LIC ಹೂಡಿಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಎರಡೂ ಕೈಗಳಿಂದ ಹಣ ಬಾಚಿಕೊಳ್ಳುವ ಅವಕಾಶ!

Good News For LIC Investors: ಇಂದು ಮೊದಲ ಬಾರಿಗೆ ಭಾರತೀಯ ಜೀವವಿಮಾ ನಿಗಮದ ಷೇರುಗಳ ಬೆಲೆ 1000 ರೂ. ಗಡಿ ದಾಟಿದೆ. ಸೋಮವಾರದ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಶೇ.6ರಷ್ಟು ಏರಿಕೆ ಕಂಡಿವೆ. ಈ ಏರಿಕೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ (Business News In Kannada)  

Written by - Nitin Tabib | Last Updated : Feb 5, 2024, 09:12 PM IST
  • ಇನ್ನೊಂದೆಡೆ ಕಳೆದ ತಿಂಗಳು LIC ಮಾರುಕಟ್ಟೆ ಬಂಡವಾಳದ ವಿಷಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹಿಂದಕ್ಕೆ ತಳ್ಳಿ,
  • ದೇಶದ ಅತ್ಯಂತ ಮೌಲ್ಯಯುತ ಸಾರ್ವಜನಿಕ ವಲಯದ ಕಂಪನಿಯಾಗಿದೆ.
  • ಆದಾಗ್ಯೂ, ರಿಲಯನ್ಸ್ ಇಂಡಸ್ಟ್ರೀಸ್ 19,46,521.81 ಕೋಟಿ ರೂಪಾಯಿಗಳ ಎಂಕ್ಯಾಪ್ನೊಂದಿಗೆ ದೇಶದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ.
LIC ಹೂಡಿಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಎರಡೂ ಕೈಗಳಿಂದ ಹಣ ಬಾಚಿಕೊಳ್ಳುವ ಅವಕಾಶ! title=

LIC Share Price Hike: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ ಎಲ್‌ಐಸಿ (ಎಲ್‌ಐಸಿ ಷೇರು ಬೆಲೆ) ಷೇರುಗಳು ಇಂದು ಅದ್ಭುತ ಪ್ರದರ್ಶನ ತೋರಿವೆ. ಇಂದು ಮೊದಲ ಬಾರಿಗೆ ಕಂಪನಿಯ ಷೇರು 1000 ರೂ. ಗಡಿ ದಾಟಿದೆ. ಸೋಮವಾರದ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಶೇ.6ರಷ್ಟು ಏರಿಕೆ ಕಂಡಿವೆ. ಈ ಏರಿಕೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ (Business News In Kannada)

ಇಂದು ಕಂಪನಿಯ ಷೇರುಗಳು 995.75 ರ ಮಟ್ಟದಲ್ಲಿ ಶೇ. 5.32 ಆಂಡರೆ, 50.30 ರಷ್ಟು ಏರಿಕೆಯೊಂದಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ. ಇಂದಿನ ವಹಿವಾಟಿನಲ್ಲಿ ಒಂದು ಹಂತದಲ್ಲಿ ಶೇ.8.81ರಷ್ಟು ಏರಿಕೆ ಕಂಡು 52 ವಾರಗಳ ದಾಖಲೆ ಮಟ್ಟವಾದ ರೂ.1,027.95 ತಲುಪಿದ್ದಾವು. ಇದರ ಷೇರುಗಳು ಎನ್‌ಎಸ್‌ಇಯಲ್ಲಿ ಶೇ. 5.64 ಏರಿಕೆಯಾಗಿ 998.85 ರೂ.ಗೆ ತಲುಪಿವೆ.

