Post Office Monthly Investment Scheme : ಜನರು ಗಳಿಸಿದ ಹಣವನ್ನು ಉಳಿಸಲು ಇಷ್ಟಪಡುತ್ತಾರೆ. ವ್ಯರ್ಥವಾಗದಂತೆ ಹೂಡಿಕೆ ಮಾಡಲು ಬಯಸುತ್ತಾರೆ. ಪ್ರತಿ ತಿಂಗಳು ಹೂಡಿಕೆ ಮಾಡುವ ಪ್ಲ್ಯಾನ್‌ ಇರುವವರಿಗೆ ಅಂಚೆ ಕಚೇರಿಯ ಈ ಯೋಜನೆ ಉತ್ತಮವಾಗಿದೆ. ನೀವು ಸರ್ಕಾರಿ ಖಾತರಿ ಮತ್ತು ಠೇವಣಿ ಯೋಜನೆಯಲ್ಲಿ ಸಿಂಗಲ್‌ ಮತ್ತು ಜಂಟಿ ಖಾತೆಯ ಸೌಲಭ್ಯವನ್ನು ಪಡೆಯುತ್ತೀರಿ. ಒಂದೇ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ ಮತ್ತು ಜಂಟಿ ಖಾತೆಯಲ್ಲಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದಾಗಿದೆ. 


COMMERCIAL BREAK
SCROLL TO CONTINUE READING

ನೀವು ಕನಿಷ್ಟ 5 ವರ್ಷಗಳವರೆಗೆ ಈ ಹಣವನ್ನು ಠೇವಣಿ ಮಾಡಬೇಕಾಗುವುದು. ಈ ಖಾತೆಯಲ್ಲಿ ಪಡೆದ ಬಡ್ಡಿಯಿಂದ ನೀವು ಆದಾಯ ಗಳಿಸುತ್ತೀರಿ. ಠೇವಣಿ ಮೊತ್ತವೂ ಸುರಕ್ಷಿತವಾಗಿ ಉಳಿಯುತ್ತದೆ. ಇದರಲ್ಲಿ ನೀವು ಜಂಟಿ ಖಾತೆಯ ಮೂಲಕ 9,250 ರೂ.ವರೆಗೆ ಗಳಿಸಬಹುದು. ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿ ಒಟ್ಟಿಗೆ ಹೂಡಿಕೆ ಮಾಡಿದರೆ, ವೃದ್ಧಾಪ್ಯದಲ್ಲಿ ನಿಮ್ಮ ಮಾಸಿಕ ಆದಾಯವನ್ನು ನೀವು ವ್ಯವಸ್ಥಿತವಾಗಿ ರೂಪಿಸಿಕೊಳ್ಳಬಹುದು. 


ಇದನ್ನೂ ಓದಿ: Good News: PM Kisan 16ನೇ ಕಂತಿನ ನಿರೀಕ್ಷೆಗೆ ತೆರೆ, ಈ ದಿನ ಬಿಡುಗಡೆಯಾಗಲಿದೆ ಹಣ! 


ಇಬ್ಬರು ವ್ಯಕ್ತಿಗಳು ಒಂದೇ ಖಾತೆಯನ್ನು POMIS ನಲ್ಲಿ ತೆರೆದು ಅದರಲ್ಲಿ 9 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ, ಅವರು ಒಂದು ವರ್ಷದಲ್ಲಿ 66,600 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದು. 5 ವರ್ಷಗಳಲ್ಲಿ ಬಡ್ಡಿಯಿಂದ 3,33,000 ರೂ ಗಳಿಸಬಹುದು. ನೀವು ಪ್ರತಿ ತಿಂಗಳು ಸುಮಾರು 5,550 ರೂ.ಗಳನ್ನು ಬಡ್ಡಿಯಿಂದ ಗಳಿಸಬಹುದು.


POMIS ಯೋಜನೆಯನ್ನು ದೇಶದ ಯಾವುದೇ ನಾಗರಿಕರು ತೆರೆಯಬಹುದು. ಇದರಲ್ಲಿ ನಿಮ್ಮ ಮಗುವಿನ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಮಗುವಿಗೆ 10 ವರ್ಷ ವಯಸ್ಸಾದಾಗ ಖಾತೆಯನ್ನು ಸ್ವತಃ ನಿರ್ವಹಿಸುವ ಹಕ್ಕನ್ನು ಆ ಮಗು ಪಡೆಯಬಹುದು. ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಲು, ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವುದು ಅಗತ್ಯವಾಗಿದೆ. ಐಡಿ ಪುರಾವೆಗಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಹ ಅಗತ್ಯವಿದೆ. 


ಇದನ್ನೂ ಓದಿ:  Formula 12-15-20, ಇದು 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 40ನೇ ವಯಸ್ಸಲ್ಲಿ ಕೋಟ್ಯಾಧಿಪತಿಯಾಗುವ ಸರಳ ಸೂತ್ರ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.