PVR ಹಾಗೂ INOXಗಳ ವಿಲೀನ, ಮಂಡಳಿಯಿಂದ ಮಹತ್ವದ ನಿರ್ಧಾರ, ಷೇರುಗಳ ಮೇಲೆ ಏನು ಪ್ರಭಾವ?
PVR-INOX Merger - PVR ಲಿಮಿಟೆಡ್ (ವರ್ಗಾವಣೆ ಕಂಪನಿ) ನಿರ್ದೇಶಕರ ಮಂಡಳಿಯು INOX ಲೀಸರ್ ಲಿಮಿಟೆಡ್ (ವರ್ಗಾವಣೆ ಕಂಪನಿ) ಕಂಪನಿಯೊಂದಿಗೆ ವಿಲೀನ ಪ್ರಕ್ರಿಯೆಯನ್ನು ಅನುಮೋದಿಸಿದೆ ಎಂದು PVR ಮಾಹಿತಿ ನೀಡಿದೆ. INOX ಮಂಡಳಿಯು ಕೂಡ ಈ ವಿಲೀನ ಯೋಜನೆಯನ್ನು ಅನುಮೋದಿಸಿದೆ ಎಂದು ಅದು ಹೇಳಿದೆ. ಈ ಒಪ್ಪಂದದ ಬಳಿಕ, ಇದೀಗ ಚಲನಚಿತ್ರ ಪ್ರದರ್ಶನ ಉದ್ಯಮದಲ್ಲಿ ಏನಾದರೂ ಉತ್ತಮ ಮತ್ತು ಹೊಸದನ್ನು ಕಾಣಬಹುದು ಎಂದು ನಿರೀಕ್ಷಿಸಲಾಗಿದೆ.
ನವದೆಹಲಿ: PVR Cinemas-INOX Leisure Merger Deal - ದೇಶದ ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿ (Multiplex Industry In India) ಮಹತ್ವದ ಬದಲಾವಣೆಯಾಗುತ್ತಿದೆ. ಭಾರತದ ಎರಡು ದೊಡ್ಡ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ ಲೀಸರ್ ವಿಲೀನಗೊಂಡಿವೆ. PVR ಮತ್ತು Inox ಕಂಪನಿಯ ಮಂಡಳಿಗಳು ಇಂದು ಅಂದರೆ ಮಾರ್ಚ್ 27 ರ ಭಾನುವಾರದಂದು ಯೋಜನೆಗೆ ಪರಸ್ಪರ ಅನುಮೋದನೆ ಪಡೆದುಕೊಂಡಿವೆ.
PVR ಲಿಮಿಟೆಡ್ (ವರ್ಗಾವಣೆ ಕಂಪನಿ) ನಿರ್ದೇಶಕರ ಮಂಡಳಿಯು INOX ಲೀಸರ್ ಲಿಮಿಟೆಡ್ (ವರ್ಗಾವಣೆ ಕಂಪನಿ) ಕಂಪನಿಯೊಂದಿಗೆ ವಿಲೀನ ಪ್ರಕ್ರಿಯೆಯನ್ನು ಅನುಮೋದಿಸಿದೆ ಎಂದು PVR ಮಾಹಿತಿ ನೀಡಿದೆ. INOX ಮಂಡಳಿಯು ಕೂಡ ಈ ವಿಲೀನ ಯೋಜನೆಯನ್ನು ಅನುಮೋದಿಸಿದೆ ಎಂದು ಅದು ಹೇಳಿದೆ. ಈ ಒಪ್ಪಂದದ ಬಳಿಕ, ಇದೀಗ ಚಲನಚಿತ್ರ ಪ್ರದರ್ಶನ ಉದ್ಯಮದಲ್ಲಿ ಏನಾದರೂ ಉತ್ತಮ ಮತ್ತು ಹೊಸದನ್ನು ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಈ ವಿಲೀನದ ನಂತರ, PVR ಮತ್ತು Inox Leisure ಜಂಟಿಯಾಗಿ ಭಾರತದಾದ್ಯಂತ 1,500 ಕ್ಕೂ ಹೆಚ್ಚು ಪರದೆಗಳನ್ನು ಹೊಂದಲಿವೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Post Office ಹೂಡಿಕೆದಾರರೆ ಗಮನಿಸಿ! ಏ.1 ರಿಂದ FD ಸೇರಿದಂತೆ ಹಲವು ನಿಯಮಗಳಲ್ಲಿ ಭಾರಿ ಬದಲಾವಣೆ
ಷೇರು ಮಾರುಕಟ್ಟೆಯಲ್ಲಿ ಸ್ಥಿತಿ ಹೇಗಿರಲಿದೆ?
