PM Vaya Vandana Yojana Details: ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಪ್ರತಿ ತಿಂಗಳು ಪಿಂಚಣಿ ಪಡೆಯಲು ಬಯಸುವ ಹಿರಿಯ ನಾಗರಿಕರಿಗೆ ಉತ್ತಮ ಆಯ್ಕೆಯಾಗಿದೆ. ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ನಡೆಸುವ ಈ ಯೋಜನೆಯ ಲಾಭ ಪಡೆಯಲು 60 ವರ್ಷ ವಯಸ್ಸಿನವರು ಅರ್ಹರಾಗಿದ್ದಾರೆ. ಈ ಯೋಜನೆಯಲ್ಲಿ 15 ಲಕ್ಷ ರೂಪಾಯಿ ಮೊತ್ತದ ಹೂಡಿಕೆಯೊಂದಿಗೆ, ಹಿರಿಯ ನಾಗರಿಕರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಪಡೆಯಬಹುದು. ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲ. 


COMMERCIAL BREAK
SCROLL TO CONTINUE READING

ಹೂಡಿಕೆಯ ಸಮಯದಲ್ಲಿ ಚಂದಾದಾರರು ಆಯ್ಕೆ ಮಾಡಿದ ಪಿಂಚಣಿ ಯೋಜನೆಗೆ ಅನುಗುಣವಾಗಿ ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು ಅಥವಾ ಒಂದು ವರ್ಷದ ನಂತರ ಮೊದಲ ಪಿಂಚಣಿ ಕಂತನ್ನು ನೀಡಲಾಗುತ್ತದೆ. 10 ವರ್ಷಗಳ ಪಾಲಿಸಿ ಅವಧಿ ಇರುತ್ತದೆ. ಪಾಲಿಸಿಯ ಸಮಯದಲ್ಲಿ ಪಿಂಚಣಿದಾರರು ಮರಣ ಹೊಂದಿದರೆ ಹೂಡಿಕೆ ಮಾಡಿದ ಮೊತ್ತವನ್ನು ಫಲಾನುಭವಿಯ ಕುಟುಂಬ ಸದಸ್ಯರಿಗೆ ಹಿಂತಿರುಗಿಸಲಾಗುತ್ತದೆ.


ಇದನ್ನೂ ಓದಿ : Petrol Price: ಹೊಸ ವರ್ಷಕ್ಕೆ ವಾಹನ ಸವಾರರಿಗೆ ಬಂಪರ್‌ ಗಿಫ್ಟ್.. ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರೀ ಇಳಿಕೆ..! 


ಪಿಂಚಣಿದಾರರು ಪಾಲಿಸಿ ಅವಧಿಯ ಅಂತ್ಯದವರೆಗೆ ಬದುಕಿದ್ದರೆ, ಹೂಡಿಕೆ ಮೊತ್ತ ಮತ್ತು ಅಂತಿಮ ಪಿಂಚಣಿ ಎರಡನ್ನೂ ಹೂಡಿಕೆದಾರರಿಗೆ ಪಾವತಿಸಲಾಗುತ್ತದೆ. ಮಾಸಿಕ ಪಿಂಚಣಿ ಪಾವತಿಗಳೊಂದಿಗೆ ವಾರ್ಷಿಕ ಬಡ್ಡಿ ದರವು 7.4 ಪ್ರತಿಶತ ಇರುತ್ತದೆ. ಈ ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿ ರೂ.1,000 ಮತ್ತು ಗರಿಷ್ಠ ಪಿಂಚಣಿ ರೂ.9,250 ಆಗಿದೆ. ಮಾಸಿಕ ರೂ.1,62,162, ತ್ರೈಮಾಸಿಕ ರೂ.1,61,074, ಅರ್ಧವಾರ್ಷಿಕ ರೂ.1,59,574 ಮತ್ತು ವಾರ್ಷಿಕ ರೂ.1,56,658. ಪಿಂಚಣಿ ಸಿಗುವುದು. ಹೂಡಿಕೆಯ ಸಮಯದಲ್ಲಿ ಚಂದಾದಾರರು ಆಯ್ಕೆ ಮಾಡಿದ ಪಿಂಚಣಿ ಯೋಜನೆಗೆ ಅನುಗುಣವಾಗಿ ಈ ಕಂತನ್ನು ನೀಡಲಾಗುತ್ತದೆ. 


ಮಾಸಿಕ ಪಿಂಚಣಿ ಪಡೆಯಲು ಹೂಡಿಕೆದಾರರು ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ತ್ರೈಮಾಸಿಕ ಪಿಂಚಣಿಗೆ ಗರಿಷ್ಠ ಹೂಡಿಕೆ ಮೊತ್ತ 14,89,933 ರೂಪಾಯಿ, ಅರೆ ವಾರ್ಷಿಕ ಪಿಂಚಣಿಗೆ 14,76,064 ರೂಪಾಯಿ ಮತ್ತು ವಾರ್ಷಿಕ ಪಿಂಚಣಿಗೆ 14,49,086 ರೂಪಾಯಿ ಹೂಡಿಕೆ ಮಾಡಬೇಕು. ಯಾವುದೇ ಹಿರಿಯ ನಾಗರಿಕರು ಈ ಯೋಜನೆಯಲ್ಲಿ 15 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಬಾರದು. ಸಂಪೂರ್ಣ ಯೋಜನೆ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಬಹುದು.


ಇದನ್ನೂ ಓದಿ : ರಾಜ್ಯದಲ್ಲಿ ಮದ್ಯ ಮಾರಾಟವು ಸರ್ಕಾರಕ್ಕೆ ಹೇಗೆ ಆದಾಯ ನೀಡುತ್ತದೆ ಗೊತ್ತೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.