Formula 12-15-20, ಇದು 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 40ನೇ ವಯಸ್ಸಲ್ಲಿ ಕೋಟ್ಯಾಧಿಪತಿಯಾಗುವ ಸರಳ ಸೂತ್ರ!

Crorpati Formula: ಕೋಟ್ಯಾಧಿಪತಿಯಾವುದರ ಹಿಂದೆ ಯಾವುದೇ ರಾಕೆಟ್ ಸೈನ್ಸ್ ಇಲ್ಲ. ಇದಕ್ಕಾಗಿ ನೀವು ಮಾಡಬೇಕಾದುದು ಕೇವಲ ಹೂಡಿಕೆಯ ತಂತ್ರ. ಇಲ್ಲಿ ನಾವು ನಿಮಗಾಗಿ ಒಂದು ಸರಳ ಸೂತ್ರವನ್ನು ಹೇಳುತ್ತಿದ್ದು, ಈ ಸೂತ್ರವನ್ನು ಅನುಸರಿಸುವ ಮೂಲಕ ನೀವು ಕೇವಲ ನಿಮ್ಮ 40ನೇ ವಯಸ್ಸಿನಲ್ಲಿಯೇ ಕೋಟ್ಯಾಧಿಪತಿಯಾಗಬಹುದು. (Business News In Kannada)  

Written by - Nitin Tabib | Last Updated : Feb 22, 2024, 01:58 PM IST
  • ಎಸ್ಐಪಿ ಮೂಲಕ ನೀವು ಪ್ರತಿ ತಿಂಗಳು 20,000 ರೂಪಾಯಿಗಳನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಠೇವಣಿ ಮಾಡಿದರೆ,
  • ನೀವು 15 ವರ್ಷಗಳಲ್ಲಿ ಒಟ್ಟು 36,00,000 ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ.
  • ನೀವು ಈ ಹೊಂದಿಕೆಗೆ ಎಸ್ಐಪಿ ಕ್ಯಾಲ್ಕುಲೇಟರ್ ಪ್ರಕಾರ, ನೀವು ಶೇಕಡಾ 12 ರ ದರದಲ್ಲಿ 64,91,520 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ.
Formula 12-15-20, ಇದು 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 40ನೇ ವಯಸ್ಸಲ್ಲಿ ಕೋಟ್ಯಾಧಿಪತಿಯಾಗುವ ಸರಳ ಸೂತ್ರ! title=

How To Become Crorepati: ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿನ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿ ಉತ್ತಮ ಜೀವನ ಸಾಗಿಸಬೇಕು ಅಂದುಕೊಳ್ಳುತ್ತಾನೆ. ಇದಕ್ಕಾಗಿ, ಆತನ ಬಳಿ ಉತ್ತಮ ಪ್ರಮಾಣದ ಹಣವನ್ನು ಹೊಂದಿರುವುದು ಅವಶ್ಯಕ ಮತ್ತು ಹಣವನ್ನು ಸಂಗ್ರಹಿಸುವ ಉತ್ತಮ ಮಾರ್ಗವೆಂದರೆ ಹೂಡಿಕೆ. ನೀವು ಎಷ್ಟು ಬೇಗ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರೋ ಅಷ್ಟು ಬೇಗ ನೀವು ಉತ್ತಮ ಪ್ರಮಾಣದ ಹಣವನ್ನು ಕಲೆ ಹಾಕಬಹುದು. ಆದರೆ ಇದಕ್ಕಾಗಿ ನೀವು ಬಂಪರ್ ರಿಟರ್ನ್ಸ್ ಪಡೆಯುವ ಯೋಜನೆಯನ್ನು ಆಯ್ಕೆ ಮಾಡುವುದು ಮುಖ್ಯ. 40 ನೇ ವಯಸ್ಸಿಗೆ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸುವ ಒಂದು ಯೋಜನೆ ಮತ್ತು ವಿಶೇಷ ಸೂತ್ರದ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. (Business News In Kannada)

ಈ ಸೂತ್ರದಿಂದ ನೀವು ಕೋಟ್ಯಾಧಿಪತಿಯಾಗಬಹುದು
ಕೋಟ್ಯಾಧೀಶರಾಗುವುದರ ಹಿಂದೆ ಯಾವುದೇ ರಾಕೆಟ್ ಸೈನ್ಸ್ ಇಲ್ಲ, ಅದಕ್ಕಾಗಿ ನೀವು ಸರಿಯಾದ ಹೂಡಿಕೆ ತಂತ್ರವನ್ನು ಅಳವಡಿಸಿಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ, 12-15-20 ರ ಸೂತ್ರವು ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇದರಲ್ಲಿ 12 ಅಂದರೆ 12% ರಿಟರ್ನ್, 15 ಅಂದರೆ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ ಮತ್ತು 20 ಅಂದರೆ 20,000 ರೂ.ಗಳನ್ನು ಮಾಸಿಕ ಹೂಡಿಕೆ ಮಾಡಬೇಕಾಗುತ್ತದೆ. ಈ ಸೂತ್ರದ ಮೂಲಕ, ನೀವು 25 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 40 ನೇ ವಯಸ್ಸಿಗೆ ನೀವು ಕೋಟ್ಯಾಧೀಶರಾಗುವಿರಿ.

