Nitin Gadkari On Green Economy: ಭಾರತವನ್ನು ಗ್ರೀನ್ ಎಕಾನಾಮಿಯನ್ನಾಗಿಸಲು ದೇಶದಲ್ಲಿ ಹೈಬ್ರಿಡ್ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (GST) ಕಡಿಮೆ ಮಾಡಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ದೇಶವನ್ನು ಸಂಪೂರ್ಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಮುಕ್ತಗೊಳಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಭಾರತವನ್ನು (Petrol Diesel Vehicle Free India) ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಶೇ.100 ರಷ್ಟು ಇದು ಕಷ್ಟ, ಆದರೆ ಅಸಾಧ್ಯದ ಕೆಲಸವಲ್ಲ ಎಂಬುದು ನನ್ನ ಅಭಿಪ್ರಾಯ” ಎಂದು ಸಚಿವರು ಹೇಳಿದ್ದಾರೆ.
ಇಂಧನ ಆಮದು ಮಾಡಿಕೊಳ್ಳಲು ಭಾರತ 16 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತದೆ (India Expenditure On Fuel Import). ಈ ಹಣವನ್ನು ರೈತರ ಜೀವನ ಸುಧಾರಣೆಗೆ ಬಳಸಲಾಗುವುದು, ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ. ಆದಾಗ್ಯೂ, ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಗಡ್ಕರಿ ಯಾವುದೇ ಟೈಮ್‌ಲೈನ್ ಅನ್ನು ನೀಡಿಲ್ಲ, ಇದನ್ನು ಗ್ರೀನ್ ಎನರ್ಜಿ ಪ್ರತಿಪಾದಕರು ಕೂಡ ಅತ್ಯಂತ ಕಷ್ಟಕರವೆಂದು ಪರಿಗಣಿಸುತ್ತಾರೆ.
ಹೈಬ್ರಿಡ್ ವಾಹನಗಳ (Hybrid Vehicles) ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ಕ್ಕೆ ಮತ್ತು ಫ್ಲೆಕ್ಸ್ ಎಂಜಿನ್‌ಗಳ ಮೇಲಿನ ಜಿಎಸ್‌ಟಿಯನ್ನು (GST On Hybrid Vehicle) ಶೇಕಡಾ 12 ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ (Finance Ministry) ಕಳುಹಿಸಲಾಗಿದ್ದು, ಅದನ್ನು ಪರಿಗಣಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ದೇಶವು ಇಂಧನ ಆಮದನ್ನು ತೊಡೆದುಹಾಕಬಹುದು ಎಂದು ತಾವು ಬಲವಾಗಿ ನಂಬುವುದಾಗಿ ಸಚಿವರು ಹೇಳಿದ್ದಾರೆ. 2004 ರಿಂದ ಪರ್ಯಾಯ ಇಂಧನಗಳನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಮುಂಬರುವ ಐದರಿಂದ ಏಳು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.
“ಈ ಬದಲಾವಣೆಗೆ ಯಾವುದೇ ದಿನಾಂಕ ಮತ್ತು ವರ್ಷವನ್ನು ನಾನು ನಿಮಗೆ ಹೇಳಲಾರೆ ಏಕೆಂದರೆ ಇದು ತುಂಬಾ ಕಷ್ಟಕರವಾಗಿದೆ. ಇದು ಕಷ್ಟ, ಆದರೆ ಅಸಾಧ್ಯವಲ್ಲ.'' ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಪರಿಚಯಿಸುವ ವೇಗದಲ್ಲಿ ಮುಂಬರುವ ಯುಗವು ಪರ್ಯಾಯ ಮತ್ತು ಜೈವಿಕ ಇಂಧನವಾಗಲಿದೆ (Bio Fuel) ಮತ್ತು ಈ ಕನಸು ನನಸಾಗಲಿದೆ ಎಂಬುದು ತಮ್ಮ ಬಲವಾದ ನಂಬಿಕೆ" ಎಂದು ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ-Natural Gas Price ನಲ್ಲಿ ಭಾರಿ ಕಡಿತಗೊಳಿಸಿದ ಕೇಂದ್ರ ಸರ್ಕಾರ, ಹೊಸ ದರಗಳು ಇಂತಿವೆ!
ಬಜಾಜ್, ಟಿವಿಎಸ್ ಮತ್ತು ಹೀರೊಗಳಂತಹ ವಾಹನ ಕಂಪನಿಗಳು ಸಹ ಫ್ಲೆಕ್ಸ್ ಎಂಜಿನ್ ಬಳಸಿ ಮೋಟಾರ್ ಸೈಕಲ್‌ಗಳನ್ನು ತಯಾರಿಸಲು ಯೋಜನೆ ರೂಪಿಸುತ್ತಿವೆ ಎಂದು ಗಡ್ಕರಿ ಹೇಳಿದ್ದಾರೆ. ಇದೇ ತಂತ್ರಜ್ಞಾನದಿಂದ ತಯಾರಾದ ತ್ರಿಚಕ್ರ ವಾಹನಗಳೂ ಬರಲಿವೆ.
ಇದನ್ನೂ ಓದಿ-Online Fraud ತಡೆಗಟ್ಟಲು ಶೀಘ್ರದಲ್ಲೇ ಬರಲಿದೆ RBI Digita, ಏನಿದು ಹೊಸ ತಂತ್ರಜ್ಞಾನ?
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಭಾರತವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವೇ? ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶೇ100 ರಷ್ಟು ಇದು ಕಷ್ಟ, ಅಸಾಧ್ಯವಲ್ಲ. ಎಂಬುದು ನನ್ನ ಅಭಿಪ್ರಾಯ” ಎಂದಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