Post Office scheme: ಪೋಸ್ಟ್ ಆಫೀಸ್ ನ ಈ ಸೂಪರ್ ಹಿಟ್ ಯೋಜನೆಯಲ್ಲಿ ಬ್ಯಾಂಕ್ ಗಿಂತಲೂ ಉತ್ತಮ ಆದಾಯ ಸಿಗುತ್ತದೆ
Post Office Scheme: ಅಂಚೆ ಕಛೇರಿಯಲ್ಲಿ FD ಮಾಡುವ ಮೂಲಕ ನೀವು ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದು. ಪೋಸ್ಟ್ ಆಫೀಸ್ನ ಒಂದು ಅದ್ಭುತ ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ಯೋಜನೆಯಲ್ಲಿ ನಿಮಗೆ ಸರ್ಕಾರದ ಅಂದರೆ ಸಾವೇರಿನ್ ಗ್ಯಾರಂಟಿ ಕೂಡ ಸಿಗುತ್ತದೆ.
Post Ofice Scheme: ಕಡಿಮೆ ಸಮಯದಲ್ಲಿ ಸುರಕ್ಷಿತ ಹೂಡಿಕೆಯನ್ನು ಮಾಡಿ ಉತ್ತಮ ಲಾಭ ಗಳಿಸಲು ನೀವೂ ಬಯಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಒಂದು ಉತ್ತಮ ಆಯ್ಕೆ. ಅಂಚೆ ಕಛೇರಿಯ ಸ್ಥಿರ ಠೇವಣಿ ಯೋಜನೆಯಲ್ಲಿ ನೀವು ಉತ್ತಮ ಆದಾಯವನ್ನು ಪಡೆಯಬಹುದು. ಇದರಲ್ಲಿ ನಿಮಗೆ ಲಾಭದ ಜೊತೆಗೆ ಸರ್ಕಾರದ ಗ್ಯಾರಂಟಿ ಕೂಡ ಲಭಿಸುತ್ತದೆ. ಈ ಯೋಜನೆಯ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಅಂಚೆ ಕಛೇರಿ ಸ್ಥಿರ ಠೇವಣಿ ಯೋಜನೆ ತುಂಬಾ ಸುಲಭವಾಗಿದೆ
ಅಂಚೆ ಕಛೇರಿಯಲ್ಲಿ ಸ್ಥಿರ ಠೇವಣಿ ಮಾಡುವುದು ತುಂಬಾ ಸುಲಭವಾಗಿದೆ. ಇಂಡಿಯಾ ಪೋಸ್ಟ್ ಈ ಯೋಜನೆಯ ಕುರಿತು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿಯನ್ನು ನೀಡಿದೆ. ಮಾಹಿತಿಯ ಪ್ರಕಾರ ನೀವು 1, 2, 3, 5 ವರ್ಷಗಳ ವಿಭಿನ್ನ ಯೋಜನೆಗಳ ಅಡಿ ಸ್ಥಿರ ಠೇವಣಿ ಮಾಡಬಹುದು. ಈ ಯೋಜನೆಯಲ್ಲಿ ಯಾವ ಯಾವ ಲಾಭಗಳಿವೆ ತಿಳಿದುಕೊಳ್ಳೋಣ ಬನ್ನಿ.
ಅಂಚೆ ಕಛೇರಿ ಸ್ಥಿರ ಠೇವಣಿ ಯೋಜನೆಯ ಲಾಭಗಳು
1. ಅಂಚೆ ಕಛೇರಿಯಲ್ಲಿ FD ಮಾಡುವ ಮೂಲಕ ನೀವು ನಿಮ್ಮ ಠೇವಣಿಗೆ ಭಾರತ ಸರ್ಕಾರದ ಗ್ಯಾರಂಟಿ ನೀಡಬಹುದು.
2. ಇದರಲ್ಲಿ ಹೂಡಿಕೆದಾರರ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ.
