Wedding Loan: ಮದುವೆಗೆ ಹಣವಿಲ್ಲದೇ ಚಿಂತೆಗೀಡಾಗಿದ್ದೀರಾ? ಇಲ್ಲಿದೆ ಸರಳ ವಿಧಾನ

Personal Loan: ಭಾರತದಲ್ಲಿ ಮದುವೆಯ ಬಜೆಟ್ ಸಾಮಾನ್ಯವಾಗಿ ಲಕ್ಷಗಟ್ಟಲೇ ಇರುತ್ತದೆ. ಅದೇ ಸಮಯದಲ್ಲಿ, ಅನೇಕ ಜನರ ಬಜೆಟ್ ಸಹ ಕೋಟಿಗಳನ್ನು ತಲುಪುತ್ತದೆ. ಆದರೆ, ಕೆಲವರು ಬೇರೆಯವರಿಂದ ಸಾಲ ಪಡೆದು ಮದುವೆಯ ಕಾರ್ಯ ನಡೆಸಬೇಕಾಗುತ್ತದೆ. ನಿಮಗೂ ಮದುವೆಗೆ ಹಣದ ಕೊರತೆಯಿದ್ದರೆ ಚಿಂತಿಸಬೇಕಿಲ್ಲ. ಇದಕ್ಕಾಗಿ ಮದುವೆ ಸಾಲ ತೆಗೆದುಕೊಳ್ಳಬಹುದು.

Written by - Chetana Devarmani | Last Updated : Nov 21, 2022, 03:49 PM IST
  • ಭಾರತದಲ್ಲಿ ಮದುವೆಯನ್ನು ದೊಡ್ಡ ಸಂಪ್ರದಾಯವಾಗಿ ನೋಡಲಾಗುತ್ತದೆ
  • ಜನರು ಮದುವೆಗೆ ಹಣದ ಕೊರತೆ ಇದ್ದಾಗ ತುಂಬಾ ಚಿಂತೆಗೀಡಾಗುತ್ತಾರೆ
  • ಮದುವೆಗೆ ಹಣವಿಲ್ಲದೇ ಚಿಂತೆಗೀಡಾಗಿದ್ದೀರಾ? ಇಲ್ಲಿದೆ ಸರಳ ವಿಧಾನ
Wedding Loan: ಮದುವೆಗೆ ಹಣವಿಲ್ಲದೇ ಚಿಂತೆಗೀಡಾಗಿದ್ದೀರಾ? ಇಲ್ಲಿದೆ ಸರಳ ವಿಧಾನ title=
ಮದುವೆ

Personal Loan: ಮದುವೆಯ ಸೀಸನ್ ಶುರುವಾಗಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಲಕ್ಷ ಲಕ್ಷ ಮದುವೆಗಳು ನಡೆಯಲಿವೆ. ಭಾರತದಲ್ಲಿ ಮದುವೆಯನ್ನು ದೊಡ್ಡ ಸಂಪ್ರದಾಯವಾಗಿ ನೋಡಲಾಗುತ್ತದೆ. ಮದುವೆಯನ್ನು ಬಹಳ ವೈಭವದಿಂದ ಮಾಡಲಾಗುತ್ತದೆ. ಭಾರತದಲ್ಲಿ, ಮದುವೆಗಳಲ್ಲಿ ಹಣವು ನೀರಿನಂತೆ ಖರ್ಚು ಮಾಡಲಾಗುತ್ತದೆ. ಮದುವೆಗೆ ಹಣ ಹೊಂದಿಸಲು ಎಷ್ಟೋ ಜನ ಪರದಾಡುತ್ತಾರೆ. ಜನರು ಮದುವೆಗೆ ಹಣದ ಕೊರತೆ ಇದ್ದಾಗ ತುಂಬಾ ಚಿಂತೆಗೀಡಾಗುತ್ತಾರೆ. 

