ಬ್ಯಾಂಕ್ ಎಫ್ ಡಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಅದ್ಭುತ ಉಳಿತಾಯ ಯೋಜನೆಗಳು
ಸರ್ಕಾರವು ಈ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಬದಲಾಯಿಸುತ್ತಲೇ ಇರುತ್ತದೆ. ಈ ಹೂಡಿಕೆ ಸುರಕ್ಷಿತವಾಗಿಯೂ ಇರುವುದು. ಮಾತ್ರವಲ್ಲ ತೆರಿಗೆ ವಿನಾಯಿತಿಯ ಲಾಭವನ್ನು ಪಡೆದುಕೊಳ್ಳಬಹುದು.
ಬೆಂಗಳೂರು : ಹಣವನ್ನು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಹಣ ಹೂಡಿಕೆ ಮಾಡುವಾಗ ಹೂಡಿಕೆ ಮಾಡಿದ ಹಣದ ಮೇಲೆ ಹೆಚ್ಚಿನ ಬಡ್ಡಿ ಹಣವನ್ನು ನಿರೀಕ್ಷೆ ಮಾಡುತ್ತೇವೆ. ಬ್ಯಾಂಕ್ ಸ್ಥಿರ ಠೇವಣಿಗಳ (ಎಫ್ ಡಿ ) ಬದಲಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ಸಿಗುತ್ತದೆ. ಅಲ್ಲದೆ ಈ ಹೂಡಿಕೆ ಸುರಕ್ಷಿತವಾಗಿಯೂ ಇರುವುದು. ಮಾತ್ರವಲ್ಲ ತೆರಿಗೆ ವಿನಾಯಿತಿಯ ಲಾಭವನ್ನು ಪಡೆದುಕೊಳ್ಳಬಹುದು.
ಭಾರತೀಯ ಅಂಚೆ ಇಲಾಖೆ ಹೂಡಿಕೆದಾರರಿಗೆ ಹಲವಾರು ಠೇವಣಿ ಯೋಜನೆಗಳನ್ನು ನೀಡುತ್ತದೆ. ಇವುಗಳನ್ನು ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಎಂದು ಕರೆಯಲಾಗುತ್ತದೆ. ಪ್ರಸ್ತುತ, 9 ಅಂಚೆ ಕಚೇರಿ ಮೂಲಕ ಉಳಿತಾಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಒಂಬತ್ತು ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ದಿ ಯೋಜನೆ, (SSY), ರಾಷ್ಟ್ರೀಯ ಉಳಿತಾಯ ಬಾಂಡ್ (NSC),ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಸೇರಿವೆ. ಸರ್ಕಾರವು ಈ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಬದಲಾಯಿಸುತ್ತಲೇ ಇರುತ್ತದೆ.
ಇದನ್ನೂ ಓದಿ : Stock Market Update: ಸತತ ಎರಡನೇ ದಿನ ಕುಸಿದ ಷೇರು ಮಾರುಕಟ್ಟೆ, 18500 ಕ್ಕಿಂತ ಕೆಳಕ್ಕೆ ಜಾರಿದ ನಿಫ್ಟಿ ಷೇರು ಸೂಚ್ಯಂಕ
ಇತ್ತೀಚಿನ ಪರಿಷ್ಕರಣೆಯ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್‌ಬಿಐ ), ಐಸಿಐಸಿಐ, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಕೆಲವು ಯೋಜನೆಗಳನ್ನು ಪರಿಚಯಿಸಿವೆ. ಅವು ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತವೆ. ಎಫ್‌ಡಿಗಿಂತಲೂ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ.
ಈ ಎರಡೂ ಯೋಜನೆಗಳು 8% ಕ್ಕಿಂತ ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ :
ಸುಕನ್ಯಾ ಸಮೃದ್ದಿ ಯೋಜನೆ (SSY) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (SCSS) ಮಾಡುವ ಠೇವಣಿಗಳ ಮೇಲೆ 8% ಕ್ಕಿಂತ ಹೆಚ್ಚಿನ ಬಡ್ಡಿದರ ಸಿಗುತ್ತವೆ.
ಸುಕನ್ಯಾ ಸಮೃದ್ದಿ ಯೋಜನೆ :
ಸುಕನ್ಯಾ ಸಮೃದ್ದಿ ಯೋಜನೆ ( SSY) ಭಾರತ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಇದೊಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆ ಹೆಣ್ಣು ಮಗುವಿನ ಪೋಷಕರು ಮಗುವಿನ ದೀರ್ಘಕಾಲೀನ ಆರ್ಥಿಕ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. SSY ಯೋಜನೆಯಲ್ಲಿ, ಮಾಡುವ ಹೂಡಿಕೆ ಮೇಲೆ ಭಾರತ ಸರ್ಕಾರವು ವಾರ್ಷಿಕ 8 ಪ್ರತಿಶತದಷ್ಟು ಬಡ್ಡಿದರವನ್ನು ಒದಗಿಸುತ್ತದೆ.
ಇದನ್ನೂ ಓದಿ : SC: ಎರಡು ಸಾವಿರ ರೂ.ಗಳ ನೋಟು ಬದಲಾವಣೆ Gallery Gujarati Import - News ವಿರುದ್ಧ ಅರ್ಜಿ ತಿರಸ್ಕರಿಸಿದ ಸುಪ್ರೀಂ ನಕಾರ, ಕಾರಣ ಇಲ್ಲಿದೆ
ಹಿರಿಯ ನಾಗರಿಕರ ಉಳಿತಾಯ ಯೋಜನೆ :
60 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಮಾಡುವ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು. ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮೇಲೆ 8.2% ಬಡ್ಡಿದರವನ್ನು ನೀಡುತ್ತವೆ.
ರಾಷ್ಟ್ರೀಯ ಉಳಿತಾಯ ಬಾಂಡ್ :
ಪ್ರಸ್ತುತ, ರಾಷ್ಟ್ರೀಯ ಉಳಿತಾಯ ಬಾಂಡ್ ನಲ್ಲಿ ಮಾಡುವ ಹೂಡಿಕೆ ಮೇಲೆ 7.7% ಬಡ್ಡಿದರವನ್ನು ನೀಡುತ್ತದೆ. ಎನ್‌ಎಸ್‌ಸಿಯಲ್ಲಿ ಮಾಡುವ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಇಲ್ಲಿ ಕನಿಷ್ಠ ಹೂಡಿಕೆ 100 ರೂಪಾಯಿಯಿಂದ ಆರಂಭವಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಒಂದೂವರೆ ಲಕ್ಷದವರೆಗೆ ಮಾಡುವ ಠೇವಣಿ ಮೇಲೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.