ನವದೆಹಲಿ: ಹಬ್ಬದ ಋತುವಿನಲ್ಲಿ ಕುಟುಂಬ ಮತ್ತು ಸಂಬಂಧಿಕರ ನಡುವಿನ ಸಂಭಾಷಣೆ ದೀರ್ಘವಾಗಿರುತ್ತದೆ. ಈ ದಿನಗಳಲ್ಲಿ ಹೆಚ್ಚಿನ ಜನರು ಸಾಮಾನ್ಯ ಕರೆಗಿಂತ ಹೆಚ್ಚು ವಾಟ್ಸಾಪ್ ಕರೆ ಮಾಡುತ್ತಾರೆ. ಆದ್ದರಿಂದ ಇಂದು ನಾವು ನಿಮಗೆ ಏರ್ಟೆಲ್, ಜಿಯೋ ಮತ್ತು VI (ವೊಡಾಫೋನ್-ಐಡಿಯಾ) ನ ಕೆಲವು ಅಗ್ಗದ ಮತ್ತು ಧಮಾಕ ಪ್ಲಾನ್‌ಗಳ ಬಗ್ಗೆ ಹೇಳುತ್ತಿದ್ದೇವೆ. ಕಡಿಮೆ ಬೆಲೆಯ ಹೊರತಾಗಿಯೂ ಇವು ನಿಮಗೆ ಸಾಕಷ್ಟು ಡೇಟಾವನ್ನು ನೀಡುತ್ತವೆ.


COMMERCIAL BREAK
SCROLL TO CONTINUE READING

ಏರ್‌ಟೆಲ್ ಪ್ರಿಪೇಯ್ಡ್ ಯೋಜನೆ ಕೇವಲ 298 ರೂ.ಗಳಿಗೆ:-
ಮೊಬೈಲ್ ಸೇವಾ ಪೂರೈಕೆದಾರರು  ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ತರುತ್ತಿದ್ದಾರೆ. ಏತನ್ಮಧ್ಯೆ 300 ರೂಪಾಯಿಗಳಿಗಿಂತ ಕಡಿಮೆ ಇರುವ ಏರ್ಟೆಲ್ನ (Airtel) ಅತ್ಯುತ್ತಮ ಯೋಜನೆಯನ್ನು ನಾವು ನಿಮಗೆ ಹೇಳುತ್ತೇವೆ. ಏರ್‌ಟೆಲ್‌ನ 298 ರೂ.ಗಳ ಯೋಜನೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾದೊಂದಿಗೆ 100 ಎಸ್‌ಎಂಎಸ್ ಲಭ್ಯವಿರುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಕರೆ ಮಾಡಲು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಅಲ್ಲದೆ ಈ ಯೋಜನೆಯಡಿಯಲ್ಲಿ ಏರ್ಟೆಲ್ ಎಕ್ಟ್ರೀಮ್  (Airtel Xtreme) ಮತ್ತು ವಿಂಕ್ ಮ್ಯೂಸಿಕ್ಗೆ (Wynk Music)  ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.


ಜಿಯೋದ 249 ರೂ.ಗಳ ಪ್ರಿಪೇಯ್ಡ್ ಯೋಜನೆ :-
ಅದೇ ರೀತಿ ರಿಲಯನ್ಸ್ ಜಿಯೋ (JIO) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ 249 ರೂ.ಗಳ ಯೋಜನೆಯನ್ನು ತಂದಿದೆ. ಇದರಲ್ಲಿ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾದೊಂದಿಗೆ 100 ಎಸ್‌ಎಂಎಸ್ ಪಡೆಯುತ್ತಾರೆ. ಯಾವುದೇ ನೆಟ್‌ವರ್ಕ್‌ನಲ್ಲಿ ಕರೆ ಮಾಡಲು ಬಳಕೆದಾರರಿಗೆ 1000 ಎಫ್‌ಯುಪಿ ನಿಮಿಷಗಳನ್ನು ನೀಡಲಾಗುತ್ತದೆ. ಇತರ ಯೋಜನೆಗಳಂತೆ, ಕಂಪನಿಯು ಜಿಯೋ-ಟು-ಜಿಯೋ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ನೀಡುತ್ತಿದೆ. ಇದಲ್ಲದೆ ಗ್ರಾಹಕರಿಗೆ ಜಿಯೋ ಆಪ್‌ನ (Jio App) ಉಚಿತ ಚಂದಾದಾರಿಕೆಯನ್ನು ನೀಡಲಾಗುವುದು.


Jio ಹೊಸ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಕೇವಲ 399 ರೂ.ಗಳಲ್ಲಿ ನೀಡುತ್ತಿದೆ ದೊಡ್ಡ ರಿಯಾಯಿತಿ


VI ನ 299 ರೂ.ಗಳ ಪ್ರಿಪೇಯ್ಡ್ ಯೋಜನೆ :-
ಈ ರೀಚಾರ್ಜ್ ಯೋಜನೆಯಲ್ಲಿ ವೊಡಾಫೋನ್ ಮತ್ತು ಐಡಿಯಾ (VI) ಬಳಕೆದಾರರು ಪ್ರತಿದಿನ 4 ಜಿಬಿ ಡೇಟಾದೊಂದಿಗೆ 100 ಎಸ್‌ಎಂಎಸ್ ಪಡೆಯುತ್ತಾರೆ. ಅಲ್ಲದೆ ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಎಂಪಿಎಲ್‌ನಲ್ಲಿ 125 ರೂ.ಗಳ ಬೋನಸ್ ನಗದು ಮತ್ತು ಜೊಮಾಟೊದಲ್ಲಿ  (Zomato) ಆಹಾರವನ್ನು ಆರ್ಡರ್ ಮಾಡುವಾಗ 75 ರೂ.ಗಳ ಡಿಸ್ಕೌಂಟ್ ಕೂಡ ಲಭ್ಯವಿದೆ.


ವೊಡಾಫೋನ್-ಐಡಿಯಾದ ಹೊಸ ಅವತಾರ, ಈಗ ಬ್ರಾಂಡ್‌ನಲ್ಲಿ Vi, ಬದಲಾದ ಕಂಪನಿಯ ಲೋಗೋ