ಭಾರತದಲ್ಲಿ ಮದುವೆಯ ಬಜೆಟ್ ಸಾಮಾನ್ಯವಾಗಿ ಲಕ್ಷಗಟ್ಟಲೇ ಇರುತ್ತದೆ. ಅದೇ ಸಮಯದಲ್ಲಿ, ಅನೇಕ ಜನರ ಬಜೆಟ್ ಸಹ ಕೋಟಿಗಳನ್ನು ತಲುಪುತ್ತದೆ. ಆದರೆ, ಕೆಲವರು ಬೇರೆಯವರಿಂದ ಸಾಲ ಪಡೆದು ಮದುವೆಯ ಕಾರ್ಯ ನಡೆಸಬೇಕಾಗುತ್ತದೆ. ನಿಮಗೂ ಮದುವೆಗೆ ಹಣದ ಕೊರತೆಯಿದ್ದರೆ ಚಿಂತಿಸಬೇಕಿಲ್ಲ. ಇದಕ್ಕಾಗಿ ಮದುವೆ ಸಾಲ ತೆಗೆದುಕೊಳ್ಳಬಹುದು.

ಇದನ್ನೂ ಓದಿ : ರೇಷನ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ: ಇನ್ಮುಂದೆ ಆ ಎಲ್ಲಾ ಕಾರ್ಡ್ ಗಳು ರದ್ದು!

ನೀವು ಭಾರತದಲ್ಲಿ ಮದುವೆಯಾಗುತ್ತಿದ್ದರೆ, ಬ್ಯಾಂಕ್‌ಗಳಿಂದ ಮದುವೆ ಸಾಲವನ್ನು ತೆಗೆದುಕೊಳ್ಳಬಹುದು. ಮದುವೆಯ ಸಾಲದ ಸಹಾಯದಿಂದ ಮದುವೆಗೆ ಅಗತ್ಯವಾದ ಖರ್ಚುಗಳನ್ನು ಹೊಂದಿಸಬಹುದು. ಅನೇಕ ಸಾಲದಾತರು ವೈಯಕ್ತಿಕ ಸಾಲಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಿದ್ದಾರೆ. ಇವುಗಳಲ್ಲಿ ಮದುವೆಯ ವೈಯಕ್ತಿಕ ಸಾಲವೂ ಸೇರಿದೆ. 

ಮದುವೆಗಳು ದುಬಾರಿಯಾಗಬಹುದು. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಸ್ವಂತ ಹಣದಿಂದ ಮದುವೆ ಆಗಲು ಸಾಧ್ಯವಾಗದಿರಬಹುದು. ನಿಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಭರಿಸಲು ಮದುವೆ ಸಾಲವು ನಿಮಗೆ ಸಹಾಯ ಮಾಡುತ್ತದೆ. ಇದರ ಮೂಲಕ ಪಾರ್ಟಿ ಹಾಲ್‌ ಶುಲ್ಕಗಳು, ಆಭರಣ ಖರೀದಿ ವೆಚ್ಚಗಳು, ಅಡುಗೆ ವೆಚ್ಚಗಳು ಇತ್ಯಾದಿಗಳನ್ನು ನೀವು ಸರಿ ಹೊಂದಿಸಬಹುದು.

ಇದನ್ನೂ ಓದಿ : ಲವಂಗದ ಜೊತೆ ಈ ವಸ್ತು ಸುಟ್ಟರೆ ಇಂತಹ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ!

ಮತ್ತೊಂದೆಡೆ, ನೀವು ಮದುವೆಯ ಸಾಲದ ಅಗತ್ಯವನ್ನು ಹೊಂದಿದ್ದರೆ ಯಾವ ಬ್ಯಾಂಕ್‌ಗಳು ಮದುವೆಯ ಸಾಲಗಳನ್ನು ನೀಡುತ್ತಿವೆ ಎಂಬ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು ಅಥವಾ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ವಿವಾಹ ಸಾಲಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News