ನಾಳೆಯಿಂದ ಸತತ ಆರು ದಿನ ಬ್ಯಾಂಕ್ ರಜೆ, ಬ್ಯಾಂಕ್ ಗೆ ತೆರಳುವ ಮುನ್ನ ರಜಾ ಪಟ್ಟಿಯನ್ನು ಗಮನಿಸಿ

Diwali Bank Holidays:ನಾಳೆಯಿಂದ ಅಂದರೆ 22 ಅಕ್ಟೋಬರ್ 2022 ರಿಂದ ಮುಂದಿನ 6 ದಿನಗಳವರೆಗೆ ನಿರಂತರ ಬ್ಯಾಂಕ್ ರಜೆ ಇರಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ತೆರಳುವ ಮುನ್ನ ಬ್ಯಾಂಕ್ ರಜೆಯೇ ಇಲ್ಲವೇ ಎನ್ನುವುದನ್ನೊಮ್ಮೆ ಖಚಿತ ಪಡಿಸಿಕೊಳ್ಳಿ. 

Written by - Ranjitha R K | Last Updated : Oct 21, 2022, 01:23 PM IST
  • ದೇಶಾದ್ಯಂತ ದೀಪಾವಳಿ ಸಂಭ್ರಮ
  • ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಸಾಲು ಸಾಲು ರಜೆ
  • ಸತತ 6 ದಿನಗಳವರೆಗೆ ಬ್ಯಾಂಕ್ ರಜೆ
ನಾಳೆಯಿಂದ ಸತತ ಆರು ದಿನ ಬ್ಯಾಂಕ್ ರಜೆ, ಬ್ಯಾಂಕ್ ಗೆ ತೆರಳುವ ಮುನ್ನ ರಜಾ ಪಟ್ಟಿಯನ್ನು ಗಮನಿಸಿ  title=
October Bank Holidays (file photo)

Diwali Bank Holidays : ದೇಶಾದ್ಯಂತ ದೀಪಾವಳಿ ಸಂಭ್ರಮ ಕಳೆ ಕಟ್ಟಿದೆ. ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಸಾಲು ಸಾಲು ರಜೆ ಇರಲಿದೆ. ಹೀಗಾಗಿ ಬ್ಯಾಂಕ್ ಕೆಲಸಕ್ಕಾಗಿ ತೆರಳುವ ಮುನ್ನ ಒಮ್ಮೆ ಬ್ಯಾಂಕ್ ರಜಾ ಪಟ್ಟಿಯನ್ನು ನೋಡಿಕೊಳ್ಳಿ. 

ಸತತ 6 ದಿನಗಳವರೆಗೆ ಬ್ಯಾಂಕ್ ರಜೆ : 
ನಾಳೆಯಿಂದ ಅಂದರೆ 22 ಅಕ್ಟೋಬರ್ 2022 ರಿಂದ ಮುಂದಿನ 6 ದಿನಗಳವರೆಗೆ ನಿರಂತರ ಬ್ಯಾಂಕ್ ರಜೆ ಇರಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ತೆರಳುವ ಮುನ್ನ ಬ್ಯಾಂಕ್ ರಜೆಯೇ ಇಲ್ಲವೇ ಎನ್ನುವುದನ್ನೊಮ್ಮೆ ಖಚಿತ ಪಡಿಸಿಕೊಳ್ಳಿ. ಬ್ಯಾಂಕ್ ರಜಾ ಪಟ್ಟಿಯ ಪ್ರಕಾರ ಈ ರಜೆ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಬದಲಾಗಿರುತ್ತವೆ. ಹಾಗಾಗಿ ನಿಮ್ಮ ನಗರದಲ್ಲಿ ಯಾವ ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎನ್ನುವುದನ್ನು ತಿಳಿದುಕೊಳ್ಳಿ. 

ಇದನ್ನೂ ಓದಿ : 7-Seater Cars: ಅತ್ಯುತ್ತಮ ಮೈಲೇಜ್ ಹೊಂದಿರುವ 7 ಸೀಟರ್ ಕಾರುಗಳಿವು

 ಆರ್ ಬಿಐಯಿಂದ ರಜಾ ಪಟ್ಟಿ ಬಿಡುಗಡೆ : 
 ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತದೆ. ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಆರ್‌ಬಿಐ ವರ್ಷದ ಆರಂಭದಲ್ಲಿಯೇ  ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ರಿಸರ್ವ್ ಬ್ಯಾಂಕ್ ನೀಡುವ ರಜಾದಿನಗಳ ಪಟ್ಟಿಯು ಅನೇಕ ರಾಷ್ಟ್ರೀಯ ರಜಾದಿನಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ, ಅನೇಕ ರಜಾದಿನಗಳು ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿರುತ್ತವೆ. ಬ್ಯಾಂಕ್ ರಜಾ ದಿನಗಳ ಪಟ್ಟಿ ಹೀಗಿರಲಿದೆ : 

1. 22 ಅಕ್ಟೋಬರ್ 2022 - ಧನ್ತೆರೆಸ್ ಕಾರಣ  ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ದಿನವು ತಿಂಗಳ ನಾಲ್ಕನೇ ಶನಿವಾರವೂ ಆಗಿದೆ.

2.23 ಅಕ್ಟೋಬರ್ 2022 - ಭಾನುವಾರವಾದ್ದರಿಂದ ಬ್ಯಾಂಕ್‌ಗಳಿಗೆ ವಾರದ ರಜೆ ಇರುತ್ತದೆ. ಈ ದಿನ ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಿರುತ್ತವೆ. 

 3. 24 ಅಕ್ಟೋಬರ್ 2022 - ದೀಪಾವಳಿಯ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

 4. 25 ಅಕ್ಟೋಬರ್ 2022 - ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್, ಜೈಪುರದಲ್ಲಿ ಲಕ್ಷ್ಮೀ ಪೂಜೆ/ದೀಪಾವಳಿ/ಗೋವರ್ಧನ ಪೂಜೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

 5. 26 ಅಕ್ಟೋಬರ್ 2022 - ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಾಕ್, ಜಮ್ಮು, ಕಾನ್ಪುರ್, ಲಕ್ನೋ, ಮುಂಬೈ, ನಾಗ್ಪುರದಲ್ಲಿ  ಗೋವರ್ಧನ ಪೂಜೆ / ವಿಕ್ರಮ್ ಸಂವತ್ ಹೊಸ ವರ್ಷದ ದಿನ / ಭಾಯಿ ಬಿಜ್ / ದೀಪಾವಳಿ / ಲಕ್ಷ್ಮಿ ಪೂಜೆ /  ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

6. 27 ಅಕ್ಟೋಬರ್ 2022 - ಈ ದಿನ ಭಾಯಿ ದೂಜ್ / ಚಿತ್ರಗುಪ್ತ ಜಯಂತಿ / ಲಕ್ಷ್ಮಿ ಪೂಜೆ / ದೀಪಾವಳಿ / ನಿಂಗೋಲ್ ಚಕ್ಕುಬಾ ಹಬ್ಬವನ್ನು ಆಚರಿಸಲಾಗುತ್ತದೆ. ಇದರಿಂದಾಗಿ ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ, ಲಕ್ನೋದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್.! ತುಟ್ಟಿ ಭತ್ಯೆ 6% ರಷ್ಟು ಹೆಚ್ಚಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News