ನವದೆಹಲಿ: ಸಾಮಾನ್ಯವಾಗಿ ಕೆಲವು ವ್ಯಕ್ತಿಗಳು ತಮ್ಮ ಬಳಿ ಇರುವ ವಿಶೇಷ ನೋಟುಗಳ ಮೂಲಕ ಮಿಲಿಯನೇರ್ ಆಗಿರುವ ಉದಾಹರಣೆಗಳನ್ನು ಕೇಳಿರಬಹುದು. ಆದರೆ ಅಂತಹದ್ದೇ ಅಪರೂಪದ ನೋಟು ನಿಮ್ಮ ಬಳಿ ಇದ್ದರೂ ನೀವು ಅದರ ಲಾಭ ಪಡೆಯುವುದನ್ನು ಮರೆತಿರಬಹುದು ಅಥವಾ ಅವುಗಳ ಬಗ್ಗೆ ನಿಮಗೆ ತಿಳಿಯದೇ ಇರಬಹುದು. ಯಾವುದೇ ಒಂದು ನೋಟು ಹೇಗೆ ಅತ್ಯಂತ ಅಪರೂಪದ ನೋಟಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಮನೆಯಲ್ಲಿ ಇರಿಸಲಾದ ನೋಟುಗಳು ಬಹಳ ಮೌಲ್ಯಯುತವಾಗಬಹುದು:
ಯಾರೊಂದಿಗಾದರೂ ನಾವು ಹಣದ ವಹಿವಾಟು ನಡೆಸುವಾಗ ನೋಟು ಹರಿದಿದೆಯೇ ಅಥವಾ ಅದರಲ್ಲಿ ಏನಾದರೂ ದೋಷ (ಅಂದರೆ ಬಣ್ಣವಾಗಿರುವುದು, ಕಲೆಯಾಗಿರುವುದು) ಇದೆಯೇ ಎಂದು ನಾವು ನೋಡುತ್ತೇವೆ. ಆದರೆ ಅದರ ಸರಣಿಯತ್ತ ಗಮನ ಹರಿಸುವುದಿಲ್ಲ. ಕೆಲವು ಜನರು ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಸಂಗ್ರಹಿಸಲು (Coins Collection) ಇಷ್ಟಪಡುತ್ತಾರೆ. ಆದರೆ ಅವರ ಹವ್ಯಾಸವು ತಮ್ಮ ಸಂಪತ್ತನ್ನು ಹೆಚ್ಚಿಸಬಲ್ಲದು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಯಾವುದೇ ಸಣ್ಣ ಅಥವಾ ದೊಡ್ಡ ನೋಟಿನ ನೈಜ ದರವನ್ನು  (Rare Notes Price) ಹೇಗೆ ತಿಳಿಯುವುದು.


ಇದನ್ನೂ ಓದಿ- GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ


ಕೆಲವು ಸಂಖ್ಯೆಗಳಿಗೆ ಭಾರಿ ಬೇಡಿಕೆ:
ಕೆಲವು ನೋಟುಗಳು ವಿಶೇಷ ಸಂಖ್ಯೆಯ ಕಾರಣದಿಂದಾಗಿ ವಿಶೇಷವಾಗುತ್ತವೆ, ಕೆಲವು ರಾಜ್ಯಪಾಲರ ಸಹಿ ಅಥವಾ ನಿರ್ದಿಷ್ಟ ವರ್ಷದ ಕಾರಣ ವಿಶೇಷವಾಗಿರುತ್ತದೆ. ಐಷಾರಾಮಿ ಸಂಖ್ಯೆ ನೋಟುಗಳಿಂದ (Luxury Number Notes) ಹಿಡಿದು 786 ಸಂಖ್ಯೆಗಳವರೆಗಿನ ನೋಟುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 888888 ಮತ್ತು 123456 ಸರಣಿ ನೋಟುಗಳು ಸೇರಿವೆ. ರಾಜ್ಯಪಾಲರ ಸಹಿಯಿಂದಾಗಿ ಕೆಲವು ನೋಟುಗಳು ವಿಶೇಷವಾಗಿರುತ್ತವೆ ಮತ್ತು ಅವುಗಳ ಮೌಲ್ಯವು ಹೆಚ್ಚಾಗುತ್ತದೆ. ಸ್ವಾತಂತ್ರ್ಯ ಪೂರ್ವದ ನೋಟುಗಳು ಅಥವಾ ನಾಣ್ಯಗಳನ್ನು (Antique Collection) ಸಂಗ್ರಹಿಸಲು ಅನೇಕ ಜನರು ಇಷ್ಟಪಡುತ್ತಾರೆ.