>> PVR ಮತ್ತು Inox ಎರಡೂ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಪಟ್ಟಿಮಾಡಲಾದ ಕಂಪನಿಗಳಾಗಿವೆ.
>> ಈಗ ಈ ವಿಲೀನದ ನಂತರ ಷೇರುಗಳ ಅನುಪಾತ - INOX ನ 10 ಷೇರುಗಳಿಗೆ, PVR ನ ಮೂರು ಷೇರುಗಳು ಇರಲಿವೆ.
>> ವಿಲೀನದ ನಂತರ, INOX ಪ್ರವರ್ತಕರು ಸಂಯೋಜಿತ ಘಟಕದಲ್ಲಿ ಶೇ. 16.66 ಶೇಕಡಾ ಪಾಲನ್ನು ಹೊಂದಿರುತ್ತಾರೆ, ಆದರೆ PVR ಪ್ರವರ್ತಕರು ಶೇ. 10.62 ಪಾಲನ್ನು ಹೊಂದಿರಲಿದ್ದಾರೆ.
>> ವಿಲೀನದ ನಂತರ, PVR ನ ಅಸ್ತಿತ್ವದಲ್ಲಿರುವ ಪ್ರವರ್ತಕರೊಂದಿಗೆ INOX ನ ಪ್ರವರ್ತಕರು ವಿಲೀನಗೊಂಡ ಘಟಕದಲ್ಲಿ ಸಹ-ಪ್ರವರ್ತಕರಾಗಳಿದ್ದಾರೆ.
ಇದನ್ನೂ ಓದಿ-ಮಾ.31 ರೊಳಗೆ ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು ₹10 ಸಾವಿರ ಗ್ಯಾರಂಟಿ ಪಿಂಚಣಿ ಪಡೆಯಿರಿ
ಅತ್ಯಂತ ದೊಡ್ಡ ಚಲನಚಿತ್ರ ಪ್ರದರ್ಶನ ಕಂಪನಿ
ಈ ವಿಲೀನ ಪ್ರಕ್ರಿಯೆಯ ನಂತರ, ಸಾಮಾನ್ಯ ಜನರು ಹೊಸದನ್ನು ಕಾಣುವ ನಿರೀಕ್ಷೆಯಲ್ಲಿದ್ದಾರೆ. INOX ಪ್ರಸ್ತುತ 72 ನಗರಗಳಲ್ಲಿ 675 ಪರದೆಗಳನ್ನು ನಿರ್ವಹಿಸುತ್ತದೆ, ಆದರೆ PVR 73 ನಗರಗಳಲ್ಲಿ ಒಟ್ಟು 181 ಆಸ್ತಿಗಳ ಮೂಲಕ 871 ಪರದೆಗಳನ್ನು ನಿರ್ವಹಿಸುತ್ತದೆ. ಇವೆರಡರ ಸಂಯೋಜಿತ ಘಟಕವು 109 ನಗರಗಳಲ್ಲಿ 341 ಆಸ್ತಿಗಳ ಮೂಲಕ 1,546 ಪರದೆಗಳನ್ನು ನಿರ್ವಹಿಸುವ ಭಾರತದ ಅತಿದೊಡ್ಡ ಚಲನಚಿತ್ರ ಪ್ರದರ್ಶನ ಕಂಪನಿಯಾಗಲಿದೆ. ಪ್ರೇಕ್ಷಕರಿಗೂ ಇದರಿಂದ ಲಾಭವಾಗುವ ನಿರೀಕ್ಷೆ ಇದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.