ನವದೆಹಲಿ : ಭಾರತೀಯ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಬೈಕ್ ಕಾಲಿಡುತ್ತಿದೆ. ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದೆ. ಇದರ ಹೆಸರು ಹಾಪ್ ಆಕ್ಸೊ.  ಸೆಪ್ಟೆಂಬರ್ 5 ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಲಿದೆ.  ವರದಿಗಳ ಪ್ರಕಾರ, ಹಾಪ್ ಆಕ್ಸೊದ ಗರಿಷ್ಠ ವೇಗ ಗಂಟೆಗೆ 100 ಕಿ.ಮೀ. ಎಂದು ಹೇಳಲಾಗಿದೆ. ಕಂಪನಿಯು ಬೈಕ್ ನ ಟೀಸರ್ ಬಿಡುಗಡೆ ಮಾಡಿದ್ದು, ಈ ಮೂಲಕ ಬೈಕ್ ನೋಡುವುದಕ್ಕೆ ಹೇಗಿರಲಿದೆ ಎನ್ನುವುದನ್ನು ಅಂದಾಜಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಮೊದಲ ನೋಟದಲ್ಲಿ, Hop Oxo ಯಮಹಾ FZ-Fi ಆವೃತ್ತಿ 2 ನಂತೆ ಕಾಣುತ್ತದೆ. ಪ್ರಸ್ತುತ, ಮೋಟಾರ್‌ಸೈಕಲ್‌ನ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಇದರಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್ ನೀಡಬಹುದು ಎಂದು ಹೇಳಲಾಗಿದೆ. ಇದು 100 ರಿಂದ 150 ಕಿ.ಮೀ. ರೇಂಜ್ ನೀಡಬಹುದು ಎಂದು ಹೇಳಲಾಗಿದೆ. ಇದರ ಎರಡೂ ಬದಿಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. 


ಇದನ್ನೂ ಓದಿ : Arecanut Today Price: ಶಿವಮೊಗ್ಗದಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ


ಕೇವಲ 999 ರೂಪಾಯಿ ಪಾವತಿಸಿ ಕಂಪನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಈ ಬೈಕ್ ಅನ್ನು ಮುಂಗಡವಾಗಿ ಬುಕ್ ಮಾಡಬಹುದು. ಬಿಡುಗಡೆಗೂ ಮುನ್ನವೇ ಬೈಕ್‌ಗಾಗಿ 5000 ಬುಕ್ಕಿಂಗ್‌ಗಳನ್ನು ಪಡೆದಿರುವುದಾಗಿ ಕಂಪನಿ ಹೇಳಿದೆ. ಹೋಪ್ ಆಕ್ಸೊ ಬೆಲೆ ಸುಮಾರು 1.20 ಲಕ್ಷ ರೂ. ನಿರೀಕ್ಷಿಸಲಾಗಿದೆ. ಇದು Revolt RV 400, Tork Kratos ಮತ್ತು Oben Rorr ನಂತಹ ಬೈಕ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.


ಇದನ್ನೂ ಓದಿ : Petrol Price Today: ಕಚ್ಚಾ ತೈಲದ ಕುದುರೆ ಓಟ, 110 ರೂ.ಗೆ ತಲುಪಿದ ಲೀಟರ್ ಪೆಟ್ರೋಲ್ ದರ!



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.