ನವದೆಹಲಿ : ಅಂಚೆ ಕಚೇರಿ ಯೋಜನೆಗಳು ವಿಶ್ವಾಸಾರ್ಹ ಮತ್ತು ಜನಪ್ರಿಯವಾಗಿವೆ. ಈ ಯೋಜನೆಗಳು ಸ್ಥಿರವಾದ ಆದಾಯ ಮತ್ತು ಖಚಿತವಾದ ಬಡ್ಡಿದರವನ್ನು ನೀಡುತ್ತವೆ. ಅತ್ಯುತ್ತಮ ಬಡ್ಡಿ ನೀಡುವ ಅಂಚೆ ಕಚೇರಿ ಯೋಜನೆ(Post Office Schemes)ಗಳೆಂದರೆ ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ, ಕಿಸಾನ್ ವಿಕಾಸ ಪತ್ರ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಗಳು. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ..


COMMERCIAL BREAK
SCROLL TO CONTINUE READING

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ


- ಸುಕನ್ಯಾ ಸಮೃದ್ಧಿ ಯೋಜನೆ(Sukanya Samriddhi Scheme)ಯನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪಾಲಕರು ತೆರೆಯಬಹುದು.
- ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಹೂಡಿಕೆಯನ್ನು 250 ರೂ. ಮತ್ತು ಗರಿಷ್ಠ 1,50,000 ರೂ. ಮಾಡಬಹುದು.
- ಪ್ರತಿ ವರ್ಷಕ್ಕೆ ಶೇ.7.6 ರಷ್ಟು ಬಡ್ಡಿದರವನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.


ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿ ದರ


- ಹಿರಿಯ ನಾಗರಿಕರ ಉಳಿತಾಯ ಯೋಜನೆ(Senior Citizen Savings Scheme) ನಿವೃತ್ತ ವ್ಯಕ್ತಿಗಳು ಮತ್ತು ಹಿರಿಯ ನಾಗರಿಕರಿಗೆ ಜನಪ್ರಿಯ ತುಂಬಾ ಪ್ರಯೋಜನಕಾರಿ ಯೋಜನೆ.- ಶೇ.7.4 ರಷ್ಟು ಪ್ರತಿ ವರ್ಷಕ್ಕೆ ಬಡ್ಡಿದರ, ಮೊದಲ ಹಂತದಲ್ಲಿ 31 ನೇ ಮಾರ್ಚ್/30 ನೇ ಸೆಪ್ಟೆಂಬರ್/31 ಡಿಸೆಂಬರ್ ಠೇವಣಿಯ ದಿನಾಂಕದಿಂದ ಪಾವತಿಸಬೇಕು ಮತ್ತು ನಂತರ, ಬಡ್ಡಿಯನ್ನು 31 ನೇ ಮಾರ್ಚ್, 30 ಜೂನ್, 30 ಸೆಪ್ಟೆಂಬರ್ ಮತ್ತು 31 ಡಿಸೆಂಬರ್ ನಲ್ಲಿ ಪಾವತಿಸಬೇಕು ಎಂದು ಇಂಡಿಯಾ ಪೋಸ್ಟ್ ಹೇಳಿದೆ.
- ಖಾತೆಯಲ್ಲಿ ಕೇವಲ ಒಂದು ಠೇವಣಿ 1,000 ರೂ.ಗಳಷ್ಟು ಹೆಚ್ಚಿರಬೇಕು ಮತ್ತು ಗರಿಷ್ಠ ಮೊತ್ತವು 15 ಲಕ್ಷ ಮೀರಬಾರದು.


ಸಾರ್ವಜನಿಕ ಭವಿಷ್ಯ ನಿಧಿ PPF ಬಡ್ಡಿ ದರ


- ಸಾರ್ವಜನಿಕ ಭವಿಷ್ಯ ನಿಧಿಯನ್ನು (PPF) ಯಾರು ಬೇಕಾದರೂ ತೆರೆಯಬಹುದು.
- ಪಿಪಿಎಫ್ ಮೇಲೆ ವರ್ಷಕ್ಕೆ ಶೇ 7.1 ಬಡ್ಡಿ ದರ (ಸಂಯುಕ್ತ ವಾರ್ಷಿಕ) ಅನ್ವಯವಾಗುತ್ತದೆ.
- ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂ. ಮತ್ತು ಗರಿಷ್ಠ 1,50,000 ರೂ. ಠೇವಣಿಗಳನ್ನು ಒಂದೇ ಮೊತ್ತದಲ್ಲಿ  ಮಾಡಬಹುದು.


ಕಿಸಾನ್ ವಿಕಾಸ್ ಪತ್ರ ಬಡ್ಡಿ ದರ


- ಕಿಸಾನ್ ವಿಕಾಸ್ ಪತ್ರ ಯೋಜನೆ(Kisan Vikas Patra)ಯಡಿ, ಒಬ್ಬರು ಕನಿಷ್ಠ 1,000 ರೂ.
- ಬಡ್ಡಿದರವು ವಾರ್ಷಿಕವಾಗಿ 6.9 ಶೇಕಡಾ ಸಂಯುಕ್ತವಾಗಿರುತ್ತದೆ.
- ಇಂಡಿಯಾ ಪೋಸ್ಟ್ ಪ್ರಕಾರ, ಹೂಡಿಕೆ ಮಾಡಿದ ಮೊತ್ತವು 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ (10 ವರ್ಷ ಮತ್ತು 4 ತಿಂಗಳುಗಳು).


ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ದರ


- ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ(National Savings Certificate Scheme)ಯು ಕನಿಷ್ಠ 1,000 ರೂ.ಗಳನ್ನು ಹೂಡಿಕೆ ಮಾಡಲು ಅನುಮತಿಸುತ್ತದೆ. ಗರಿಷ್ಠ ಮಿತಿ ಇಲ್ಲ.
- ವಾರ್ಷಿಕವಾಗಿ ಶೇ.6.8 ರಷ್ಟು ಬಡ್ಡಿದರ ನೀಡಲಾಗುತ್ತದೆ ಆದರೆ ಇದನ್ನ ಮುಕ್ತಾಯದ ಸಮಯದಲ್ಲಿ ಪಾವತಿಸಲಾಗುತ್ತದೆ.
- 1000 ರೂ. 5 ವರ್ಷಗಳ ನಂತರ 1389.49 ರೂ. ಆಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.