3. ಈ FD ಯೋಜನೆಯಲ್ಲಿ ನೀವು ಆಫ್‌ಲೈನ್ (ನಗದು, ಚೆಕ್) ಅಥವಾ ಆನ್‌ಲೈನ್ (ನೆಟ್ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್) ಮೂಲಕ ಹೂಡಿಕೆ ಮಾಡಬಹುದು.
4. ಇದರಲ್ಲಿ ನೀವು 1 ಕ್ಕಿಂತ ಹೆಚ್ಚು FD ಮಾಡಬಹುದು.
5. ಇದರ ಹೊರತಾಗಿ, ನೀವು ಜಂಟಿ FD ಖಾತೆಯನ್ನು ಕೂಡ ತೆರೆಯಬಹುದು.
6. ಈ ಯೋಜನೆಯಲ್ಲಿ 5 ವರ್ಷಗಳ ಕಾಲ ಸ್ಥಿರ ಠೇವಣಿ ಮಾಡುವ ಮೂಲಕ, ನೀವು ITR ಸಲ್ಲಿಸುವಾಗ ತೆರಿಗೆ ವಿನಾಯಿತಿಯ ಲಾಭ ಪಡೆಯಬಹುದು.
7. ನೀವು ಸುಲಭವಾಗಿ ಒಂದು ಪೋಸ್ಟ್ ಆಫೀಸ್‌ನಿಂದ ಮತ್ತೊಂದು ಪೋಸ್ಟ್ ಆಫೀಸ್‌ಗೆ ನಿಮ್ಮ FD ಖಾತೆಯನ್ನು ವರ್ಗಾಯಿಸಬಹುದು.
ಇದನ್ನೂ ಓದಿ-Big News: ಮುಂದಿನ 10 ದಿನಗಳಲ್ಲಿ ಗೋಧಿ ಬೆಲೆ ಇಳಿಕೆ..!
ಚೆಕ್ ಅಥವಾ ನಗದು ಹಣವನ್ನು ನೀಡಿ ನೀವು ಖಾತೆ ತೆರೆಯಬಹುದು. ಇದಕ್ಕಾಗಿ ನೀವು ಕನಿಷ್ಟ 1000 ರೂ. ಠೇವಣಿ ಇರಿಸಬೇಕು. ಆದರೆ, ಗರಿಷ್ಠ ಠೇವಣಿಗೆ ಯಾವುದೇ ಮಿತಿ ಇಲ್ಲ.
ಇದನ್ನೂ ಓದಿ-Mutual Funds SIP: ಎಸ್ಐಪಿ ಬಗ್ಗೆ ಜನರಲ್ಲಿರುವ ಸಾಮಾನ್ಯ ತಪ್ಪು ತಿಳುವಳಿಕೆಗಳು
ಬಡ್ಡಿ ಎಷ್ಟು ಸಿಗುತ್ತದೆ?
>> 7 ದಿನಗಳಿಂದ 1 ವರ್ಷದವರೆಗಿನ ಸ್ಥಿರ ಠೇವಣಿಯ ಮೇಲೆ ಶೇ.5.50ರಷ್ಟು ಬಡ್ಡಿ ಸಿಗುತ್ತದೆ
>>1 ವರ್ಷ 1 ದಿನದಿಂದ ಹಿಡಿದು 2 ವರ್ಷಗಳ ಎಫ್ ಡಿ ಮೇಲೆಯೂ ಕೂಡ ಇದೇ ದರದಲ್ಲಿ ಬಡ್ಡಿ ಸಿಗುತ್ತದೆ.
>> 3 ವರ್ಷಗಳವರೆಗಿನ ಸ್ಥಿರ ಠೇವಣಿಯ ಮೇಲೆಯೂ ಕೂಡ ಶೇ.5.50ರಷ್ಟು ಬಡ್ಡಿ ಸಿಗುತ್ತದೆ
>> 3 ರಿಂದ 5 ವರ್ಷಗಳವರೆಗಿನ ಸ್ಥಿರ ಠೇವಣಿಯ ಮೇಲೆ ಶೇ. 6.70 ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.