು: 
ಐ‌ಸಿ‌ಐ‌ಸಿ‌ಐ ಬ್ಯಾಂಕ್ (ICICI Bank) ಜುಲೈ 1, 2024 ರಿಂದ ಅನ್ವಯವಾಗುವಂತೆ ಕೆಲವು ಕ್ರೆಡಿಟ್ ಕಾರ್ಡ್ ಸೇವೆಗಳಿಗೆ ತಿದ್ದುಪಡಿಗಳನ್ನು ಘೋಷಿಸಿದೆ. ಎಲ್ಲಾ ಕಾರ್ಡ್‌ಗಳಲ್ಲಿ (ಎಮರಾಲ್ಡ್ ಪ್ರೈವೇಟ್ ಮೆಟಲ್ ಕ್ರೆಡಿಟ್ ಕಾರ್ಡ್ ಹೊರತುಪಡಿಸಿ) ಕಾರ್ಡ್ ರಿಪ್ಲೇಸ್‌ಮೆಂಟ್ ಶುಲ್ಕವನ್ನು 100 ರೂ.ಗಳಿಂದ 200 ರೂ.ಗಳಿಗೆ ಹೆಚ್ಚಿಸಲಾಗಿದೆ. 

ಸ್ಥಗಿತಗೊಳ್ಳುವ ಕ್ರೆಡಿಟ್ ಕಾರ್ಡ್ ಶುಲ್ಕಗಳ ವಿವರ: 
* ಚೆಕ್/ನಗದು ಪಿಕ್ ಅಪ್ ಶುಲ್ಕ:
 
- ಪ್ರತಿ ಪಿಕ್-ಅಪ್‌ಗೆ 100 ರೂ. ಶುಲ್ಕವನ್ನು ನಿಲ್ಲಿಸಲಾಗುತ್ತದೆ.

- ಶುಲ್ಕ ಸ್ಲಿಪ್ ವಿನಂತಿ: 
ಪ್ರತಿ ಚಾರ್ಜ್ ಸ್ಲಿಪ್‌ಗೆ 100 ರೂ. ಶುಲ್ಕವನ್ನು ನಿಲ್ಲಿಸಲಾಗುತ್ತದೆ.

* ಡಯಲ್-ಎ-ಡ್ರಾಫ್ಟ್ - ವಹಿವಾಟು ಶುಲ್ಕ:
300 ರೂ.ಗಳ ಕನಿಷ್ಠ ವೆಚ್ಚಕ್ಕೆ ಒಳಪಟ್ಟಿರುವ ಡ್ರಾಫ್ಟ್ ಮೌಲ್ಯದ ಮೊತ್ತದ 3% ರಷ್ಟು ಕಡಿತಗೊಳಿಸುವುದನ್ನು ನಿಲ್ಲಿಸಲಾಗುತ್ತದೆ.

* ಹೊರಠಾಣೆ ಚೆಕ್ ಪ್ರಕ್ರಿಯೆ ಶುಲ್ಕ ಸಹ ಚೆಕ್ ಮೌಲ್ಯದ 1%, ಕನಿಷ್ಠ 100 ರೂ.ಗೆ ಒಳಪಟ್ಟಿರುತ್ತದೆ.

* ನಕಲು ಹೇಳಿಕೆ ವಿನಂತಿ (3 ತಿಂಗಳಿಗಿಂತ ಹೆಚ್ಚು)
ನಕಲು ಹೇಳಿಕೆಗೆ 100 ರೂ.ಗಳ ಶುಲ್ಕವನ್ನು ನಿಲ್ಲಿಸಲಾಗುವುದು.

ಇದನ್ನೂ ಓದಿ- Bank Holidays In July: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್

ಐ‌ಟಿ‌ಆರ್ ಗಡುವು: 
ನೀವು ಇನ್ನೂ ಕೂಡ ಹಣಕಾಸು ವರ್ಷ 2023-24 (AY 2024-25) ಗಾಗಿ ಐ‌ಆರ್‌ಟಿ (ITR) ಫೈಲ್ ಮಾಡಿಲ್ಲದಿದ್ದರೆ ಈ ಕೆಲಸವನ್ನು ಪೂರ್ಣಗೊಳಿಸಲು ಜುಲೈ 31, 2024ಕೊನೆಯ ದಿನವಾಗಿದೆ. 

ಪಿ‌ಎನ್‌ಬಿ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್: 
ಎಲ್ಲಾ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ (Debit Card) ರೂಪಾಂತರಗಳಿಗೆ ಲೌಂಜ್ ಪ್ರವೇಶವನ್ನು ಪರಿಷ್ಕರಿಸಲಾಗಿದೆ. ಹೊಸ ನಿಯಮಗಳು ಜುಲೈ 1, 2024 ರಿಂದ ಜಾರಿಗೆ ಬರಲಿವೆ ಎಂದು ಪಿ‌ಎನ್‌ಬಿ ಮಾಹಿತಿ ನೀಡಿದೆ. 

ಪಿ‌ಎನ್‌ಬಿ ಬ್ಯಾಂಕ್ ನೀರುವ ಮಾಹಿತಿಯ ಪ್ರಕಾರ, ಪ್ರತಿ ತ್ರೈಮಾಸಿಕಕ್ಕೆ 1 (ಒಂದು) ದೇಶೀಯ ವಿಮಾನ ನಿಲ್ದಾಣ/ರೈಲ್ವೆ ಲೌಂಜ್ ಪ್ರವೇಶವನ್ನು ಹಾಗೂ ವರ್ಷಕ್ಕೆ 2 (ಎರಡು) ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೋಣೆಗೆ ಪ್ರವೇಶ ಸೌಲಭ್ಯವನ್ನು ನೀಡಲಾಗುವುದು. 

ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು: 
ಆಕ್ಸಿಸ್ ಬ್ಯಾಂಕ್ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಖಾತೆಗಳು ಸೇರಿದಂತೆ ಎಲ್ಲಾ ಸಂಬಂಧಗಳನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ನೀಡಿದೆ. ಜುಲೈ 15, 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News