Big News: ಮುಂದಿನ 10 ದಿನಗಳಲ್ಲಿ ಗೋಧಿ ಬೆಲೆ ಇಳಿಕೆ..!

ಆಹಾರ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಹಂಚಿಕೆ ಮಾಡುವ ಕುರಿತು ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.

Written by - Puttaraj K Alur | Last Updated : May 14, 2022, 08:54 PM IST
  • ಮುಂದಿನ 10 ದಿನಗಳಲ್ಲಿ ಗೋಧಿ ಅಗ್ಗವಾಗುವ ಸಾಧ್ಯತೆ ಇದೆ
  • ಗೋಧಿ ದಾಸ್ತಾನು ಮತ್ತು ಬೆಲೆಗೆ ಸಂಬಂಧಿಸಿದಂತೆ ಸರ್ಕಾರದ ದೊಡ್ಡ ನಿರ್ಧಾರ
  • ಅಡುಗೆ ಎಣ್ಣೆ ಮತ್ತಷ್ಟು ಅಗ್ಗವಾಗಲಿದೆ ಎಂದು ಸುಧಾಂಶು ಪಾಂಡೆ ಮಾಹಿತಿ
Big News: ಮುಂದಿನ 10 ದಿನಗಳಲ್ಲಿ ಗೋಧಿ ಬೆಲೆ ಇಳಿಕೆ..!   title=
10 ದಿನಗಳಲ್ಲಿ ಗೋಧಿ ಅಗ್ಗ

ನವದೆಹಲಿ: ಹಣದುಬ್ಬರ ಏರಿಕೆಯ ನಡುವೆಯೇ ಜನ ಸಾಮಾನ್ಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಮುಂದಿನ 10 ದಿನಗಳಲ್ಲಿ ಗೋಧಿ ಅಗ್ಗವಾಗಬಹುದು. ವಾಸ್ತವವಾಗಿ ಗೋಧಿಯ ದಾಸ್ತಾನು ಮತ್ತು ಬೆಲೆಗೆ ಸಂಬಂಧಿಸಿದಂತೆ ಸರ್ಕಾರವು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಧಾನ್ಯಗಳ ಹಂಚಿಕೆಗೆ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಈ ಮಾಹಿತಿಯನ್ನು ಸ್ವತಃ ಸರ್ಕಾರವೇ ನೀಡಿದೆ.

ಆಹಾರ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಹಂಚಿಕೆ ಮಾಡುವ ಕುರಿತು ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಇದರಡಿ ಗೋಧಿ ದಾಸ್ತಾನು ಹೆಚ್ಚಿರುವ ಪ್ರದೇಶಗಳಲ್ಲಿ ಅಕ್ಕಿ ಪೂರೈಕೆಯನ್ನು ಹೆಚ್ಚಿಸಲಾಗುವುದು. ಇದರೊಂದಿಗೆ ಗೋಧಿ ದಾಸ್ತಾನು ಸಮತೋಲನಕ್ಕೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: Health Insurance: ವಿಮಾದಾರರಿಗೆ ಖುಷಿ ಸುದ್ದಿ, ವಿಮಾ ಕಂಪನಿಗಳಿಗೆ ಈ ಅನುಮತಿ ನೀಡಿದ IRDA

ಗೋಧಿ ಮತ್ತು ಖಾದ್ಯ ತೈಲವು ಅಗ್ಗವಾಗಲಿದೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಆಹಾರ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ, ಒಂದು ವಾರದಲ್ಲಿ ಗೋಧಿ ಬೆಲೆಯಲ್ಲಿ ಇಳಿಕೆಯಾಗಲಿದೆ. ಅಗ್ಗದ ಗೋಧಿಯಿಂದಾಗಿ ಹಿಟ್ಟಿನ ಬೆಲೆಯೂ ಕುಸಿಯಲಿದೆ. ದೇಶದಲ್ಲಿ ಗೋಧಿ ದಾಸ್ತಾನು ಕಾಯ್ದುಕೊಳ್ಳಲು ಗೋಧಿ ರಫ್ತಿಗೆ ಆದೇಶ ಹೊರಡಿಸಲಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ಗೋಧಿ ದಾಸ್ತಾನು ಕಡಿಮೆಯಾಗುವುದಿಲ್ಲ’ವೆಂದು ತಿಳಿಸಿದ್ದಾರೆ.

