Business Idea: ಸ್ವಂತ ವ್ಯವಹಾರ ಆರಂಭಿಸಿ ಕೈತುಂಬಾ ಹಣಗಳಿಕೆ ಮಾಡಬೇಕೆ? ಇಲ್ಲಿದೆ ಹೊಚ್ಚ ಹೊಸ ಬಿಸಿನೆಸ್ ಐಡಿಯಾ

Paper Napkin Manufacturing Business Details: ಕೊರೊನಾ ಅವಧಿಯ ನಂತರ ಕೆಲ ವಸ್ತುಗಳಿಗೆ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಅವುಗಳಲ್ಲಿ ಪೇಪರ್ ನ್ಯಾಪ್ಕಿನ್ ಕೂಡ ಒಂದು.  

Written by - Nitin Tabib | Last Updated : Apr 9, 2022, 08:52 PM IST
  • ಸ್ವಂತ ವ್ಯವಹಾರ ಆರಂಭಿಸುವ ಯೋಜನೆ ಇದೆಯೇ?
  • ಇಲ್ಲಿದೆ ನಿಮಗಾಗಿ ಒಂದು ಹೊಚ್ಚ ಹೊಸ ಬಿಸಿನೆಸ್ ಪರಿಕಲ್ಪನೆ
  • ಇದಕ್ಕಾಗಿ ಸರ್ಕಾರ ಕೂಡ ನಿಮಗೆ ಧನಸಹಾಯ ಒದಗಿಸುತ್ತದೆ
Business Idea: ಸ್ವಂತ ವ್ಯವಹಾರ ಆರಂಭಿಸಿ ಕೈತುಂಬಾ ಹಣಗಳಿಕೆ ಮಾಡಬೇಕೆ? ಇಲ್ಲಿದೆ ಹೊಚ್ಚ ಹೊಸ ಬಿಸಿನೆಸ್ ಐಡಿಯಾ  title=
Business Idea

Paper Napkin Manufacturing Business Details: ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಯೋಚಿಸುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಜನರು ಸಾಕಷ್ಟು ಗಳಿಕೆ ಮಾಡುತ್ತಿರುವ ಹಲವಾರು ರೀತಿಯ ವ್ಯಾಪಾರಗಳಿವೆ. ಕರೋನಾ ಅವಧಿಯಲ್ಲಿ ಕೆಲಸ ಕಳೆದುಕೊಂಡ ಅನೇಕ ಜನರು ಈ ಹಿನ್ನಡೆಯ ನಂತರ ತಮ್ಮ ಸ್ವಂತ ವ್ಯಾಪಾರವನ್ನು ಮಾಡಲು ಆರಂಭಿಸಿದ್ದಾರೆ. ಇವರಲ್ಲಿ ಕೆಲವರು ಯಶಸ್ವಿಯಾದರೆ, ಕೆಲವರು ಸೂಕ್ತ ಮಾಹಿತಿಯ ಕೊರತೆಯ ಹಿನ್ನೆಲೆ ತಮ್ಮ ವ್ಯಾಪಾರವನ್ನು (Business News In Kannada) ಸ್ಥಗಿತಗೊಳಿಸಿದ್ದಾರೆ.

ಕೊರೊನಾ ಅವಧಿಯ ನಂತರ ಕೆಲ ವಸ್ತುಗಳಿಗೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಗಿದೆ. ಅವುಗಳಲ್ಲಿ ಪೇಪರ್ ನ್ಯಾಪ್ಕಿನ್ ಕೂಡ ಒಂದು. ಪ್ರಸ್ತುತ ಜನರು ಮೊದಲಿಗಿಂತ ಸ್ವಚ್ಛತೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೀಗಾಗಿ ಪೇಪರ್ ನ್ಯಾಪ್ಕಿನ್‌ಗಳ ಅಗತ್ಯವೂ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಉತ್ಪನ್ನವನ್ನು ತಯಾರಿಸುವ ಕಂಪನಿಗಳು ಇದರಿಂದ ಸಾಕಷ್ಟು ಲಾಭವನ್ನು ಗಳಿಕೆ ಮಾಡುತ್ತಿವೆ. ಇಂದಿನ ಜೀವನಶೈಲಿಯಲ್ಲಿ ಟಿಶ್ಯೂ ಪೇಪರ್ ಅಂದರೆ ನ್ಯಾಪ್ಕಿನ್ ಬಳಕೆ ಸಾಮಾನ್ಯವಾಗಿದೆ.

