Indian Railways: ಭಾರತದ ಈ ರೈಲಿನಲ್ಲಿ ನೈಯಾ ಪೈಸೆ ಖರ್ಚಿಲ್ಲದೆ ಪ್ರಯಾಣಿಸಬಹುದು, 73 ವರ್ಷಗಳಿಂದ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನ

Indian Railways: ಒಂದು ವೇಳೆ ನೀವೂ ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಭಾರತದ ಒಂದು ರೈಲಿನಲ್ಲಿ ಪ್ರಯಾಣಿಸಲು ನೀವು ನೈಯಾ ಪೈಸೆ ಕೂಡ ಹಣ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲ ಕಳೆದ 73 ವರ್ಷಗಳಿಂದ ಜನರು  ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : May 22, 2022, 06:24 PM IST
  • ಭಾರತದಲ್ಲಿ ಸಂಚರಿಸುವ ಈ ರೈಲಿನಲ್ಲಿ ಉಚಿತ ಪ್ರಯಾಣ ಬೆಳೆಸಬಹುದು
  • ಕಳೆದ 73 ವರ್ಷಗಳಿಂದ ಈ ರೈಲು ಉಚಿತ ಸೇವೆ ನೀಡುತ್ತಿದೆ
  • ಇದಕ್ಕಾಗಿ ಭಾರತೀಯ ರೈಲು ಇಲಾಖೆಯ ಅನುಮತಿ ಇದಕ್ಕಿದೆ
Indian Railways: ಭಾರತದ ಈ ರೈಲಿನಲ್ಲಿ ನೈಯಾ ಪೈಸೆ ಖರ್ಚಿಲ್ಲದೆ ಪ್ರಯಾಣಿಸಬಹುದು, 73 ವರ್ಷಗಳಿಂದ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನ title=
Indian Railways

Indian Railways: ದೇಶದಲ್ಲಿ ದಿನನಿತ್ಯ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಭಾರತದಲ್ಲಿ ಸಂಚರಿಸುವ ಒಂದು ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಶುಲ್ಕವೇ ಪಾವತಿಸಬೇಕಾಗುವುದಿಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಈ ವಿಶೇಷ ರೈಲಿನ ಬಗ್ಗೆ ಇಂದು ನಾವು ಮಾಹಿತಿಯನ್ನು ಪಡೆದುಕೊಳ್ಳಲಿದ್ದೇವೆ. 

ಈ ವಿಶೇಷ ರೈಲು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಗಡಿಯಲ್ಲಿ ಸಂಚರಿಸುತ್ತದೆ. ಒಂದು ವೇಳೆ ನಿಮಗೂ ಕೂಡ  ಭಾಕ್ರಾನಂಗಲ್ ಅಣೆಕಟ್ಟನ್ನು ನೋಡಲು ಆಸೆ ಇದ್ದರೆ, ನೀವು ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಈ ರೈಲಿನಲ್ಲಿ ಪ್ರಯಾಣಿಸಲು ಹಣ ಪಾವತಿಸಬೇಕಗಿಲ್ಲ 
ಈ ರೈಲು ನಂಗಲ್ ನಿಂದ ಭಾಕ್ರಾ ಅಣೆಕಟ್ಟು ನಡುವೆ ಚಲಿಸುತ್ತದೆ. ಕಳೆದ 73 ವರ್ಷಗಳಿಂದ ಒಟ್ಟು 25 ಹಳ್ಳಿಗಳ ಜನರು ಈ ರೈಲಿನ ಮೂಲಕ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಅದು ಹೇಗೆ ಸಾಧ್ಯ?  ಅದು ಹೇಗೆ ಸಾಧ್ಯ ಎಂದು ನೀವೂ ಪ್ರಶ್ನಿಸಬಹುದು. ರೈಲ್ವೆ ಇಲಾಖೆಯಿಂದ ಈ ರೈಲಿಗೆ ವಿಶೇಷ ಅನುಮತಿ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.

