Free Ration Scheme: ಪಡಿತರ ಚೀಟಿದಾರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕರ್ತವಾಗಿದೆ. ದೇಶದಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಉಚಿತ ಪಡಿತರ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದೀಗ ಉಚಿತ ಪಡಿತರ ಪಡೆಯುವವರಿಗೆ UIDAI ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಸರ್ಕಾರದ ಈ ನಿರ್ಧಾರ ದೇಶದ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆ. ಹೌದು, ಬನ್ನಿ ಹಾಗಾದರೆ ಯಾವ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇನ್ಮುಂದೆ ಆಧಾರ್ ಮೂಲಕ ಪಡಿತರ ಪಡೆಯಬಹುದು
ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಆಧಾರ್ ಕಾರ್ಡ್ ಜಾರಿಗೊಳಿಸುವ ಸಂಸ್ಥೆ, ಇನ್ಮುಂದೆ ನೀವು ದೇಶದ ಯಾವುದೇ ಸ್ಥಳದಲ್ಲಿ ಆಧಾರ್ ಮೂಲಕ ಉಚಿತ ಪಡಿತರವನ್ನು ಪಡೆಯಬಹುದು ಎಂದು ಹೇಳಿದೆ. ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ ಎಂದು ಅದು ಹೇಳಿದೆ.


ಇದನ್ನೂ ಓದಿ-Wedding Loan: ಮದುವೆಗೆ ಹಣವಿಲ್ಲದೇ ಚಿಂತೆಗೀಡಾಗಿದ್ದೀರಾ? ಇಲ್ಲಿದೆ ಸರಳ ವಿಧಾನ


ಟ್ವೀಟ್ ಮೂಲಕ ಮಾಹಿತಿ 
ಇನ್ಮುಂದೆ ಕೇವಲ ಆಧಾರ್ ಮೂಲಕವೆ ನೀವು ದೇಶದ ಯಾವುದೇ ಭಾಗದಲ್ಲಿ ಪಡಿತರ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಯುಐಡಿಎಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಆದಾಗ್ಯೂ, ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿದಾಗ ಮಾತ್ರ ನೀವು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು. ಇದು ಸಂಭವಿಸದಿದ್ದರೆ ನೀವು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಲ್ಲದೇ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ 1947ಕ್ಕೆ ನೀವು ಸಂಪರ್ಕಿಸಬಹುದು.


ಇದನ್ನೂ ಓದಿ-ಕೇವಲ 3,999 ರೂಪಾಯಿಗೆ ಮನೆಗೆ ತನ್ನಿ ಹೋಂಡಾ ಬೈಕ್-ಸ್ಕೂಟರ್ , ಜೊತೆಗೆ ಸಿಗಲಿದೆ 5000 ರೂ. ಕ್ಯಾಶ್‌ಬ್ಯಾಕ್


21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತದೆ
ಅಂತ್ಯೋದಯ ಪಡಿತರ ಚೀಟಿದಾರರಿಗೆ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಆದರೆ, ಸಾಮಾನ್ಯ ಪಡಿತರ ಚೀಟಿದಾರರಿಗೆ 2 ಕೆಜಿ ಗೋಧಿ ಮತ್ತು 3 ಕೆಜಿ ಅಕ್ಕಿ ಮಾತ್ರ ಸಿಗುತ್ತದೆ. ಆದರೆ, ಈ ಬಾರಿ ಕಾರ್ಡ್ ಧಾರಕರು ಪ್ರತಿ ಕೆ.ಜಿ ಗೋಧಿಗೆ 2 ರೂ. ಮತ್ತು ಪ್ರತಿ ಕೆ.ಜಿ ಅಕ್ಕಿಗೆ 3 ರೂ. ಪಾವತಿಸಬೇಕಾಗಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.