ಹುಟ್ಟಿದ ದಿನಾಂಕವೂ ವಿಶೇಷವಾಗಿದೆ:
ಉದಾಹರಣೆಗೆ ನಿಮ್ಮ ಬಳಿ 140177 ಎಂಬ ನೋಟು ಇದ್ದರೆ, ಅದು ಯಾವುದೇ ವ್ಯಕ್ತಿಗೆ ವಿಶೇಷವಾಗಬಹುದು. ನೀವು ಎಚ್ಚರಿಕೆಯಿಂದ ನೋಡಿದರೆ, ಅದು 14 ಜನವರಿ 1977 ರ ದಿನಾಂಕವನ್ನು ಹೇಳುತ್ತಿದೆ. ಅದು ಯಾರೊಬ್ಬರ ಜನ್ಮ ದಿನಾಂಕ, ವಾರ್ಷಿಕೋತ್ಸವ ಅಥವಾ ಇನ್ನಾವುದೇ ವಿಶೇಷ ದಿನವಾಗಿರಬಹುದು. ಅಂತಹ ಸರಣಿಗಳಿಗೆ ನೋಟುಗಳಿಗೆ (Special Series Notes) ಲಕ್ಷಾಂತರ ರೂಪಾಯಿಗಳ ಮೌಲ್ಯವನ್ನು ನೀಡಿ ಖರೀದಿಸಲು ಕೆಲವರು ಸಿದ್ಧರಿರುತ್ತಾರೆ.


ಇದನ್ನೂ ಓದಿ - Aadhaar Card alert : ಇನ್ಮುಂದೆ Aadhar Card​ ಕಳೆದುಕೊಂಡರೆ ಮತ್ತೆ ಪ್ರಿಂಟ್ ಕೊಡಲ್ಲ!


100 ರ ಬದಲು 16 ಸಾವಿರ ರೂಪಾಯಿಗಳನ್ನು ಪಡೆಯಿರಿ:
ಗವರ್ನರ್ ಬಿ. ರಾಮರಾವ್  (Governor B Rama Rao) ಅವರು ಸಹಿ ಮಾಡಿರುವ 100 ರೂಪಾಯಿಗಳ ಹಳೆಯ ನೋಟನ್ನು coinbazzar.com ನಲ್ಲಿ 16000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, 1957 ರಲ್ಲಿ ಗವರ್ನರ್ ಎಚ್.ಎಂ.ಪಟೇಲ್ (Governor HM Patel) ಅವರು ಸಹಿ ಮಾಡಿರುವ 1 ರೂಪಾಯಿ ನೋಟುಗಳ ಕಟ್ಟು 45 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಈ ನೋಟಿನ ಸರಣಿ ಸಂಖ್ಯೆ 123456 ಆಗಿರಬೇಕು. ಇದಲ್ಲದೆ ಹಳೆಯ 500 ರೂಪಾಯಿ ನೋಟುಗಳ ಪ್ಯಾಕೆಟ್ (ಇದು ಗವರ್ನರ್ ಎಸ್.ವೆಂಕಟರಮಣರ ಸಹಿಯನ್ನು ಹೊಂದಿರಬೇಕು) ಆನ್‌ಲೈನ್‌ನಲ್ಲಿ 1.55 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. ಈ ನೋಟುಗಳ ಸರಣಿ ಸಂಖ್ಯೆ 1616 ರಿಂದ ಪ್ರಾರಂಭವಾಗಿರಬೇಕು ಎಂಬುದನ್ನು ನೆನಪಿಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.