ಬೆಂಗಳೂರು : Indian Railway Rules : ಭಾರತೀಯ ರೈಲ್ವೆಯನ್ನು ನಮ್ಮ ದೇಶದ ಜೀವನಾಡಿ ಎಂದೇ ಹೇಳಲಾಗುತ್ತದೆ. ಎಲ್ಲಾ ವರ್ಗದ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಭಾರತದಲ್ಲಿ  ಪ್ರತಿದಿನ ಸಾವಿರಾರು ರೈಲುಗಳು ಲಕ್ಷಗಟ್ಟಲೆ ಪ್ರಯಾಣಿಕರನ್ನು ತಮ್ಮ ಗಮ್ಯಸ್ಥಾನಕ್ಕೆ ತಲುಪಿಸುತ್ತವೆ. ದೂರದ ಪ್ರಯನಗಳಿಗೆ ಜನರು ಸಾಮಾನ್ಯವಾಗಿ ರೈಲು ಪ್ರಯಾಣವನ್ನೇ ಆರಿಸುತ್ತಾರೆ. ಆದರೆ ಕೆಲವೊಮ್ಮೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಹ ಪ್ರಯಾಣಿಕರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಈ ಹಿನ್ನೆಲೆಯಲ್ಲಿ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. 


COMMERCIAL BREAK
SCROLL TO CONTINUE READING

ರಾತ್ರಿ ವೇಳೆ ಮೊಬೈಲ್‌ನಲ್ಲಿ ಹಾಡುಗಳನ್ನು ಪ್ಲೇ ಮಾಡುವಂತಿಲ್ಲ  : 
ಭಾರತೀಯ ರೈಲ್ವೇ ನಿಯಮಗಳ ಪ್ರಕಾರ, ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ 10 ಗಂಟೆಯ ನಂತರ ಯಾವುದೇ ಪ್ರಯಾಣಿಕರು ಮೊಬೈಲ್ ಫೋನ್‌ನಲ್ಲಿ ಏರು ಧ್ವನಿಯಲ್ಲಿ ಮಾತನಾಡುವಂತಿಲ್ಲ. ಹೈ ವಾಲ್ಯೂಮ್  ನಲ್ಲಿ ಹಾಡು ಕೇಳುವಂತಿಲ್ಲ. ಒಬ್ಬರ ನಡವಳಿಕೆಯಿಂದ  ಸಹ ಪ್ರಯಾಣಿಕರಿಗೆ ತೊಂದರೆಯಾದಲ್ಲಿ ಅಂಥಹ ಪ್ರಯಾಣಿಕರ ವಿರುದ್ದ ಕ್ರಮ ಕೈಗೊಳ್ಳಬಹುದು.


ಇದನ್ನೂ ಓದಿ : Gold Price Today : ದುಬಾರಿಯಾಯಿತು ಚಿನ್ನ , ಬೆಳ್ಳಿ ಮಾತ್ರ ಕೊಂಚ ಅಗ್ಗ


ರಾತ್ರಿಯಲ್ಲಿ ಲೈಟ್ ಆನ್ ಮಾಡುವುದು ನಿಷೇಧ : 
ಇದಲ್ಲದೇ ರಾತ್ರಿ ರೈಲಿನಲ್ಲಿ ಪ್ರಯಾಣಿಸುವ ವೇಳೆ ನೈಟ್ ಲೈಟ್ ಹೊರತುಪಡಿಸಿ ಉಳಿದೆಲ್ಲಾ ಲೈಟ್‌ಗಳನ್ನು ಆಫ್ ಮಾಡಬೇಕಾಗುತ್ತದೆ. ಅಲ್ಲದೇ ಗುಂಪು ಗುಂಪಾಗಿ ಪ್ರಯಾಣಿಸುವ ಪ್ರಯಾಣಿಕರು ರಾತ್ರಿ ವೇಳೆ ಜೋರಾಗಿ ಮಾತನಾಡುವಂತಿಲ್ಲ. ರೈಲ್ವೆಯ ಪ್ರಕಾರ, ತಪಾಸಣೆ ಸಿಬ್ಬಂದಿ, ಆರ್‌ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಸಿಬ್ಬಂದಿ ಮತ್ತು ನಿರ್ವಹಣಾ ಸಿಬ್ಬಂದಿ ರಾತ್ರಿಯಲ್ಲಿ ಶಾಂತಿಯುತವಾಗಿ ತಮ್ಮ ಕೆಲಸ ಮಾಡುತ್ತಿರುತ್ತಾರೆ. 


ನಿರಂತರವಾಗಿ ದೂರುಗಳನ್ನು ಪಡೆಯುತ್ತಿದ್ದ  ಇಲಾಖೆ : 
ರಾತ್ರಿ ವೇಳೆ, ಕೆಲವರು ಜೋರಾಗಿ ಮಾತನಾಡುತ್ತಿರುವುದು, ಅಥವಾ ಮೊಬೈಲ್‌ನಲ್ಲಿ ಹಾಡುಗಳನ್ನು ಕೇಳುತ್ತಿರುತ್ತಾರೆ ಎಂದು ರೈಲ್ವೆ ಇಲಾಖೆಗೆ ಆಗಾಗ ದೂರು ಬರುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇಷ್ಟಾಗಿಯೂ ಪ್ರಯಾಣಿಕರು ಇನ್ನೂ ಇಂಥಹ ಸಮಸ್ಯೆಗಳನ್ನು ಎದುರಿಸಿದರೆ, ರೈಲು ಸಿಬ್ಬಂದಿಯನ್ನೇ ಅದಕ್ಕೆ ಹೊಣೆಯಾಗಿಸುವುದಾಗಿ   ಇಲಾಖೆ ಹೇಳಿದೆ. 


ಇದನ್ನೂ ಓದಿ : LIC ಯ ಈ ಪಾಲಿಸಿಯಲ್ಲಿ 4 ಸಾವಿರ ಹೂಡಿಕೆ ಮಾಡಿ, 30 ಲಕ್ಷಕ್ಕಿಂತ ಹೆಚ್ಚು ಲಾಭ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.