LPG Gas Cyliner in 450 Rupees : ಜನ ಸಾಮಾನ್ಯರು ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ಹೋಗಿದ್ದಾರೆ. ಇದರಲ್ಲಿ ಗ್ಯಾಸ್ ಸಿಲಿಂಡರ್ ಕೂಡಾ ಒಂದು. ಗ್ಯಾಸ್ ಸಿಲಿಂಡರ್ ಬೆಲೆ ಕೂಡಾ ದುಬಾರಿಯಾಗಿದೆ. ಆದರೆ ಈಗ ಹೊಸ ವರ್ಷಕ್ಕೂ ಮುನ್ನವೇ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ಇನ್ನು ಮುಂದೆ ಕೇವಲ 450 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಉಜ್ವಲಾ-ಬಿಪಿಎಲ್ ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ಸರ್ಕಾರ ಈ ಉಡುಗೊರೆ ನೀಡಿದೆ. 


COMMERCIAL BREAK
SCROLL TO CONTINUE READING

ಜನವರಿ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಗ್ಗವಾಗಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಹೇಳಿದ್ದಾರೆ. ಮಹಿಳೆಯರಿಗೆ ಕೇವಲ 450 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಉಜ್ವಲ ಯೋಜನೆಯ 70 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಪ್ರಯೋಜನವಾಗಲಿದೆ. 


ಇದನ್ನೂ ಓದಿ : ಅಗ್ಗವಾಯಿತು ಅಕ್ಕಿ ಬೆಲೆ ! ಕೇವಲ 25 ರೂ.ಗೆ ಒಂದು ಕೆ.ಜಿ ಅಕ್ಕಿ ! ಇದು ಸರ್ಕಾರ ನಿಗದಿ ಪಡಿಸಿದ ಬೆಲೆ !
 
ರಾಜ್ಯ ಸರ್ಕಾರದ ಮೇಲೆ ಎಷ್ಟು ಹೊರೆ ಬೀಳಲಿದೆ? : 
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದು, ಅದನ್ನು ಈಗ ಈಡೇರಿಸಿದೆ. ಪ್ರಸ್ತುತ ಕೇಂದ್ರ ಸರ್ಕಾರ ಉಜ್ವಲ ಫಲಾನುಭವಿಗಳಿಗೆ 300 ರೂ.ಗಳನ್ನು ಸಹಾಯಧನವಾಗಿ ನೀಡುತ್ತಿದೆ. ಪ್ರಸ್ತುತ, 30 ಲಕ್ಷ ಗ್ರಾಹಕರು ಈ ವರ್ಗದ ಅಡಿಯಲ್ಲಿ ನಿಯಮಿತವಾಗಿ  ರಿಫಿಲ್ಲಿಂಗ್ ಮಾಡುತ್ತಿದ್ದಾರೆ. ಈ ರೀತಿ ನೋಡಿದರೆ ರಾಜ್ಯ ಸರ್ಕಾರದ ಮೇಲೆ ಪ್ರತಿ ತಿಂಗಳು 52 ಕೋಟಿ ರೂ. ಅಧಿಕ ಹೊರೆ ಬೀಳುತ್ತಿದೆ.


500 ರೂ.ಗೆ ಸಿಲಿಂಡರ್ ನೀಡುತ್ತಿತ್ತು ಕಾಂಗ್ರೆಸ್ ಸರಕಾರ : 
ಈ ಹಿಂದೆ, ರಾಜಸ್ಥಾನದ ಕಾಂಗ್ರೆಸ್ ಆಡಳಿತದ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರವು 22 ಡಿಸೆಂಬರ್ 2022 ರಂದು ಸಾರ್ವಜನಿಕರಿಗೆ 500 ರೂ.ಗೆ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಅದೇ ಸಮಯದಲ್ಲಿ, ಏಪ್ರಿಲ್ 2023 ರಲ್ಲಿ, ಅವರು ತಮ್ಮ ಭರವಸೆಯನ್ನು ಪೂರೈಸಿದ್ದು, 500 ರೂ.ಗೆ ಸಿಲಿಂಡರ್ ಗಳನ್ನು ನೀಡುತ್ತಿತ್ತು.  


ಇದನ್ನೂ ಓದಿ : FD Rate Hike: ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ಗ್ರಾಹಕರಿಗೆ ಎಸ್‌ಬಿ‌ಐನಿಂದ ಗುಡ್ ನ್ಯೂಸ್


33 ಕೋಟಿ ಎಲ್‌ಪಿಜಿ ಗ್ರಾಹಕರು :
ಈ ಬಗ್ಗೆ ಘೋಷಣೆ ಮಾಡಿರುವ ಮುಖ್ಯಮಂತ್ರಿ, ಉಜ್ವಲ ಕುಟುಂಬದ ಮಹಿಳೆಯರಿಗೆ ಸಹಾಯಧನ ನೀಡಲಾಗುವುದು ಎಂದು ಹೇಳಿದ್ದಾರೆ.  ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಒಲೆಯಲ್ಲಿ ಅಡುಗೆ ಮಾಡುವ ಕ್ರಮದಿಂದ ಪರಿಹಾರ ನೀಡಲಾಗಿದೆ. ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ ದೇಶದ ಸುಮಾರು 9.60 ಕೋಟಿ ಮಹಿಳೆಯರಿಗೆ ಸಂಪರ್ಕ ನೀಡಲಾಗಿದೆ. 2014ರಲ್ಲಿ ದೇಶದ ಒಟ್ಟು ಎಲ್‌ಪಿಜಿ ಗ್ರಾಹಕರು 14 ಕೋಟಿಯಾಗಿದ್ದರೆ, 2023ರಲ್ಲಿ ಈ ಸಂಖ್ಯೆ 33 ಕೋಟಿಗೆ ಏರಿಕೆಯಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.