Ratan Tata Dog : ರತನ್ ಟಾಟಾ ಅವರ ಮುದ್ದಿನ ನಾಯಿಯ ಹೆಸರು ಗೋವಾ. ಟಾಟಾ ಗ್ರೂಪ್‌ನ ಪ್ರಧಾನ ಕಚೇರಿಯಾದ ಬಾಂಬೆ ಹೌಸ್‌ನಲ್ಲಿಯೇ ಈ ನಾಯಿಯ ವಾಸ. ನಾಯಿ ಗೋವಾ ಜೊತೆಗೆ ರತನ್ ಟಾಟಾ ಆತ್ಮೀಯ ಒಡನಾಟ ಹೊಂದಿದ್ದರು.ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಕೂಡಾ ಗೋವಾ ಪಾಲ್ಗೊಂಡಿತ್ತು.


COMMERCIAL BREAK
SCROLL TO CONTINUE READING

ರತನ್ ಟಾಟಾ ಸಾವಿನ ಮೂರು ದಿನಗಳ ಬಳಿಕ ಟಾಟಾ ಮುದ್ದಿನ ನಾಯಿ ಗೋವಾ ಸಾವನ್ನಪ್ಪಿದೆ ಎಂಬ ಸಂದೇಶವೊಂದು ವಾಟ್ಸಾಪ್‌ನಲ್ಲಿ ಹರಡುತ್ತಿದೆ. ರತನ್ ಟಾಟಾ ಸಾವಿನ ದುಃಖದಿಂದಲೇ ನಾಯಿ ಕೂಡಾ ಮೃತಪಟ್ಟಿದೆ ಎಂದು ಕೂಡಾ ಹೇಳಲಾಗುತ್ತಿದೆ. ಇದೀಗ ಮುಂಬೈ ಪೊಲೀಸ್‌ನ ಹಿರಿಯ ಇನ್ಸ್‌ಪೆಕ್ಟರ್ ಸುಧೀರ್ ಕುಡಾಲ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಾಟ್ಸಾಪ್ ಸಂದೇಶದ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಈ ಮೆಸೇಜ್ ಶುದ್ದ ಸುಳ್ಳು ಎಂದಿದ್ದಾರೆ. ರತನ್ ಟಾಟಾ ಅವರ ನಾಯಿ ಗೋವಾ ಜೀವಂತವಾಗಿದೆ ಮತ್ತು  ಆರೋಗ್ಯಕರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 


ಇದನ್ನೂ ಓದಿ : ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!


ಪ್ರಾಣಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಇನ್ಸ್‌ಪೆಕ್ಟರ್ ಕುಡಾಲ್ಕರ್ ಗೋವಾ ಸಾವಿನ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಗೋವಾ ಜೀವಂತವಾಗಿರುವ ಬಗ್ಗೆ ಕುಡಾಲ್ಕರ್  ಟಾಟಾ ಅವರ ಆಪ್ತ ಸ್ನೇಹಿತ ಶಂತನು ನಾಯ್ಡು ಅವರೊಂದಿಗೆ ಮಾತನಾಡಿ ದೃಢಪಡಿಸಿಕೊಂಡಿದ್ದಾರೆ. 


 



ಕುಡಾಲ್ಕರ್ ಅವರು ಪ್ರಾಣಿಗಳ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಕ್ಕಾಗಿ ಪೇಟಾದಂತಹ ಸಂಸ್ಥೆಗಳಿಂದ ಮನ್ನಣೆಯನ್ನೂ ಪಡೆದಿದ್ದಾರೆ. ಅವರು ಶಾಂತನು ನಾಯ್ಡು ಅವರೊಂದಿಗೆ ಮಾಡಿರುವ ಮೆಸೇಜ್ ನ ಸ್ಕ್ರೀನ್‌ಶಾಟ್‌ಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಮೆಗಾ ಅಪ್ಡೇಟ್! ಶೂನ್ಯವಾಗುವುದೇ ತುಟ್ಟಿಭತ್ಯೆ? ಹಬ್ಬದ ಹೊತ್ತಿನಲ್ಲಿ ಹುಸಿಯಾಗುವುದೇ ಡಿಎ ಹೆಚ್ಚಳದ ನಿರೀಕ್ಷೆ


ಇನ್ಸ್ ಪೆಕ್ಟರ್ ಹೇಳಿದ್ದೇನು ?:
ವದಂತಿಗಳು ಮತ್ತು ಅಪಪ್ರಚಾರಗಳಿಗೆ ಗಮನ ಕೊಡಬೇಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದನ್ನು ಪರಿಶೀಲಿಸುವುದು ಬಹಳ ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಸುದ್ದಿಗಳನ್ನು ಕಣ್ಣು ಮುಚ್ಚಿ ನಂಬುವುದಕ್ಕೆ ಮುನ್ನ  ಒಮ್ಮೆ ಪರಿಶೀಲಿಸಿ ನೋಡಿಕೊಳ್ಳುವಂತೆ ವಿನಂತಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