ಇದನ್ನೂ ಓದಿ-ಶೀಘ್ರದಲ್ಲಿಯೇ ಬರಲಿದೆ Maruti Suzuki Ertiga ಹೊಸ ಅವತಾರ, ಕೇವಲ 11 ಸಾವಿರ ನೀಡಿ ಬುಕ್ ಮಾಡಬಹುದು

ಟಿಶ್ಯೂ ಪೇಪರ್ ವ್ಯಾಪಾರ ಆರಂಭಿಸಬಹುದು
ಟಿಶ್ಯೂ ಪೇಪರ್‌ಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಈ ವ್ಯವಹಾರದಲ್ಲಿ ಉತ್ತಮ ವ್ಯಾಪ್ತಿ ಇದೆ. ಇಂದು ಈ ವ್ಯಾಪಾರವು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ನೀವು ಸಹ ವ್ಯಾಪಾರ ಮಾಡುವ ಆಲೋಚನೆಯಲ್ಲಿದ್ದರೆ, ಕಾಗದದ ಕರವಸ್ತ್ರದ ವ್ಯಾಪಾರವು ಒಂದು ಉತ್ತಮ ಆಯ್ಕೆಯಾಗಿದೆ. ಈ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ನೀವು ಉತ್ತಮ ಹಣ ಗಳಿಕೆ ಮಾಡಬಹುದು. ಇದಲ್ಲದೆ, ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಸರ್ಕಾರದ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.

ಇದನ್ನೂ ಓದಿ-Jio-Airtel ಬೆವರಿಳಿಸಿದ BSNL ಪ್ಲಾನ್! ಈ ಅದ್ಭುತ ಲಾಭಗಳು ಯಾವ ಯೋಜನೆಯಲ್ಲೂ ಸಿಗುತ್ತಿಲ್ಲ

ಪ್ರಾರಂಭಿಸಲು ನಿಮಗೆ ತುಂಬಾ ಹಣ ಬೇಕು
ಈ ವ್ಯವಹಾರವನ್ನು ಆರಂಭಿಸಲು, ನೀವು ಸುಮಾರು 4.40 ಲಕ್ಷ ರೂಪಾಯಿಗಳನ್ನು ಯಂತ್ರೋಪಕರಣಗಳಿಗೆ ಖರ್ಚು ಮಾಡಬೇಕಾಗುತ್ತದೆ, ಇದು ಒಂದು ಬಾರಿ ಇನ್ವೆಸ್ಟ್ಮೆಂಟ್ ಆಗಿದೆ. ಇದೇ ವೇಳೆ, ನಾವು ಕಚ್ಚಾ ವಸ್ತುಗಳ ಬಗ್ಗೆ ಹೇಳುವುದಾದರೆ, ಅದಕ್ಕೂ ಕೂಡ 7.13 ಲಕ್ಷ ರೂ. ಬೇಕಾಗುತ್ತದೆ. ನೀವು ಇತರ ವೆಚ್ಚಗಳ ಬಗ್ಗೆ ಹೇಳುವುದಾದರೆ, ಸಾರಿಗೆ, ಉಪಭೋಗ್ಯ, ದೂರವಾಣಿ, ಸ್ಟೇಷನರಿ, ನಿರ್ವಹಣೆ, ವಿದ್ಯುತ್ ಇತ್ಯಾದಿಗಳನ್ನು ಒಳಗೊಂಡಂತೆ ನೀವು ಮೊದಲ ಬಾರಿಗೆ ಸುಮಾರು 11 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News