Public Provident Fund: ಸಾರ್ವಜನಿಕ ಭವಿಷ್ಯ ನಿಧಿ ಎಂದರೆ ಪಿ‌ಪಿ‌ಎಫ್ ಯಾವುದೇ ಭಾರತೀಯ ನಾಗರಿಕರು ಹೂಡಿಕೆ ಮಾಡಬಹುದಾದ ಸರ್ಕಾರಿ ಯೋಜನೆಯಾಗಿದೆ. ಸುರಕ್ಷಿತ ಯೋಜನೆಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಪಿ‌ಪಿ‌ಎಫ್ ಅತ್ಯುತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಉತ್ತಮ ಬಡ್ಡಿಯೂ ಲಭ್ಯವಿದ್ದು ಪ್ರಸ್ತುತ, ಪಿಪಿಎಫ್ ಮೇಲಿನ ಬಡ್ಡಿ ಶೇಕಡಾ 7.1 ರಷ್ಟಿದೆ.  ಪಿ‌ಪಿ‌ಎಫ್  ಯೋಜನೆಯು 15 ವರ್ಷಗಳಲ್ಲಿ ಪಕ್ವವಾಗುತ್ತದೆ. ಇದರೊಂದಿಗೆ, ಆದಾಯ ತೆರಿಗೆ ಕಾಯಿದೆ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಸಹ ಲಭ್ಯವಿದೆ.  ಆದಾಗ್ಯೂ, ಪಿ‌ಪಿ‌ಎಫ್ ಖಾತೆಯಲ್ಲಿ ಪ್ರತಿ ಆರ್ಥಿಕ ವರ್ಷದಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡುವುದು ಅಗತ್ಯವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಹೌದು, ಪಿಪಿಎಫ್‌ನಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂ.ನಿಂದ  ಗರಿಷ್ಠ 1.5 ಲಕ್ಷ ರೂ.ಗಳವರೆಗೆ  ಹೂಡಿಕೆ ಮಾಡಬಹುದು. ಒಂದೊಮ್ಮೆ ಆರ್ಥಿಕ ವರ್ಷದಲ್ಲಿ ನೀವು ನಿಮ್ಮ ಪಿ‌ಪಿ‌ಎಫ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ, ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ. ನಿಮ್ಮ ಪಿ‌ಪಿ‌ಎಫ್ ಖಾತೆ ಬಂದ್ ಆಗಿದ್ದರೆ/ಮುಚ್ಚಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  ನೀವು  ಅದನ್ನು ಮತ್ತೆ ಪ್ರಾರಂಭಿಸಲು ಬಯಸಿದರೆ, ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಪಿ‌ಪಿ‌ಎಫ್ ಖಾತೆಯನ್ನು ಪುನಃ ಪ್ರಾರ್ಮಾಭಿಸಬಹುದು.  


ಇದನ್ನೂ ಓದಿ- PPF: ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಪಿ‌ಪಿ‌ಎಫ್ ಖಾತೆ ತೆರೆಯಬಹುದು? ಮಕ್ಕಳ ಖಾತೆಯಲ್ಲಿ ಪೋಷಕರಿಗೆ ಸಿಗುತ್ತಾ ಟಾಕ್ಸ್ ಪ್ರಯೋಜನ?


ಬಂದ್ ಆಗಿರುವ ಪಿ‌ಪಿ‌ಎಫ್ ಖಾತೆಯನ್ನು ಈ ರೀತಿ ಪುನಃ ಪ್ರಾರಂಭಿಸಿ: 
ಒಂದೊಮ್ಮೆ ನಿಮ್ಮ ಪಿ‌ಪಿ‌ಎಫ್ ಖಾತೆ ಮುಚ್ಚಲ್ಪಟ್ಟಿದ್ದರೆ ನಿಮ್ಮ ಪಿ‌ಪಿ‌ಎಫ್ ಖಾತೆ ಪಕ್ವವಾಗುವ ಮೊದಲು ಯಾವುದೇ ಸಮಯದಲ್ಲಿ ನೀವು ಆ ಖಾತೆಯನ್ನು ಪುನಃ ಕಾರ್ಯನಿರ್ವಹಿಸುವಂತೆ ಮಾಡಬಹುದು. ಇದಕ್ಕಾಗಿ, ಠೇವಣಿದಾರನು ತನ್ನ ಖಾತೆಯನ್ನು ಹೊಂದಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. ಅಲ್ಲಿ, ಪಿಪಿಎಫ್ ಖಾತೆಯನ್ನು ಪುನಃ ತೆರೆಯಲು ಲಿಖಿತ ಅರ್ಜಿಯನ್ನು ನೀಡಬೇಕಾಗುತ್ತದೆ. ಅಲ್ಲದೆ, ಕನಿಷ್ಠ ಡೀಫಾಲ್ಟ್ ಶುಲ್ಕ 500 ರೂ. + ಪ್ರತಿ ವರ್ಷಕ್ಕೆ 50 ರೂ.ಗಳಂತೆ ನಿಮ್ಮ ಪಿ‌ಪಿ‌ಎಫ್ ಖಾತೆ ಎಷ್ಟು ವರ್ಷ ಮುಚ್ಚಲ್ಪಟ್ಟಿರುತ್ತದೋ ಅಷ್ಟು ಶುಲ್ಕವನ್ನು ಠೇವಣಿ ಮಾಡಬೇಕು. ಉದಾಹರಣೆಗೆ, ನಿಮ್ಮ ಖಾತೆ ಮೂರು ವರ್ಷಗಳ ಕಾಲ ಬಂದ್ ಆಗಿರಲಿದೆ ಎಂದು ಭಾವಿಸೋಣ. ಈ ಸಂದರ್ಭದಲ್ಲಿ ನೀವು ನಿಮ್ಮ ಪಿ‌ಪಿ‌ಎಫ್ ಖಾತೆಯನ್ನು ಪುನರಾರಂಭಿಸಲು  ಕನಿಷ್ಟ 1500 ರೂಪಾಯಿಗಳನ್ನು ಮತ್ತು ಪ್ರತಿ ವರ್ಷಕ್ಕೆ 50 ರೂ.ಗಳಂತೆ ಮೂರು ವರ್ಷ 150 ರೂ.ಗಳನ್ನು ಡೀಫಾಲ್ಟ್ ಶುಲ್ಕವಾಗಿ ಠೇವಣಿ ಮಾಡಬೇಕಾಗುತ್ತದೆ. 


ಇದನ್ನೂ ಓದಿ- LIC Index Plus Plan: ಇಂಡೆಕ್ಸ್ ಪ್ಲಸ್ ಯೋಜನೆ ಆರಂಭಿಸಿದ ಎಲ್‌ಐ‌ಸಿ


ಗಮನಾರ್ಹವಾಗಿ ಡಿಫಾಲ್ಟ್ ಶುಲ್ಕ ಪಾವತಿಯ ನಂತರ ನಿಮ್ಮ ಪಿ‌ಪಿ‌ಎಫ್ ಖಾತೆಯನ್ನು ಮತ್ತೆ ಮುಂದುವರೆಸಲಾಗುತ್ತದೆ. ಆದಾಗ್ಯೂ, ಈ ಒಮ್ಮೆ ಬಂದ್ ಆಗಿದ್ದ ಪಿ‌ಪಿ‌ಎಫ್ ಖಾತೆಯಲ್ಲಿ ಸಾಲ/ಹಿಂಪಡೆಯುವ ಸೌಲಭ್ಯ ಲಭ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.