ಭಾಕ್ರಾ ಅಣೆಕಟ್ಟಿನ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ರೈಲು ಓಡಿಸಲಾಗುತ್ತದೆ. ಇದರ ಮುಖ್ಯ ಉದ್ದೇಶವೆಂದರೆ ಈ ಅಣೆಕಟ್ಟನ್ನು ನಿರ್ಜಮಿಸಲು ಜನರು ಎದುರಿಸಿದ ತೊಂದರೆಗಳೇನು ಎಂಬುದನ್ನು ತಿಳಿಸುವುದಾಗಿದೆ. ಇದನ್ನು ಭಾಕ್ರಾ ಬಿಯಾಸ್ ಆಡಳಿತ ಮಂಡಳಿ ನಿರ್ವಹಿಸುತ್ತದೆ. ಪರ್ವತಗಳನ್ನು ಒಡೆದು ಈ ರೈಲಿನ ಹಳಿಗಳನ್ನು ನಿರ್ಮಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಇದನ್ನೂ ಓದಿ-Smartphone Tips: ಸ್ಮಾರ್ಟ್ ಫೋನ್ ಮೂಲಕ ಯಾರಾದರು ನಿಮ್ಮ ಬೆಹುಗಾರಿಕೆ ನಡೆಸುತಿದ್ದಾರೆಯೇ? ಈ ರೀತಿ ಸುಲಭವಾಗಿ ತಿಳಿದುಕೊಳ್ಳಿ

73 ವರ್ಷಗಳಿಂದ ಜನರು ಉಚಿತ  ಪ್ರಯಾಣಿಸುತ್ತಿದ್ದಾರೆ
ಈ ರೈಲನ್ನು 1949 ರಲ್ಲಿ ಮೊದಲ ಬಾರಿಗೆ ಓಡಿಸಲಾಗಿದೆ ಮತ್ತು ಕಳೆದ 73 ವರ್ಷಗಳಿಂದ ಜನರು ಇದರಿಂದ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ರೈಲಿನಲ್ಲಿ 25 ಹಳ್ಳಿಗಳಿಂದ ಸುಮಾರು 300 ಜನರು ದಿನನಿತ್ಯ ಪ್ರಯಾಣಿಸುತ್ತಾರೆ. ಈ ರೈಲಿನಿಂದ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ರೈಲು ನಂಗಲ್‌ನಿಂದ ಅಣೆಕಟ್ಟಿಗೆ ಚಲಿಸುತ್ತದೆ ಮತ್ತು ದಿನಕ್ಕೆ ಎರಡು ಬಾರಿ ಪ್ರಯಾಣಿಸುತ್ತದೆ. ಇದರಲ್ಲಿ ಟಿಟಿಇ ಇರುವುದಿಲ್ಲ. ಈ ಡೀಸೆಲ್ ಎಂಜಿನ್ ಚಾಲಿತ ರೈಲು ಒಂದು ದಿನದಲ್ಲಿ 50 ಲೀಟರ್ ಡೀಸೆಲ್ ಬಳಸುತ್ತದೆ. ಈ ರೈಲಿನ ಇಂಜಿನ್ ಅನ್ನು ಒಮ್ಮೆ ಪ್ರಾರಂಭಿಸಿದರೆ, ಅದು ಭಾಕ್ರಾದಿಂದ ಹಿಂತಿರುಗಿದ ನಂತರವೇ ನಿಲ್ಲಿಸಲಾಗುತ್ತದೆ.

ಇದನ್ನೂ ಓದಿ-ಇನ್ಮುಂದೆ ಮನೆಯಲ್ಲಿ ಬಿಂದಾಸ್ ಎಸಿ ಚಲಾಯಿಸಿ, ಈ ಡಿವೈಸ್ ಬಳಸಿ ವಿದ್ಯುತ್ ಬಿಲ್ ಉಳಿತಾಯ ಮಾಡಿ

ರೈಲು ಹೊರಡುವ ಸಮಯ ಯಾವುದು?
ಈ ಹಾಸ್ ರೈಲು ಬೆಳಗ್ಗೆ 7:05 ಕ್ಕೆ ನಂಗಲ್‌ನಿಂದ ಹೊರಡುತ್ತದೆ ಮತ್ತು 8:20 ರ ಸುಮಾರಿಗೆ ಭಾಕ್ರಾದಿಂದ ಹಿಂತಿರುಗುತ್ತದೆ. ಇದರ ನಂತರ ಮತ್ತೆ ಮಧ್ಯಾಹ್ನ 3:05 ಕ್ಕೆ ನಂಗಲ್‌ನಿಂದ ಹೊರಟು ಸಂಜೆ 4:20 ಕ್ಕೆ ಭಾಕ್ರಾ ಅಣೆಕಟ್ಟಿನಿಂದ ನಂಗಲ್‌ಗೆ ಹಿಂತಿರುಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News