ಅಡುಗೆ ಎಣ್ಣೆ ಮತ್ತಷ್ಟು ಅಗ್ಗವಾಗಲಿದೆ ಎಂದು ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ. ‘ಶೀಘ್ರವೇ ಇಂಡೋನೇಷ್ಯಾ ಈ ಬಗ್ಗೆ ಪರಿಶೀಲಿಸಲಿದೆ, ನಂತರ ತೈಲ ಬೆಲೆ ಮತ್ತಷ್ಟು ಕುಸಿಯುತ್ತದೆ. ವಾಸ್ತವವಾಗಿ ಇಂಡೋನೇಷ್ಯಾವು ವಿಶ್ವದಲ್ಲೇ ಅತಿಹೆಚ್ಚು ತಾಳೆ ಎಣ್ಣೆಯನ್ನು ಉತ್ಪಾದಿಸುತ್ತದೆ. ಆದರೆ, ಈ ಸಮಯದಲ್ಲಿ ಇಂಡೋನೇಷ್ಯಾ ತೈಲ ರಫ್ತು ನಿಲ್ಲಿಸಿದೆ. ಇಂಡೋನೇಷ್ಯಾ ಹೆಚ್ಚಿನ ಪ್ರಮಾಣದ ತಾಳೆ ಎಣ್ಣೆ ಬಳಸಲು ಸಾಧ್ಯವಾಗದಿದ್ದರೂ, ಖಂಡಿತ ಪಾಮ್ ಎಣ್ಣೆಯನ್ನು ರಫ್ತು ಮಾಡುತ್ತದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲುಗಳಲ್ಲಿ ಬೇಬಿ ಬರ್ತ್ ವಿಶೇಷ ಆಸನ ನಿರಾಳರಾದ ತಾಯಂದಿರು!

ಈ ಸಂದರ್ಭಗಳಲ್ಲಿ ರಫ್ತು ಮಾಡಬಹುದು

ವಾಣಿಜ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ ಮಾತನಾಡಿ, ‘ದೇಶೀಯ ಬಳಕೆಗೆ ಅನುಗುಣವಾಗಿ ದೇಶದಲ್ಲಿ ಗೋಧಿ ಸಂಪೂರ್ಣ ದಾಸ್ತಾನು ಇದೆ. ಪ್ರಪಂಚದಾದ್ಯಂತ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಿದೆ. ನೆರೆಯ ದೇಶಗಳು ಮತ್ತು ಅಗತ್ಯವಿರುವ ದೇಶಗಳ ಕೋರಿಕೆಯ ಮೇರೆಗೆ ಗೋಧಿಯನ್ನು ರಫ್ತು ಮಾಡಬಹುದು. ವಾಸ್ತವವಾಗಿ ಕೆಲವು ದೇಶಗಳಲ್ಲಿ ಸಂಗ್ರಹಣೆ ನಡೆಯುತ್ತಿದೆ, ಆದ್ದರಿಂದ ಅಲ್ಪಾವಧಿಗೆ ಈ ಆದೇಶವನ್ನು ಹೊರಡಿಸಲಾಗಿದೆ’ ಎಂದು ತಿಳಿಸಿದ್ದಾರೆ.  

ದೇಶದ ಆಹಾರ ಭದ್ರತೆಯೇ ನಮ್ಮ ಆದ್ಯತೆ, ಕೃಷಿ ಸಚಿವಾಲಯದ 3ನೇ ಅಂದಾಜಿನ ನಂತರ ಅಂದಿನ ಪರಿಸ್ಥಿತಿ ನೋಡಿ ನಿಷೇಧಾಜ್ಞೆ ಪರಾಮರ್ಶೆ ಮಾಡಬಹುದು. ಪ್ರಸ್ತುತ ಪರಿಸ್ಥಿತಿಗಳ ದೃಷ್ಟಿಯಿಂದ ಸರ್ಕಾರದ ಆದೇಶ ಶಾಶ್ವತವಲ್ಲ’ವೆಂದು ಬಿವಿಆರ್ ಸುಬ್ರಮಣ್ಯಂ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News