PPF Update: ಒಂದು ವೇಳೆ ನೀವೂ ಕೂಡ PPF ಖಾತೆ ಹೊಂದಿದ್ದರೆ, ಈ ಇಂಪಾರ್ಟೆಂಟ್ ಸುದ್ದಿ ನಿಮಗಾಗಿ. ಹೌದು ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ (PPF) ಹೂಡಿಕೆ ಮಾಡುವವರಿಗೆ ಏಪ್ರಿಲ್ 5 ಒಂದು ಮಹತ್ವದ ದಿನಾಂಕವಾಗಿರಲಿದೆ.  ಏಪ್ರಿಲ್ 5ರ ನಂತರ ಹೂಡಿಕೆ ಮಾಡಿದರೆ ಲಕ್ಷಾಂತರ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಹಣವನ್ನು ಒಂದೇ ಬಾರಿಗೆ ಠೇವಣಿ ಮಾಡುತ್ತಿದ್ದರೆ (Important Update For PPF Investors), 5 ನೇ ತಾರೀಖಿನ ಮೊದಲು 1.5 ಲಕ್ಷ ರೂ.ಗಳನ್ನು ಠೇವಣಿ ಮಾಡಲು ಮರೆಯಬೇಡಿ. ಸಂಪೂರ್ಣ ಲೆಕ್ಕಾಚಾರ ಏನು ತಿಳಿದುಕೊಳ್ಳೋಣ ಬನ್ನಿ(Business News In Kannada), 


COMMERCIAL BREAK
SCROLL TO CONTINUE READING

PPF ಖಾತೆಯಲ್ಲಿನ ಬಡ್ಡಿಯನ್ನು ಪ್ರತಿ ತಿಂಗಳ 5ನೇ ತಾರೀಖಿನಂದು ಲೆಕ್ಕ ಹಾಕಲಾಗುತ್ತದೆ. PPF ಹೂಡಿಕೆದಾರರು ಆರ್ಥಿಕ ವರ್ಷಕ್ಕೆ ಲಂಪ್ಸಮ್ ಪಾವತಿಯನ್ನು ಮಾಡುತ್ತಿದ್ದರೆ, ಹೆಚ್ಚು ಗಳಿಕೆ ಮಾಡಬಹುದು, ಅವರು ಈ ಹಣವನ್ನು ಏಪ್ರಿಲ್ 5 ರ ಮೊದಲು ಠೇವಣಿ ಮಾಡಬೇಕು. ಇದರೊಂದಿಗೆ, ಹೂಡಿಕೆದಾರರು ಇಡೀ ತಿಂಗಳ ಬಡ್ಡಿಯ ಲಾಭವನ್ನು ಪಡೆಯಬಹುದು.


5ನೇ ತಾರೀಖಿನ ಮೊದಲು ಹೂಡಿಕೆಯ ಮೇಲೆ 18.18 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ.
ಪ್ರಸ್ತುತ, PPF 2024 ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ವಾರ್ಷಿಕವಾಗಿ 7.1% ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಈ ಬಡ್ಡಿ ದರವು PPF ಖಾತೆಯ 15 ವರ್ಷಗಳ ಅವಧಿಗೆ ಇರುತ್ತದೆ. ಓರ್ವ ವ್ಯಕ್ತಿಯು ಮುಂದಿನ 15 ವರ್ಷಗಳವರೆಗೆ ಏಪ್ರಿಲ್ 5 ರಂದು ಅಥವಾ ಮೊದಲು ಪ್ರತಿ ವರ್ಷ 1.5 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 18.18 ಲಕ್ಷ ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತಾನೆ.


ಇದನ್ನೂ ಓದಿ-ಭಾರತದಿಂದ ಗಂಟುಮೂಟೆ ಕಟ್ಟಲಿವೆಯೇ Petrol-Diesel ವಾಹನ ಕಂಪನಿಗಳು, Nitin Gadkari ಹೇಳಿದ್ದೇನು?


5ರ ನಂತರ ಹೂಡಿಕೆಯಲ್ಲಿ 2.69 ಲಕ್ಷ ರೂ
ಇದೇ ವೇಳೆ , PPF ಖಾತೆದಾರರು (PPF Investor) ಏಪ್ರಿಲ್ 5 ರ ನಂತರ ಠೇವಣಿ ಮಾಡಿದರೆ, ಅವರಿಗೆ 15.84 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ. ಹೀಗಾಗಿ, ಏಪ್ರಿಲ್ 5 ರ ನಂತರ ಲಂಪ್ಸಮ್ ಮೊತ್ತವನ್ನು ಹೂಡಿಕೆ ಮಾಡಿದರೆ, PPF ಖಾತೆದಾರರು 15 ವರ್ಷಗಳ ಅವಧಿಯಲ್ಲಿ 2.69 ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಾರೆ.


ಇದನ್ನೂ ಓದಿ-Online Fraud ತಡೆಗಟ್ಟಲು ಶೀಘ್ರದಲ್ಲೇ ಬರಲಿದೆ RBI Digita, ಏನಿದು ಹೊಸ ತಂತ್ರಜ್ಞಾನ?


ಏಪ್ರಿಲ್‌ನಲ್ಲಿ ಈ ಹಣಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ
PPF ಖಾತೆದಾರರು ಏಪ್ರಿಲ್ 15 ರಂದು ಪಿಪಿಎಫ್ ಖಾತೆಗೆ ಹಣವನ್ನು ಜಮಾ ಮಾಡಿದ್ದಾರೆ ಎಂದು ಭಾವಿಸೋಣ. PPF ಖಾತೆಯ ನಿಯಮಗಳ (PPF Rules) ಪ್ರಕಾರ, ಅದರ ಮಾಸಿಕ ಬಡ್ಡಿಯನ್ನು ಏಪ್ರಿಲ್ 5 ಮತ್ತು ಏಪ್ರಿಲ್ 30 ರ ನಡುವಿನ ಕಡಿಮೆ ಬ್ಯಾಲೆನ್ಸ್‌ನಲ್ಲಿ ಲೆಕ್ಕಹಾಕಲಾಗುತ್ತದೆ. ಏಪ್ರಿಲ್ 15 ರಂದು ಠೇವಣಿ ಮಾಡಿದ ಮೊತ್ತದ ಮೇಲಿನ ಬಡ್ಡಿಯ ಲಾಭವನ್ನು ನೀವು ಏಪ್ರಿಲ್ ತಿಂಗಳಲ್ಲಿ ಪಡೆಯುವುದಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