ಎಲ್ಲಿ ಹೂಡಿಕೆ ಮಾಡಬೇಕು
ಈಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮತ್ತೊಂದು ಪ್ರಶ್ನೆ ಎಂದರೆ ಅದು ಎಲ್ಲಿ ಹೂಡಿಕೆ ಮಾಡಬೇಕು? ಅರ್ಥಾತ್ ಎಲ್ಲಿ ಹೂಡಿಕೆ ಮಾಡಿದರೆ ಶೇ 12ರಷ್ಟು ಲಾಭ ಪಡೆಯಬಹುದು ಎಂಬ ಪ್ರಶ್ನೆ. ಉತ್ತರ ಎಸ್ಐಪಿ ಆಗಿದೆ. ನೀವು ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ. ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಗೆ ಸಂಬಂಧಿಸಿವೆ, ಆದ್ದರಿಂದ ಅದರ ಆದಾಯವನ್ನು ನಿಗದಿಪಡಿಸಲಾಗುವುದಿಲ್ಲ, ಆದರೆ ಆರ್ಥಿಕ ತಜ್ಞರು ದೀರ್ಘಾವಧಿಯಲ್ಲಿ ಅದರ ಸರಾಸರಿ ಆದಾಯವನ್ನು ಶೇ. 12ರಷ್ಟು  ಎಂದು ಪರಿಗಣಿಸುತ್ತಾರೆ. ಕೆಲವೊಮ್ಮೆ ಇದಕ್ಕಿಂತ ಹೆಚ್ಚಿನ ರೀಟರ್ನ್ ಕೂಡ ನಿಮಗೆ ಸಿಗಬಹುದು.

ಇದನ್ನೂ ಓದಿ-Tax Demand: ತೆರಿಗೆ ಪಾವತಿದಾರರಿಗೆ 1 ಲಕ್ಷ ರೂ.ಗಳ ತೆರಿಗೆ ಬಾಕಿ ಪಾವತಿಯಿಂದ ಸಿಕ್ತು ಮುಕ್ತಿ, ಇಲ್ಲಿದೆ ನಿಮಗೊಂದು ಲಾಭದ ಸುದ್ದಿ

ಈ ರೀತಿ ನೀವು ಕೋಟ್ಯಾಧೀಶರಾಗುವಿರಿ
ಎಸ್ಐಪಿ ಮೂಲಕ ನೀವು ಪ್ರತಿ ತಿಂಗಳು 20,000 ರೂಪಾಯಿಗಳನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಠೇವಣಿ ಮಾಡಿದರೆ, ನೀವು 15 ವರ್ಷಗಳಲ್ಲಿ ಒಟ್ಟು 36,00,000 ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ. ನೀವು ಈ ಹೊದಿಕೆಗೆ ಎಸ್ಐಪಿ ಕ್ಯಾಲ್ಕುಲೇಟರ್ ಪ್ರಕಾರ, ನೀವು ಶೇಕಡಾ 12 ರ ದರದಲ್ಲಿ 64,91,520 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಈ ರೀತಿಯಾಗಿ, 15 ವರ್ಷಗಳ ನಂತರ ನೀವು ಒಟ್ಟು 1,00,91,520 ರೂಗಳ ಮಾಲೀಕರಾಗುತ್ತೀರಿ.

ಇದನ್ನೂ ಓದಿ-Tata Group Latest Update: ಬೆಳವಣಿಗೆಯಲ್ಲಿ ಪಾಕಿಸ್ತಾನದ ಅರ್ಥವ್ಯವಸ್ಥೆಯನ್ನೂ ಹಿಂದಿಕ್ಕಿದ ಟಾಟಾ ಸಮೂಹ!

ಹೂಡಿಕೆಗಾಗಿ ರೂ 20,000 ಹೇಗೆ ಹೊಂದಿಸಬೇಕು
ಈಗ ನಿಮ್ಮ ಮೈಂಡಲ್ಲಿ ಬರುವ ಮತ್ತೊಂದು ಪ್ರಶ್ನೆ ಎಂದರೆ, ಹೂಡಿಕೆಗಾಗಿ 20 ಸಾವಿರ ಎಲ್ಲಿಂದ ಹೊಂದಿಸಬೇಕು? ಎಂಬುದು. ಇದಕ್ಕಾಗಿ ನಿಮ್ಮ ಬಳಿ  ಸಂಬಳ 65 ರಿಂದ 70 ಸಾವಿರದವರೆಗೆ ಇರುವ ನೌಕರಿ ಇರಬೇಕು. ತಿಂಗಳಿಗೆ 20,000 ರೂಪಾಯಿಗಳನ್ನು ಸುಲಭವಾಗಿ ನೀವು ಅದರಿಂದ ಹೊಂದಿಸಬಹುದು.  ಪ್ರತಿಯೊಬ್ಬ ವ್ಯಕ್ತಿಯು ತನ್ನ ಗಳಿಕೆಯ ಕನಿಷ್ಠ ಶೇ. 30 ರಷ್ಟನ್ನೂ ಹೂಡಿಕೆ ಮಾಡಬೇಕು ಎಂದು ಹಣಕಾಸು ನಿಯಮಗಳು ಹೇಳುತ್ತವೆ. ನೀವು ತಿಂಗಳಿಗೆ ರೂ 65,000 ಗಳಿಸಿದರೆ, ಅದರಲ್ಲಿ 30 ಪ್ರತಿಶತ ರೂ 19,500 ಅಂದರೆ ಸುಮಾರು ರೂ 20,000. ಅಂತಹ ಪರಿಸ್ಥಿತಿಯಲ್ಲಿ, ನೀವು ಹೂಡಿಕೆಗಾಗಿ ಈ ಮೊತ್ತವನ್ನು ಸುಲಭವಾಗಿ ಹೊಂದಿಸಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News