Dhanatrayodashi 2022: ಭಾರತದಲ್ಲಿ ಹಬ್ಬದ ಸೀಸನ್‌ ಆರಂಭಗೊಂಡಿದೆ, ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಭರಾಟೆ ಕೂಡ ಇದೆ. ದೇಶದ ಮಾರುಕಟ್ಟೆಯಲ್ಲಿ ಹೆಚ್ಚಿನ ವಾಹನಗಳನ್ನು ಖರೀದಿಸುವ ಸಮಯ ಇದು ಮತ್ತು ಗ್ರಾಹಕರನ್ನು ಸೆಳೆಯಲು ಕಂಪನಿಗಳು ಕೂಡ ತಮ್ಮ ವಾಹನಗಳ ಮೇಲೆ ವಿವಿಧ ರಿಯಾಯಿತಿಗಳನ್ನು ನೀಡುತ್ತವೆ. ಆದ್ದರಿಂದ ನೀವು ಈಗಾಗಲೇ ನಿಮಗಾಗಿ ವಾಹನವನ್ನು ಬುಕ್ ಮಾಡಿದ್ದರೆ ಅಥವಾ ಧನತ್ರಯೋದಶಿಯ ದಿನ ಹೊಸ ಕಾರು ಅಥವಾ ಬೈಕ್ ಅನ್ನು ಡೆಲಿವರಿ ಪಡೆಯಲು ಬಯಸಿದ್ದರೆ, ಡೆಲಿವರಿ ಪಡೆಯುವ ಅತ್ಯಂತ ಮಂಗಳಕರ ಸಮಯ ಯಾವುದು ಎಂದು ನಾವು ನಿಮಗೆ ಹೇಳಲಿದ್ದೇವೆ. ವಾಸ್ತವವಾಗಿ ಈ ಬಾರಿ ಧನತ್ರಯೋದಶಿ ಎರಡು ದಿನಗಳಿಂದ ಬೀಳುತ್ತಿದೆ, ಆದ್ದರಿಂದ ಗೊಂದಲಕ್ಕೆ ಒಳಗಾಗಬೇಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ನಾಳೆಯಿಂದ ಸತತ ಆರು ದಿನ ಬ್ಯಾಂಕ್ ರಜೆ, ಬ್ಯಾಂಕ್ ಗೆ ತೆರಳುವ ಮುನ್ನ ರಜಾ ಪಟ್ಟಿಯನ್ನು ಗಮನಿಸಿ


ಕಾರು ಅಥವಾ ಬೈಕು ವಿತರಣೆಯನ್ನು ಯಾವ ಸಮಯಕ್ಕೆ ಪಡೆಯಬೇಕು
ಹಿಂದೂ ಧರ್ಮದ ಪ್ರಕಾರ, ಧನತ್ರಯೋದಶಿಯ ದಿನ ಹೊಸದನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಚಿನ್ನ, ಬೆಳ್ಳಿ ಮತ್ತು ಇತರ ಅನೇಕ ವಸ್ತುಗಳನ್ನು ಹೊರತುಪಡಿಸಿ, ಜನರು ತಮ್ಮ ಹೊಸ ಕಾರು ಅಥವಾ ಬೈಕ್ ಅನ್ನು ಈ ದಿನದಂದು ಡೆಲಿವರಿ ಪಡೆಯಲು ಇಷ್ಟಪಡುತ್ತಾರೆ. ಈ ಬಾರಿ ಧನತ್ರಯೋದಶಿಯ ಮುಹೂರ್ತ ಎರಡು ದಿನಗಳವರೆಗೆ ಇರಲಿದೆ. ಇದರಲ್ಲಿ, 22 ಅಕ್ಟೋಬರ್ ಪೂಜೆಗೆ ಉತ್ತಮ ಸಮಯ, ಆದರೆ ನೀವು ಕಾರು ಅಥವಾ ಬೈಕ್ ಅನ್ನು ಡೆಲಿವರಿ ಪಡೆಯಲು ಬಯಸಿದರೆ, ನೀವು ಕಾರನ್ನು ಅಕ್ಟೋಬರ್ 23 ರಂದು ಒಟ್ಟು ಮೂರು ಮುಹೂರ್ತದಲ್ಲಿ ನಿಮ್ಮ ಮನೆಗೆ ತರಬಹುದು.


ಇದನ್ನೂ ಓದಿ-7th Pay Commission : 18 ತಿಂಗಳ ಬಾಕಿ DA ಬಾಕಿ ಬಗ್ಗೆ ಬಿಗ್ ಅಪ್​ಡೇಟ್! ಖಾತೆಗೆ ಈ ದಿನ ಹಣ


ಇಲ್ಲಿವೆ ಆ 3 ಶುಭ ಮುಹೂರ್ತಗಳು
ಅಕ್ಟೋಬರ್ 23 ರ ಬೆಳಗ್ಗೆಯಿಂದ ಸಾಯಂಕಾಲದವರೆಗೆ, ನೀವು ಹೊಸ ವಾಹನದ ವಿತರಣೆಯನ್ನು ಪಡೆದುಕೊಳ್ಳಬಹುದು. ಈ ಮೂರರಲ್ಲಿ ಮೊದಲ ಮುಹೂರ್ತವು ಬೆಳಗ್ಗೆ 7:51 ರಿಂದ ಮಧ್ಯಾಹ್ನ 12 ರವರೆಗೆ ಇರಲಿದೆ. ಇದಾದ ನಂತರ ಎರಡನೇ ಮುಹೂರ್ತವು ಮಧ್ಯಾಹ್ನ 1:30 ರಿಂದ 3 ಗಂಟೆಯವರೆಗೆ ಇರಲಿದೆ. ಅಕ್ಟೋಬರ್ 23 ರಂದು ಸಂಜೆಯ ಸಮಯವು ಸಹ ಒಂದು ಉತ್ತಮ ಮುಹುರ್ತವನ್ನು ಒಳಗೊಂಡಿದೆ, ಇದರಲ್ಲಿ ಹೊಸ ವಾಹನದ ವಿತರಣೆಯನ್ನು ಸಂಜೆ 6 ರಿಂದ ರಾತ್ರಿ 10:30 ರವರೆಗೆ ಪಡೆಯುವುದು ಅತ್ಯಂತ ಮಂಗಳಕರವಾಗಿರುತ್ತದೆ. ನಿಮ್ಮ ಅನುಕೂಲದ ಸಮಯವನ್ನು ನೋಡಿ, ಸಂಬಂಧಪಟ್ಟ ವಾಹನ ಡೀಲರ್‌ಶಿಪ್‌ಗೆ ಈಗಲೇ ಕರೆ ಮಾಡಿ ಮತ್ತು ಈ ಯಾವ ಸಮಯದಲ್ಲಿ ನೀವು ನಿಮ್ಮ ವಾಹನದ ದೆಲಿವರ್ ಪಡೆಯುವಿರಿ ಎಂಬುದನ್ನು ಅವರಿಗೆ ಮಾಹಿತಿ ನೀಡಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.