Standards For Ration Card: ಪಡಿತರ ಚೀಟಿ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಸರ್ಕಾರ ಉಚಿತ ಪಡಿತರ ಅವಧಿಯನ್ನು ವಿಸ್ತರಿಸಿದೆ. ಈ ನಡುವೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಪಡಿತರ ಚೀಟಿ ನಿಯಮಗಳಲ್ಲಿ ಬದಲಾವಣೆ ತರುತ್ತಿದೆ ಎನ್ನಲಾಗಿದೆ. ಸರಕಾರಿ ಪಡಿತರ ಅಂಗಡಿಗಳಿಂದ ಪಡಿತರ ಪಡೆಯುವ ಅರ್ಹರಿಗೆ ನಿಗದಿಪಡಿಸಿರುವ ಮಾನದಂಡದಲ್ಲಿ ಬದಲಾವಣೆಯಾಗಿದೆ ಎನ್ನಲಾಗಿದೆ. ಹೊಸ ಮಾನದಂಡದ ಕರಡು ಈಗ ಬಹುತೇಕ ಸಿದ್ಧವಾಗಿದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನೂ ಕೂಡ ನಡೆಸಲಾಗಿದೆ ಎನ್ನಲಾಗಿದೆ. ಹೊಸ ನಿಬಂಧನೆಯಲ್ಲಿ ಎನಿರಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಶ್ರೀಮಂತರೂ ಲಾಭ ಪಡೆಯುತ್ತಿದ್ದಾರೆ
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಪ್ರಸ್ತುತ ದೇಶಾದ್ಯಂತ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಆರ್ಥಿಕವಾಗಿ ಸಮೃದ್ಧವಾಗಿರುವ ಅನೇಕ ಜನರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ವಿತರಣಾ ಸಚಿವಾಲಯವು ಮಾನದಂಡಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ವಾಸ್ತವದಲ್ಲಿ, ಇದೀಗ ಹೊಸ ಮಾನದಂಡವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಾಗುವುದಾಗಿದ್ದು, ಇದರಿಂದ ಯಾವುದೇ ರೀತಿಯ ಅವ್ಯವಸ್ಥೆಯನ್ನು ತಡೆಯುವುದಾಗಿದೆ.


ಇದನ್ನೂ ಓದಿ-Business Idea: ಸ್ವಂತ ವ್ಯವಹಾರ ಆರಂಭಿಸಿ ಕೈತುಂಬಾ ಹಣಗಳಿಕೆ ಮಾಡಬೇಕೆ? ಇಲ್ಲಿದೆ ಹೊಚ್ಚ ಹೊಸ ಬಿಸಿನೆಸ್ ಐಡಿಯಾ

ಏಕೆ ಈ ಬದಲಾವಣೆಗಳು? 
ಈ ನಿಟ್ಟಿನಲ್ಲಿ ಗುಣಮಟ್ಟ ಬದಲಾವಣೆ ಕುರಿತು ರಾಜ್ಯಗಳೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ತಿಳಿಸಿದೆ. ರಾಜ್ಯಗಳು ನೀಡುವ ಸಲಹೆಗಳನ್ನು ಅಳವಡಿಸಿಕೊಂಡು, ಹೊಸ ಮಾನದಂಡಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಮಾನದಂಡಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಹೊಸ ಮಾನದಂಡದ ಅನುಷ್ಠಾನದ ನಂತರ, ಅರ್ಹ ವ್ಯಕ್ತಿಗಳು ಮಾತ್ರ ಪಡಿತರ ಪ್ರಯೋಜನ ಪಡೆಯಲಿದ್ದಾರೆ, ಇದರಿಂದ ಅನರ್ಹರು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಗತ್ಯವಿರುವವರನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಇಲಾಖೆ ಹೇಳಿದೆ.


ಇದನ್ನೂ ಓದಿ-Jio-Airtel ಬೆವರಿಳಿಸಿದ BSNL ಪ್ಲಾನ್! ಈ ಅದ್ಭುತ ಲಾಭಗಳು ಯಾವ ಯೋಜನೆಯಲ್ಲೂ ಸಿಗುತ್ತಿಲ್ಲ

ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಇದುವರೆಗೆ 'ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ (ONORC) ಯೋಜನೆ'ಯನ್ನು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ. ಕೋಟಿಗಟ್ಟಲೆ ಫಲಾನುಭವಿಗಳು ಅಂದರೆ NFSA ಅಡಿಯಲ್ಲಿ ಬರುವ ಜನಸಂಖ್ಯೆಯ ಶೇ. 86 ರಷ್ಟು ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು 1.5 ಕೋಟಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವ ಮೂಲಕ ಪ್ರಯೋಜನ ಪಡೆಯುತ್ತಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.