ಎಂಸಿಎಪಿ 6,32,721.15 ಕೋಟಿ ರೂ.ಗೆ ತಲುಪಿದೆ
ಷೇರು ಮಾರುಕಟ್ಟೆಯ ಏರಿಕೆಯ ಮಧ್ಯೆ, ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು 35,230.25 ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿ 6,32,721.15 ಕೋಟಿ ರೂಪಾಯಿಗಳಿಗೆ ತಲುಪಿದೆ. ಈ ವರ್ಷ ಇದುವರೆಗೆ ಎಲ್‌ಐಸಿ ಷೇರುಗಳು ಶೇ.20ರಷ್ಟು ಏರಿಕೆ ಕಂಡಿವೆ.

6 ತಿಂಗಳಲ್ಲಿ ಸ್ಟಾಕ್ ಎಷ್ಟು ಹೆಚ್ಚಾಗಿದೆ?
ಕಳೆದ 6 ತಿಂಗಳುಗಳಲ್ಲಿ, ಎಲ್ಐಸಿ ಹೂಡಿಕೆದಾರರಿಗೆ ಶೇ. 51.90 ಅಂದರೆ 340.20 ರೂಪಾಯಿಗಳ ಲಾಭವನ್ನು ನೀಡಿದೆ. ಇದೇ ವೇಳೆ, ಕಳೆದ ಒಂದು ವರ್ಷದಲ್ಲಿ ಷೇರು ಹೂಡಿಕೆದಾರರಿಗೆ ಶೇ. 65.99 ಲಾಭವನ್ನು ನೀಡಿದೆ.

ಇದನ್ನೂ ಓದಿ-New Rule: ತಂಬಾಕು-ಪಾನ್ ಮಸಾಲಾಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆ, ಏಪ್ರಿಲ್ 1 ರಿಂದ 1 ಲಕ್ಷ ರೂ. ದಂಡ

ಎಸ್‌ಬಿಐ ಕೂಡ ಹಿಂದೆ ಬಿದ್ದಿದೆ
ಇನ್ನೊಂದೆಡೆ ಕಳೆದ ತಿಂಗಳು LIC ಮಾರುಕಟ್ಟೆ ಬಂಡವಾಳದ ವಿಷಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹಿಂದಕ್ಕೆ ತಳ್ಳಿ, ದೇಶದ ಅತ್ಯಂತ ಮೌಲ್ಯಯುತ ಸಾರ್ವಜನಿಕ ವಲಯದ ಕಂಪನಿಯಾಗಿದೆ. ಆದಾಗ್ಯೂ, ರಿಲಯನ್ಸ್ ಇಂಡಸ್ಟ್ರೀಸ್ 19,46,521.81 ಕೋಟಿ ರೂಪಾಯಿಗಳ ಎಂಕ್ಯಾಪ್ನೊಂದಿಗೆ ದೇಶದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ.

ಇದನ್ನೂ ಓದಿ-FD Interest Rate Hike: ಈ ಸರ್ಕಾರಿ ಬ್ಯಾಂಕುಗಳು ಎಫ್ಡಿ ಮೇಲೆ ನೀಡುತ್ತಿವೆ ಶೇ.8.40ರಷ್ಟು ಬಡ್ಡಿದರ!

ಮೇ 2022 ಷೇರುಗಳನ್ನು ಪಟ್ಟಿ ಮಾಡಲಾಗಿದೆ
ದೇಶದ ಅತಿದೊಡ್ಡ ವಿಮಾ ಕಂಪನಿ LIC ಮೇ 2022 ರಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿಮಾಡಲಾಗಿದೆ. ಆಗ, ಸರ್ಕಾರವು ಐಪಿಒ ಮೂಲಕ 22.13 ಕೋಟಿಗೂ ಹೆಚ್ಚು ಷೇರುಗಳನ್ನು ಅಂದರೆ ಎಲ್ಐಸಿಯಲ್ಲಿ ಶೇ.3.5 ರಷ್ಟು ಷೇರುಗಳನ್ನು ಮಾರಾಟ ಮಾಡಿತ್ತು. ಕಂಪನಿಯಲ್ಲಿ ಸರ್ಕಾರವು ಇನ್ನೂ 96.5 ಪ್ರತಿಶತ ಪಾಲನ್ನು ಹೊಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News