ನವದೆಹಲಿ : ಹಿರಿಯ ನಾಗರಿಕರಿಗೊಂದು ಸಂತಸದ ಸುದ್ದಿ. ನೀವು ಇಲ್ಲಿಯವರೆಗೆ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ಪ್ರಯೋಜನವನ್ನು ಪಡೆಯದಿದ್ದರೆ, ಈಗಲೇ 60 ವರ್ಷ ಮೇಲ್ಪಟ್ಟವರಿಗಾಗಿ ಸರ್ಕಾರ 'ಪ್ರಧಾನಿ ವಯ ವಂದನಾ ಯೋಜನೆ' ಆರಂಭಿಸಿದೆ. ಇದರ ಅಡಿಯಲ್ಲಿ, ನೀವು ವಾರ್ಷಿಕವಾಗಿ 1,11,000 ರೂ.ವರೆಗೆ ಪಿಂಚಣಿ (ಹಿರಿಯ ನಾಗರಿಕರ ಉಳಿತಾಯ ಯೋಜನೆ) ಪಡೆಯಬಹುದು.
ಅವಧಿ ಎಷ್ಟು?
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(PM Vaya Vandana Yojana)ಯು ವೃದ್ಧರನ್ನು ಅವರ ಜೀವನದ ನಿರ್ಣಾಯಕ ಹಂತದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಾರಂಭಿಸಲಾಗಿದೆ. ಇದರ ಅವಧಿಯು ಮಾರ್ಚ್ 31, 2020 ರವರೆಗೆ ಇತ್ತು, ಆದರೆ ಈಗ ಅದನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ. ಆದರೆ, ಹೊಸ ಆರ್ಥಿಕ ವರ್ಷದಲ್ಲಿ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Petrol Diesel Price: 6 ದಿನಗಳಲ್ಲಿ 5 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಇಂದು ಎಷ್ಟು ಹೆಚ್ಚಳ ಗೊತ್ತಾ?
ಯಾರು ಪ್ರಯೋಜನ ಪಡೆಯಬಹುದು?
ಈ ಯೋಜನೆಗೆ ಸೇರಲು ಕನಿಷ್ಠ ವಯಸ್ಸು 60 ವರ್ಷಗಳು. ಅಂದರೆ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ನಾಗರಿಕರು ಅದರಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ ಗರಿಷ್ಠ ವಯಸ್ಸಿನ ಮಿತಿ ಇಲ್ಲ.
LIC ಜವಾಬ್ದಾರಿ ವಹಿಸಿಕೊಂಡಿದೆ
ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 15 ಲಕ್ಷ ರೂ.ವರೆಗೆ ಹೂಡಿಕೆ(Investment) ಮಾಡಬಹುದು. ಈ ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಜೀವ ವಿಮಾ ನಿಗಮಕ್ಕೆ (LIC) ವಹಿಸಲಾಗಿದೆ. ಈ ಯೋಜನೆಯಲ್ಲಿ ಪಿಂಚಣಿಗಾಗಿ, ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು. ತದನಂತರ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ಆರಿಸಿಕೊಳ್ಳಬಹುದು.
ವಾರ್ಷಿಕ ಪಿಂಚಣಿ ಎಷ್ಟು?
ಈ ಯೋಜನೆಯಡಿಯಲ್ಲಿ, ನೀವು ತಿಂಗಳಿಗೆ ರೂ 1000 ಪಿಂಚಣಿಗಾಗಿ ರೂ 1,62,162 ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಡಿ, ಗರಿಷ್ಠ ಮಾಸಿಕ ಪಿಂಚಣಿ ರೂ 9,250, ತ್ರೈಮಾಸಿಕ ರೂ 27,750, ಅರ್ಧ ವಾರ್ಷಿಕ ಪಿಂಚಣಿ 55,500 ರೂ. ಮತ್ತು ವಾರ್ಷಿಕ 1,11,000 ರೂ.ಪಿಂಚಣಿ ಸಿಗಲಿದೆ.
ಹೂಡಿಕೆ ಮಾಡುವುದು ಹೇಗೆ?
PMVVY ಯೋಜನೆಯ ಬಗ್ಗೆ ವಿವರವಾದ ಮಾಹಿತಿಗಾಗಿ ನೀವು 022-67819281 ಅಥವಾ 022-67819290 ಅನ್ನು ಡಯಲ್ ಮಾಡಬಹುದು. ಇದಲ್ಲದೆ, ನೀವು ಟೋಲ್-ಫ್ರೀ ಸಂಖ್ಯೆ(Toll Free Number)ಯನ್ನು ಡಯಲ್ ಮಾಡಬಹುದು - 1800-227-717.
ಸೇವಾ ತೆರಿಗೆ ವಿನಾಯಿತಿ
ಈ ಯೋಜನೆಯು ಸೇವಾ ತೆರಿಗೆ ಮತ್ತು GST ಯಿಂದ ವಿನಾಯಿತಿ ಪಡೆದಿದೆ. ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಯಾವುದೇ ಗಂಭೀರ ಕಾಯಿಲೆ ಅಥವಾ ಸಂಗಾತಿಯ ಚಿಕಿತ್ಸೆಗಾಗಿ ನೀವು ಈ ಹಣವನ್ನು ಮುಂಚಿತವಾಗಿ ಹಿಂಪಡೆಯಬಹುದು.
ಇದನ್ನೂ ಓದಿ : Arecanut Price Today: ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ
ಅಗತ್ಯ ದಾಖಲೆಗಳು
ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು ಪ್ಯಾನ್ ಕಾರ್ಡ್(Pan Card)ನ ಪ್ರತಿ, ವಿಳಾಸ ಪುರಾವೆಯ ಪ್ರತಿ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಸಾಲ ಸೌಲಭ್ಯವೂ ಲಭ್ಯವಿದೆ
ಈ ಯೋಜನೆಯಲ್ಲಿ ನಿಮಗೆ ಸಾಲ ಸೌಲಭ್ಯವೂ ಇದೆ. ಇದರಲ್ಲಿ, ನೀವು ಪಾಲಿಸಿಯ 3 ವರ್ಷಗಳ ನಂತರ PMVVY ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ಗರಿಷ್ಠ ಸಾಲದ ಮೊತ್ತವು ಖರೀದಿ ಬೆಲೆಯ 75% ಮೀರಬಾರದು. ಈ ಯೋಜನೆಯು ಸರ್ಕಾರದ ಇತರ ಪಿಂಚಣಿ ಯೋಜನೆಗಳಂತೆ ತೆರಿಗೆ ಪ್ರಯೋಜನಗಳನ್ನು ಒದಗಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.